
CHITRADURGA NEWS | 23 AUGUST 2026
ಕೆಟ್ಟ ಆಹಾರ ಪದ್ಧತಿ, ಕಳಪೆ ಜೀವನಶೈಲಿಗಳು ಮತ್ತು ಒತ್ತಡದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಥೈರಾಯ್ಡ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈ ಚಿಟ್ಟೆ ಆಕಾರದ ಗ್ರಂಥಿಯು ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಇದರ ಕಾರ್ಯದಲ್ಲಿ ಸ್ವಲ್ಪ ಅಡಚಣೆ ಉಂಟಾದರೂ ಕೂಡ ಹಠಾತ್ ತೂಕ ಹೆಚ್ಚಾಗಲು ಮತ್ತು ನಷ್ಟಕ್ಕೆ ಕಾರಣವಾಗಬಹುದು. ಇದಲ್ಲದೆ, ಆಯಾಸ, ಮನಸ್ಥಿತಿ ಬದಲಾವಣೆಗಳು ಮತ್ತು ಕೂದಲು ಉದುರುವಿಕೆ ಮುಂತಾದ ಹಲವಾರು ಸಮಸ್ಯೆಗಳು ದೇಹವನ್ನು ಕಾಡುತ್ತವೆ. ಹಾಗಾಗಿ ನಿಮ್ಮ ಥೈರಾಯ್ಡ್ ಗ್ರಂಥಿಯು ಸಮತೋಲನದಲ್ಲಿಲ್ಲದಿದ್ದರೆ, ಅದನ್ನು ಸರಿಪಡಿಸಲು ಈ ಯೋಗಾಸನ ಅಭ್ಯಾಸ ಮಾಡಿ.
ಹಲಾಸನ
ಇದನ್ನು ಮಾಡುವಾಗ ದೇಹದ ಆಕಾರವು ನೇಗಿಲನ್ನು ಹೋಲುವುದರಿಂದ ಇದನ್ನು ಹಲಾಸನ ಎಂದು ಕರೆಯಲಾಗುತ್ತದೆ. ಈ ಆಸನವು ಗಂಟಲಿನ ಪ್ರದೇಶಕ್ಕೆ ಒತ್ತಡ ಹೇರುವ ಮೂಲಕ ಥೈರಾಯ್ಡ್ ಗ್ರಂಥಿಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.
ಇದನ್ನು ಮಾಡಲು ನೀವು ಬೆನ್ನಿನ ಮೇಲೆ ಮಲಗಿಕೊಂಡು ನಿಮ್ಮ ಕೈಗಳನ್ನು ನೇರವಾಗಿಟ್ಟು ಅಂಗೈಯನ್ನು ಕೆಳಮುಖವಾಗಿರಿಸಬೇಕು. ಬಳಿಕ ನಿಮ್ಮ ಕಾಲುಗಳನ್ನು ನಿಮ್ಮ ತಲೆಯ ಮೇಲೆ ಕಾಲ್ಬೆರಳು ನೆಲ ಸ್ಪರ್ಶಿಸುವಂತೆ ಇರಿಸಿ. ನಿಮ್ಮ ದೇಹ ಲಂಬವಾಗಿರಲಿ. ಒಂದು ನಿಮಿಷ ಈ ಭಂಗಿಯಲ್ಲಿ ಇರಿ.
ಮತ್ಸ್ಯಾಸನ
ಮತ್ಸ್ಯಾಸನವನ್ನು ಮೀನಿನ ಭಂಗಿ ಎಂದೂ ಕರೆಯುತ್ತಾರೆ, ಇದು ಥೈರಾಯ್ಡ್ ಸಮಸ್ಯೆಗಳಿಗೆ ಬಹಳ ಪರಿಣಾಮಕಾರಿ ಆಸನವೆಂದು ಪರಿಗಣಿಸಲಾಗಿದೆ. ಇದು ಕುತ್ತಿಗೆ ಮತ್ತು ಗಂಟಲಿನ ಸ್ನಾಯುಗಳನ್ನು ಹಿಗ್ಗಿಸುತ್ತದೆ, ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ.
ಇದನ್ನು ಮಾಡಲು ಚಾಪೆಯ ಮೇಲೆ ಮಲಗಿ ಅಂಗೈಯನ್ನು ಸೊಂಟದ ಕೆಳಗೆ ಇರಿಸಿ. ಮೊಣಕೈಗಳನ್ನು ಪರಸ್ಪರ ಹತ್ತಿರ ತನ್ನಿ. ನಿಮ್ಮ ಪಾದಗಳನ್ನು ತೊಡೆಯ ಮೇಲೆ ಇರಿಸಿ. ಇದನ್ನು ಮಾಡುವಾಗ ನಿಮ್ಮ ಉಸಿರನ್ನು ಒಳಕ್ಕೆ ಎಳೆಯಿರಿ. ಎದೆಯನ್ನು ಮೇಲಕ್ಕೆ ಎತ್ತಿ ನಿಮ್ಮ ಮೊಣಕೈಗಳ ಮೇಲೆ ದೇಹದ ಭಾರವನ್ನು ಹಾಕಿ.
ಭುಜಂಗಾಸನ
ಭುಜಂಗಾಸನವನ್ನು ಕೋಬ್ರಾ ಭಂಗಿ ಎಂದೂ ಕರೆಯುತ್ತಾರೆ, ಇದು ಥೈರಾಯ್ಡ್ ಗ್ರಂಥಿಗೆ ರಕ್ತ ಪೂರೈಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಯಮಿತ ಅಭ್ಯಾಸವು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಮತ್ತು ನಮ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನು ಮಾಡಲು ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಅಂಗೈಯನ್ನು ಭುಜದ ನೇರಕ್ಕೆ ಕೆಳಗೆ ಇರಿಸಿ ಕೈಗಳ ಮೇಲೆ ಒತ್ತಡ ಹೇರಿ ದೇಹವನ್ನು ಮೇಲಕ್ಕೆತ್ತಿ. ತಲೆಯನ್ನು ಹಿಂದಕ್ಕೆ ಭಾಗಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇಡಿ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

