
CHITRADURGA NEWS | 15 MARCH 2026
ಚಿತ್ರದುರ್ಗ: ಕನ್ನಡ ಸಾಹಿತ್ಯ ವಿಮರ್ಶೆಯ ತಲಸ್ಪರ್ಶಿ ಅಧ್ಯಯನಕ್ಕೆ ಇಂಗ್ಲಿಷ್ ಭಾಷೆಯ ಜ್ಞಾನ ಅಗತ್ಯ ಎಂದು ಖ್ಯಾತ ಕಥೆಗಾರ ಲೋಕೇಶ್ ಅಗಸನಕಟ್ಟೆ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ (ಸ್ವಾಯತ್ತ), ಕಾಲೇಜು ಶಿಕ್ಷಣ ಇಲಾಖೆ, ಐಕ್ಯೂಎಸಿ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯ ವಿಮರ್ಶೆ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಮರ್ಶೆ ಇಂದ್ರಿಯ ಮುಖ್ಯವಾದದ್ದು ಮತ್ತು ಹಲವು ತಾತ್ವಿಕ ಗ್ರಹಿಕೆಗಳನ್ನು ಹೊಂದಿರುತ್ತದೆ. ಹಾಗಾಗಿ ಸಾಹಿತ್ಯ ಕೃತಿಯಲ್ಲಿನ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ ಅದರ ಮೌಲ್ಯ ನಿರ್ಧರಿಸುವ ಜಾಣ್ಮೆ ವಿಮರ್ಶಕರಿಗೆ ಇರಬೇಕು.
ಸಾಹಿತ್ಯ ಕೃತಿಗಳು ಭಿನ್ನ ಭಿನ್ನ ಅನುಭವ ನೀಡುತ್ತವೆ. ಸಾಹಿತ್ಯ ಮತ್ತು ವಿಮರ್ಶೆ ಎರಡರಲ್ಲೂ ಚಲನಶೀಲತೆ ಗುಣವಿರುತ್ತದೆ. ಆದ್ದರಿಂದ ವಸ್ತುನಿಷ್ಠ, ಕೃತಿ ನಿಷ್ಠ ಹಾಗೂ ಸಮಾಜ ನಿಷ್ಠ ವಿಮರ್ಶೆಯ ಸ್ವರೂಪವನ್ನು ಅರಿತುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: ಬಾಲಕಿಗೆ ಕಚ್ಚಿದ ನಾಗರಹಾವು | ಬಾಯಿಂದಲೇ ವಿಷ ತೆಗೆದ ಶಿಕ್ಷಕ ರವಿಶಂಕರ್ ಸಮಯಪ್ರಜ್ಞೆ | ಇಬ್ಬರಿಗೂ ಚಿಕಿತ್ಸೆ
ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ. ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಸಮಾಜಮುಖಿಯಾದ ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಸ್ಥಳೀಯ ಚರಿತ್ರೆ ಮತ್ತು ಬರಹಗಾರರ ಸಾಹಿತ್ಯದ ಕುರಿತು ವಿಶೇಷ ಅಧ್ಯಯನ ನಡೆಸುವ ಮೂಲಕ ಆಂಶಿಕ ಪ್ರಬಂಧ ರಚಿಸಬೇಕು.
ಸ್ನಾತಕೋತ್ತರ ಪದವಿ ಕಲಿಕೆಯ ಜೊತೆಯಲ್ಲಿಯೇ ವ್ಯಾಪಕ ಕ್ಷೇತ್ರಕಾರ್ಯ ನಡೆಸಿ ಕಲೆ, ಸಂಸ್ಕೃತಿ ಮತ್ತು ಅಲಕ್ಷಿತ ಕಲಾವಿದರು ಹಾಗೂ ತತ್ವಪದಗಳನ್ನು ಸಂಗ್ರಹಿಸುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ಪದವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಐಕ್ಯೂಎಸಿ ಸಮಿತಿ ಸಂಚಾಲಕಿ ಪ್ರೊ. ತಾರಿಣಿ ಶುಭದಾಯಿನಿ ಮಾತನಾಡಿ, ಬೌದ್ಧಿಕ ವಿಕಾಸಕ್ಕೆ ಪೂರಕವಾದ ವಿಚಾರ ಸಂಕಿರಣಗಳನ್ನು ಕಾಲೇಜಿನಲ್ಲಿ ಪ್ರತಿ ತಿಂಗಳು ಏರ್ಪಡಿಸಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಪ್ರಾಧ್ಯಾಪಕರಿಗೆ ತಿಳಿಸಿದರು.
ಸ್ನಾತಕೋತ್ತರ ಪದವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಚಿತ್ತಯ್ಯ ಕೆ., ಉಪನ್ಯಾಸಕ ಜಿ.ಎಸ್. ಯಶೋಧರ ಮಾತನಾಡಿದರು.
ಇದನ್ನೂ ಓದಿ: ಅದ್ದೂರಿ ಏಕನಾಥೇಶ್ವರಿ ಜಾತ್ರೆಗೆ ತೀರ್ಮಾನ | ನಗರಾದ್ಯಂತ ದೀಪಾಲಂಕಾರಕ್ಕೆ ಸಲಹೆ
ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ. ಎಚ್. ಹನುಮಂತಪ್ಪ, ಸ್ನಾತಕೋತ್ತರ ವಿಭಾಗದ ಕನ್ನಡ ಸಹ ಪ್ರಾಧ್ಯಾಪಕ ಪ್ರೊ. ಜಿ.ಎಚ್. ನಾಗಮರ್ಮ, ಸಹಾಯಕ ಪ್ರಾಧ್ಯಾಪಕ ಪ್ರೊ. ಗಿರೀಶ್ ಗೌಡ, ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಶ್ರೀಹರಿ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

