ಮುಖ್ಯ ಸುದ್ದಿ
ಗ್ರಾಮ ಆರೋಗ್ಯ ಸಮಿತಿ ಸದಸ್ಯರಿಗೆ ತರಬೇತಿ | ಜಾಗೃತಿ ಮೂಡಿಸಲು ಆಂದೋಲನ

CHITRADURGA NEWS | 23 FEBRUARY 2024
ಚಿತ್ರದುರ್ಗ: ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಸದಸ್ಯರಿಗೆ ಗ್ರಾಮ ಆರೋಗ್ಯ ಸಮಿತಿಗಳ ಸದಸ್ಯರಿಗೆ ತರಬೇತಿ ನೀಡಲಾಯಿತು.
ಜಿಆರ್ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೀತಾಂಜಲಿ ಮಾತನಾಡಿ, ಅಪೌಷ್ಟಿಕತೆ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಅಪೌಷ್ಟಿಕತೆಗೆ ಒಳಗಾದ ಜನರು ರೋಗಗಳಿಂದ ಮುಕ್ತವಾಗುವ ಸಾಮರ್ಥ್ಯ ಕಳೆದುಕೊಂಡಿರುವ ಕಾರಣಗಳಿಂದ ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದರು.
ಇದನ್ನೂ ಓದಿ: ಜಗದೊಡೆಯ ತಿಪ್ಪೇಶನ ಮಹಾರಥೋತ್ಸವ ವೈಭವಕ್ಕೆ ದಿನಗಣನೆ | 24 ರಂದು ಪೂರ್ವಸಿದ್ಧತಾ ಸಭೆ
ಅತಿಸಾರ, ದಡಾರ, ಮಲೇರಿಯಾ ಮತ್ತು ನ್ಯೂಮೋನಿಯದಂತ ರೋಗಗಳೂ ಸಹ ಬಹಳಷ್ಟು ಸಲ ಸಾವಿಗೆ ಕಾರಣವಾಗುತ್ತವೆ. ಆದ್ದರಿಂದ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಸದಸ್ಯರು ಜನ ಜಾಗೃತಿ ಮೂಡಿಸಲು ಆಂದೋಲನ ದ ಮೂಲಕ ಗ್ರಾಮಗಳಲ್ಲಿ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಸಂಯೋಜಕ ಕರಕಪ್ಪ ಮೇಟಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕರಿ ಮಂಜುನಾಥ್, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ್, ಪವನ್ ಕುಮಾರ್, ಪ್ರವೀಣ್, ಶಂಕರ್ ನಾಯ್ಕ್, ಆರೋಗ್ಯ ಸುರಕ್ಷತಾಧಿಕಾರಿಗಳಾದ ನಾಗರತ್ನಮ್ಮ,ಸುಧಾ, ಶಿಲ್ಪ, ಮಂಜುಳ,ಗಾಯತ್ರಿ, ಮಂಜುಳಾ ಇದ್ದರು.
