ಮುಖ್ಯ ಸುದ್ದಿ
ಮಾ.8 ರಿಂದ 17ರ ವರೆಗೆ ಶ್ರೀ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ | ಡಾ. ಶ್ರೀ ಬಸವ ರಮಾನಂದ ಸ್ವಾಮೀಜಿ

CHITRADURGA NEWS | 02 MARCH 2024
ಚಿತ್ರದುರ್ಗ: ವನಕಲ್ಲು ಮಲ್ಲೇಶ್ವರನ ಮಹಾ ಸಂಸ್ಥಾನದ ವತಿಯಿಂದ ಮಾ. 8 ರಿಂದ 17ರ ವರೆಗೆ ಶ್ರೀ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಮಠದ ಪೀಠಾಧ್ಯಕ್ಷ ಡಾ. ಶ್ರೀ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಎಂ.ಕೆ.ತಾಜ್ಪೀರ್ ಮಾರ್ಗದರ್ಶನದಲ್ಲಿ ಚಿತ್ರದುರ್ಗದ ಅಭಿವೃದ್ಧಿಗೆ ಶ್ರಮಿಸೋಣ| ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಾತ್ರೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ನೆಲಮಂಗಲ ತಾಲ್ಲೂಕಿನ ಡಾಬಸ್ ಪೇಟೆಯ ಹೆಗ್ಗುಂದ ಹಿಂಬಳಿ ಇರುವ ಮಠದಲ್ಲಿ ಮಾರ್ಚ್ 8ರಂದು ಜಾತ್ರೆಗೆ ಚಾಲನೆಯನ್ನು ನೀಡಲಾಗುವುದು. ಅಂದು ಬೆಳಿಗ್ಗೆ ಮಲ್ಲೇಶ್ವರ ದೇವರಿಗೆ ರುದ್ರಾಭಿಷೇಕ, ಪಂಚಲೋಹದ ಕವಚಧಾರಣೆ, ಹೂವಿನ ಅಲಂಕಾರ, ಶಿವರಾತ್ರಿ ಜಾಗರಣೆ ಇತರ ಧಾರ್ಮಿಕ ಪೂಜಾ ಕಾರ್ಯ ನೆರವೇರಲಿದೆ.
ಇದನ್ನೂ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಡೀನ್ ನೇಮಕಕ್ಕೆ ವಿರೋಧ | ಡಾ.ಸಂಜೀವ್ ನೇಮಕಕ್ಕೆ ಶಿಫಾರಸ್ಸು ಮಾಡಿರುವ ಸಚಿವರ ಕ್ರಮಕ್ಕೆ ಆಕ್ಷೇಪ

ಮಾ.9 ರಿಂದ 15ರ ವರೆಗೆ ಶ್ರೀ ಸಿದ್ಧಯೋಗಾನಂದ ಕ್ರಿಕೆಟ್ ಕಪ್ ಹಾಗೂ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಮಾ.16 ರಂದು ಬೆಳಿಗ್ಗೆ 11.30ಕ್ಕೆ ಪ್ರತಿಭೋತ್ಸವ, ಡೊಳ್ಳುಕುಣಿತ, ವೀರಗಾಸೆ, ಕರಡಿವಾದ್ಯ, ಭಜನೆ, ಸಾಂಸ್ಕೃತಿಕ ನಾಟಕೋತ್ಸವ, ಮುದ್ದೇನಹಳ್ಳಿ ಪಾಳ್ಯ ಗ್ರಾಮಸ್ಥರಿಂದ ಬೆಲ್ಲದ ಆರತಿ ಕಾರ್ಯಕ್ರಮ ಇರಲಿದೆ. ಅಂದು ಸಂಜೆ 7.30ಕ್ಕೆ ಸಂಸ್ಕೃತ ಸಂಶೋಧನಾ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾ.17ರ ಬೆಳಗ್ಗೆ 10.30ಕ್ಕೆ ವನಕಲ್ಲುಶ್ರೀ, ಜಗಜ್ಯೋತಿ, ವಿಶ್ವಜ್ಯೋತಿ, ಬಾಲಗಂಗಾಧರನಾಥ ನಿರ್ಮಲ ಜ್ಯೋತಿ, ಶರಣಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಮಧ್ಯಾಹ್ನ 1.30ಕ್ಕೆ ವನಕಲ್ಲು ಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಸುದ್ಧಿಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ದೊಡ್ಡಮಲ್ಲಯ್ಯ, ಪ್ರತಾಪ್ ಜೋಗಿ, ಲಕ್ಷಿ್ಮೀಕಾಂತ, ರಂಗಸ್ವಾಮಿ, ಅರುಣ್ ಕುಮಾರ್, ಗೋವಿಂದ ಸೇರಿದಂತೆ ಇತರರು ಇದ್ದರು.
