ಕ್ರೈಂ ಸುದ್ದಿ
ಹಿರಿಯೂರಿನಲ್ಲಿ ಆಸಿಡ್ ದಾಳಿ ನಡೆಸಿದ್ದ ಮೂರು ಜನರ ಬಂಧನ

CHITRADURGA NEWS | 31 JANUARY 2024
ಚಿತ್ರದುರ್ಗ: ಹಿರಿಯೂರಿನಲ್ಲಿ ಯುವಕನ ಮೇಲೆ ಆಸಿಡ್ ಎರಚಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಹಿರಿಯೂರು ಪೊಲೀಸರು ಮೂರು ಜನ ಆರೋಪಿಗಳನ್ನು ಬಂದಿಸಿದ್ದಾರೆ.
ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಉತ್ಪಾಧನಾ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ಎಸ್.ಪ್ರಜ್ವಲ್, ತುಮಕೂರು ಜಿಲ್ಲೆ ಕೊರಟಿಗೆರೆ ತಾಲೂಕು ಮುಗ್ಗೊಂಡನಹಳ್ಳಿ ಪ್ಲಂಬರ್ ಕೆಲಸ ಮಾಡುತ್ತಿರುವ ನಿತಿನ್ ಕುಮಾರ್ ಹಾಗೂ ಹಿರಿಯೂರು ತಾಲೂಕು ಹರ್ತಿಕೋಟೆ ಗ್ರಾಮದ ಬೈಕ್ ಮೆಕ್ಯಾನಿಕ್ ಆರ್.ಗಿರೀಶ್ ಬಂಧಿತ ಆರೋಪಿಗಳು.
ಇದನ್ನೂ ಓದಿ: ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದ 18 ಜೋಡಿಗಳನ್ನು ಒಂದಾಗಿಸಿದ ಲೋಕ ಅದಾಲತ್
ಹಿರಿಯೂರು ನಗರದ ಬೈಪಾಸ್ ರಸ್ತೆಯಲ್ಲಿರುವ ವಿಎಂಪಿ ಹೋಟೆಲ್ ಬಳಿ ಹೊಳಲ್ಕೆರೆಯ ಅರುಣ್‍ಕುಮಾರ್ ಎಂಬ ಯುವಕನ ಮೇಲೆ ಬೈಕಿನಲ್ಲಿ ಬಂದ ಮೂರು ಜನ ಜನವರಿ 16 ರಂದು ಆಸಿಡ್ ಎರಚಿ ಪರಾರಿಯಾಗಿದ್ದರು.
ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಡಿವೈಎಸ್‍ಪಿ ಚೈತ್ರಾ, ನಗರ ಠಾಣೆ ಇನ್ಸ್‍ಪೆಕ್ಟರ್ ರಾಘವೇಂದ್ರ ಖಾಂಡಿಕೆ, ಎಸ್‍ಐಗಳಾದ ಮಂಜುನಾಥ್ ಮತ್ತು ಲಕ್ಷ್ಮೀನಾರಾಯಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೂರು ಜನರನ್ನು ಬಂಧಿಸಿದೆ.
ಇದನ್ನೂ ಓದಿ: ಮುರುಘಾ ಶರಣರಿಗೆ ಜಾಮೀನು | ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಒಡನಾಡಿ
ಆಸಿಡ್ ದಾಳಿಗೆ ಒಳಗಾಗಿದ್ದ ಅರುಣ್‍ಕುಮಾರ್, ಪ್ರೀತಿ ವಿಚಾರದಲ್ಲಿ ಈ ಘಟನೆ ನಡೆದಿದೆ. ದಾವಣಗೆರೆ ಮೂಲದ ಯುವತಿಯ ಜೊತೆಗೆ ಪ್ರಜ್ವಲ್ ಎಂಬುವವರಿಗೆ ಸಲುಗೆ ಬೆಳೆದಿದೆ. ಈ ಯುವತಿ ಅರುಣ್‍ಕುಮಾರನಿಗೂ ಪರಿಚಯವಿದ್ದು, ಆಕೆಯ ಜೊತೆ ಮಾತನಾಡುವುದನ್ನು ಸಹಿಸದೇ ಈ ದಾಳಿ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
