
CHITRADURGA NEWS | 13 MARCH 2026
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಯುಗಾದಿ ಪ್ರಯುಕ್ತ ಮಾರ್ಚ್ 17ರಿಂದ 20ರವರೆಗೆ ನಾಲ್ಕು ದಿನಗಳ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: PU ಪರೀಕ್ಷೆ | ಹಿಂದಿ ವಿಷಯದಲ್ಲಿ 527 ವಿದ್ಯಾರ್ಥಿಗಳು ಹಾಜರು
ದಮಾರ್ಚ್ 17ರ ಮಂಗಳವಾರ ಸಂಜೆ 5.30 ಗಂಟೆಗೆ ಶ್ರೀಮಠದ ಆವರಣದಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಅಲ್ಲಮ ಪ್ರಭುದೇವರ ಜಯಂತಿ (ಶರಣೋತ್ಸವ) ಹಿನ್ನೆಲೆಯಲ್ಲಿ ಪ್ರಭುದೇವರ ವ್ಯಕ್ತಿತ್ವ ಸಾಧನೆ ಮತ್ತು ಅವರ ವಚನಗಳಲ್ಲಿನ ತಿಳಿವಿನ ಕುರಿತಾಗಿ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದ್ದು, ಗೋಷ್ಠಿಯ ಅಧ್ಯಕ್ಷತೆಯನ್ನು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕಿ ಕವಯತ್ರಿ ಸಾಹಿತಿ ಹಾಗೂ ವಿಮರ್ಶಕರೂ ಆಗಿರುವ ಪ್ರೊ.ತಾರಿಣಿ ಶುಭದಾಯಿನಿ ಅವರು ವಹಿಸಲಿದ್ದಾರೆ.
ಮಾರ್ಚ್ 18ರ ಬುಧವಾರ ಬೆಳಗ್ಗೆ 8.30 ಗಂಟೆಯಿಂದ 17-18ನೇ ಶತಮಾನದಲ್ಲಿ ಕರ್ನಾಟಕದ ಲಿಂಗಾಯತ ಪರಂಪರೆಯ ಶಿವಯೋಗಿ ಪುಂಗವರಾದ ಅನುಭಾವಿ ತತ್ವಪದಕಾರರಾಗಿದ್ದ ಶ್ರೀ ಸರ್ಪಭೂಷಣ ಶಿವಯೋಗಿಗಳವರ ಜಯಂತಿ(ಶರಣೋತ್ಸವ)ವನ್ನು ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಈ ಮಹಿಮರ ವ್ಯಕ್ತಿತ್ವದ ಪಥದರ್ಶನದ ವಿಷಯಾವಲೋಕನವನ್ನು ಶಿರಸಂಗಿ ಶ್ರೀ ಮಹಾಲಿಂಗೇಶ್ವರ ಮುರುಘರಾಜೇಂದ್ರ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ ಅವರು ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ: ಮಲ್ಲಾಡಿಹಳ್ಳಿ ಆಯುರ್ವೇದ ವೈದ್ಯಕೀಯ ಕಾಲೇಜಿಗೆ 15 ರ‍್ಯಾಂಕ್
ಮಾರ್ಚ್ 19ರ ಗುರುವಾರ ಬೆಳಗ್ಗೆ 8.30 ಗಂಟೆಗೆ ಶ್ರೀಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದ ಆವರಣದಲ್ಲಿ ಅನುಭವ ಮಂಟಪದ ಪ್ರಥಮಾಧ್ಯಕ್ಷರೂ ಶೂನ್ಯಪೀಠದ ಶ್ರೀ ಮುರುಘಾಮಠದ ಮೂಲಪುರುಷರಾದ ಅಲ್ಲಮಪ್ರಭುಗಳ ಜಯಂತಿ (ಶರಣೋತ್ಸವ)ಯು ನಡೆಯಲಿದ್ದು ಅಲ್ಲಮಪ್ರಭುಗಳ ಜೀವನ ಸಾಧನೆ ಕುರಿತಾದ ಚಿಂತನ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಕಾರ್ಯಕ್ರಮದ ಸಮಾರಂಭ ಸಮಾರಂಭವು 20ರ ಸಂಜೆ 6 ಗಂಟೆಯಿಂದ ಯುಗಾದಿ ಚಂದ್ರದರ್ಶನ ಸಂದರ್ಭದಲ್ಲಿ ಶ್ರೀಮಠಕ್ಕೆ ಆಗಮಿಸುವ ಸರ್ವ ಭಕ್ತರ ಸಮ್ಮುಖದಲ್ಲಿ ಶ್ರೀಮಠದ ಜಮುರಾ ಕಲಾಲೋಕದ ಕಲಾವಿದರಿಂದ ವಚನ ಗಾಯನ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಅಲ್ಲಮಪ್ರಭುಗಳ ಆಯ್ದ ವಚನಗಳ ಕೃತಿ ಬೇವು-ಬೆಲ್ಲ ವಿತರಣೆ ಜತೆಗೆ ಪಾನಕ-ಕೋಸಂಬರಿಯನ್ನು ನೀಡಲಾಗುವುದು.
ಇದನ್ನೂ ಓದಿ: ಮಾಜಿ ಯೋಧರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ | ಜಮೀನು, ನಿವೇಶನ, ಮೂಲ ಸೌಲಭ್ಯಕ್ಕೆ ಒತ್ತಾಯ
ಎಲ್ಲ ಕಾರ್ಯಕ್ರಮಗಳಿಗೆ ಎಂದಿನಂತೆ ಭಕ್ತರು, ಶ್ರೀಮಠದ ಅಭಿಮಾನಿಗಳು, ಸಾರ್ವಜನಿಕರು, ಬಸವಪರ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಇತರೆ ಸಮಾಜ, ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
