ಲೋಕಸಮರ 2024
ನಾಮಪತ್ರಗಳ ಪರಿಶೀಲನೆ ಮುಕ್ತಾಯ | ನಾಲ್ವರ ನಾಮಪತ್ರಗಳು ತಿರಸ್ಕøತ | 24 ಕ್ರಮಬದ್ಧ | ಜಿಲ್ಲಾಧಿಕಾರಿ ಟಿ.ವೆಂಕಟೇಶ್

CHITRADURGA NEWS | 05 APRIL 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಲ್ಲಿಕೆಯಾಗಿದ್ದ 28 ಅಭ್ಯರ್ಥಿಗಳ ನಾಮಪತ್ರಗಳ ಪೈಕಿ ನಾಲ್ವರ ನಾಮಪತ್ರಗಳು ತಿರಸ್ಕøತಗೊಂಡಿದ್ದು, 24 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿನ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಶುಕ್ರವಾರ 28 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 36 ನಾಮಪತ್ರಗಳ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಚಳ್ಳಕೆರೆಯ ಕೆ.ಟಿ.ಕುಮಾರಸ್ವಾಮಿ ಭೇಟಿಯಾದ ಗೋವಿಂದ ಕಾರಜೋಳ | ಮತ್ತೆ ಬಿಜೆಪಿ ಸೇರಲು ಆಹ್ವಾನ
ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಎಂ.ಇ.ಸುಜಾತಾ, ಟಿ.ಗೋವಿಂದನಾಯ್ಕ್, ತಿಮ್ಮಯ್ಯ ಹಾಗೂ ಮಂಜುನಾಥ್ ಎಂಬುವವರ ನಾಮಪತ್ರಗಳು ತಿರಸ್ಕøತಗೊಂಡಿವೆ.
ಕ್ರಮಬದ್ಧವಾಗಿರುವ ನಾಮಪತ್ರಗಳ ವಿವರ:
- ಬಿಜೆಪಿಯ ಗೋವಿಂದ ಕಾರಜೋಳ,
- ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ,
- ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ,
- ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನರಸಿಂಹರಾಜು ಸಿ.ಎನ್,
- ಉತ್ತಮ ಪ್ರಜಾಕೀಯ ಪಾರ್ಟಿಯ ಟಿ.ರಮೇಶ್ ನಾಯ್ಕ್,
- ಇಂಡಿಯನ್ ಮೂಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ,
- ಕರುನಾಡ ಸೇವಕರ ಪಕ್ಷದ ಆರ್.ಶಬರೀಶ್,
- ಡಿ.ಸುಜಾತ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ,
- ಅಮೃತ ರಾಜ(ಪಕ್ಷೇತರ)
- ಕೃಷ್ಣಮೂರ್ತಿ(ಪಕ್ಷೇತರ)
- ಗಣೇಶ್(ಪಕ್ಷೇತರ)
- ಎಚ್.ತುಳಸಿ(ಪಕ್ಷೇತರ)
- ಎಂ.ಪಿ.ದಾರಕೇಶ್ವರಯ್ಯ(ಪಕ್ಷೇತರ)
- ಆರ್.ದಾಸಪ್ಪ(ಪಕ್ಷೇತರ)
- ಟಿ.ದೇವರಾಜ(ಪಕ್ಷೇತರ)
- ಕೆ.ನರಸಿಂಹಮೂರ್ತಿ(ಪಕ್ಷೇತರ)
- ನಾಗರಾಜಪ್ಪ(ಪಕ್ಷೇತರ)
- ಭೂತರಾಜ ವಿ.ಎಸ್.(ಪಕ್ಷೇತರ)
- ಮಂಜುನಾಥ ಸ್ವಾಮಿ(ಪಕ್ಷೇತರ)
- ಟಿ.ರಘುಕುಮಾರ್(ಪಕ್ಷೇತರ)
- ಬಿ.ವೆಂಕಟೇಶ್(ಪಕ್ಷೇತರ)
- ಕೆ.ಶಿವಲಿಂಗಪ್ಪ(ಪಕ್ಷೇತರ)
- ಶ್ರೀನಿವಾಸ ಎಸ್.ಹೆಚ್(ಪಕ್ಷೇತರ)
- ಸುಧಾಕರ.ಆರ್ (ಪಕ್ಷೇತರ)
ಇದನ್ನೂ ಓದಿ: ಕೋಟೆನಾಡಿನಲ್ಲಿ ಸಿಎಂ ಸಿದ್ದರಾಮಯ್ಯ | ದುರ್ಗದ ಬಗ್ಗೆ ಐದು ಪ್ರಮುಖ ವಿಚಾರ ಪ್ರಸ್ತಾಪ
