
CHITRADURGA NEWS | 06 DECEMBER 2025
ಮೊಳಕಾಲ್ಮೂರು: ಮನೆ ಮಂದಿಯನ್ನೆಲ್ಲಾ ಹೆದರಿಸಿ, ಕೈ ಕಾಲು ಕಟ್ಟಿ ಹಾಕಿ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಮೂರು ಜನ ಆರೋಪಿಗಳಿಗೆ ನ್ಯಾಯಾಲಯ ತಲಾ ಮೂರು ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಆರೋಪಿಗಳಾದ ರಂಗುಲಾ ಪ್ರಸಾದ್, ನೀಲಂ ಶ್ರೀರಾಮ್ ಹಾಗೂ ಪಾಲಾ ವೆಂಕಟೇಶ್ವರ ರಾವ್ ಶಿಕ್ಷೆಗೊಳಗಾದವರು.
ಇದನ್ನೂ ಓದಿ: ಡಿಸೆಂಬರ್ 7 ರಂದು ಚಿತ್ರದುರ್ಗದ ವಿವಿಧೆಡೆ ನಿಷೇಧಾಜ್ಞೆ | ಡಿಸಿ ಟಿ.ವೆಂಕಟೇಶ್
2024 ಜುಲೈ 9 ರಂದು ಮೊಳಕಾಲ್ಮೂರು ತಾಲೂಕಿನ ಹಿರೇಹಳ್ಳಿಯ ಜಿ.ಬಿ.ತಿಪ್ಪೇಸ್ವಾಮಿ ಎಂಬುವವರ ಮನೆಯ ಮುಂದಿನ ಬಾಗಿಲನ್ನು ಕಬ್ಬಿಣದ ರಾಡ್‌ನಿಂದ ಮುರಿದು ಒಳಗೆ ಪ್ರವೇಶಿಸಿದ್ದ ಮೂವರು ತಿಪ್ಪೇಸ್ವಾಮಿ ಆತನ ಪತ್ನಿ ಹಾಗೂ ಮಗನಿಗೆ ಚಾಕು ತೋರಿಸಿ ಹೆದರಿಸಿ ಕಟ್ಟಿ ಹಾಕಿದ್ದರು.
ನಂತರ ಮನೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಿ ಇಟ್ಟಿದ್ದ 6.50 ಲಕ್ಷ ರೂ. ನಗದು, ಪರ್ಸ್‌ನಲ್ಲಿದ್ದ 2500 ಹಾಗೂ ರೋಲ್ಡ್ ಗೋಲ್ಡ್ ಕಿವಿ ಓಲೆ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ತಳುಕು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹನುಮಂತಪ್ಪ ಎಂ.ಶಿರಿಹಳ್ಳಿ ಆರೋಪಿಗಳನ್ನು ಪತ್ತೆ ಮಾಡಿ ತನಿಖೆ ಪೂರ್ಣಗೊಳಿಸಿ ಮೊಳಕಾಲ್ಮೂರು ಘನ ಸಿ.ಜೆ. & ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಘನ ನ್ಯಾಯಾಲಯದ ನ್ಯಾಯಾಧೀಶರು ಮೂವರು ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಈಜುಲು ಹೋಗಿದ ಯುವಕ ಸಾವು | ಚಳ್ಳಕೆರೆ ತಾಲೂಕಿನಲ್ಲಿ ಘಟನೆ
ಆರೋಪಿಗಳನ್ನು ಬಂಧಿಸಿ ಸರಿಯಾಗಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ತಳುಕು ಪೊಲೀಸ್ ಠಾಣೆ ಸಿಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
