Connect with us

    South Western Railway: ನೈರುತ್ಯ ರೈಲ್ವೆಗೆ ಬಂಪರ್ | ವೇಗ ಪಡೆಯಲಿದೆ ನೇರ ಮಾರ್ಗ ಕಾಮಗಾರಿ

    railway 2

    ಮುಖ್ಯ ಸುದ್ದಿ

    South Western Railway: ನೈರುತ್ಯ ರೈಲ್ವೆಗೆ ಬಂಪರ್ | ವೇಗ ಪಡೆಯಲಿದೆ ನೇರ ಮಾರ್ಗ ಕಾಮಗಾರಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 20 AUGUST 2024
    ಚಿತ್ರದುರ್ಗ: ಕೇಂದ್ರ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ ₹6,493.87 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ, ಇದರಲ್ಲಿ ಹೊಸ ಮಾರ್ಗ ನಿರ್ಮಾಣಕ್ಕೆ ₹1,448.89 ಕೋಟಿ ನಿಗದಿಪಡಿಸಲಾಗಿದೆ. ರೈಲು ಹಳಿ ದ್ವಿಪಥವಾಗಿ ಮೇಲ್ದರ್ಜೆಗೇರಿಸಲು ₹1,241 ಕೋಟಿ, ಪ್ರಯಾಣಿಕರ ಸೌಲಭ್ಯಗಳ ಅಭಿವೃದ್ಧಿಗೆ ₹961.22 ಕೋಟಿ ನಿಗದಿಪಡಿಸಲಾಗಿದೆ.

    ತುಮಕೂರು–ದಾವಣಗೆರೆ (ಚಿತ್ರದುರ್ಗ ಮಾರ್ಗವಾಗಿ) ಹೊಸ ಮಾರ್ಗಕ್ಕೆ ₹ 150 ಕೋಟಿ ಮೀಸಲಿಡಲಾಗಿದೆ. ಉಳಿದಂತೆ ಹಾಸನ– ಬೆಂಗಳೂರು (ಶ್ರವಣಬೆಳಗೊಳ ಮಾರ್ಗವಾಗಿ), ಹುಬ್ಬಳ್ಳಿ–ಅಂಕೋಲಾ ಹಾಗೂ ಬೆಳಗಾವಿ–ಧಾರವಾಡ (ಕಿತ್ತೂರು ಮಾರ್ಗವಾಗಿ) ನೂತನ ಮಾರ್ಗ ನಿರ್ಮಾಣಕ್ಕಾಗಿ ತಲಾ ₹20 ಕೋಟಿ, ಗದಗ (ತಳಕಲ್) –ವಾಡಿ ಮಾರ್ಗಕ್ಕಾಗಿ ₹200 ಕೋಟಿ, ಬಾಗಲಕೋಟೆ–ಕುಡಚಿ, ಗದಗ–ಯಲವಿಗಿ, ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗಗಳಿಗೆ ತಲಾ (₹150 ಕೋಟಿ), ಕಡೂರು–ಚಿಕ್ಕಮಗಳೂರು–ಹಾಸನ (₹70 ಕೋಟಿ), ತುಮಕೂರು–ರಾಯದುರ್ಗ (ಕಲ್ಯಾಣದುರ್ಗ ಮಾರ್ಗವಾಗಿ) ₹250 ಕೋಟಿ, ಮಾರಿಕುಪ್ಪಮ್–ಕುಪ್ಪಮ್ (₹60 ಕೋಟಿ), ಮಲಗೂರು–ಪಾಲಸಮುದ್ರಮ್ (₹21 ಕೋಟಿ), ಮುನಿರಾಬಾದ್–ಮಹಬೂಬನಗರ (₹100 ಕೋಟಿ) ಹೊಸ ಮಾರ್ಗಕ್ಕೆ ಮೀಸಲಿಡಲಾಗಿದೆ.

    ಕ್ಲಿಕ್ ಮಾಡಿ ಓದಿ: ಪೈಪೋಟಿ ನಡುವೆ ಅವಿರೋಧ ಆಯ್ಕೆ | ನಗರಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ

    ರೈಲ್ವೆ ಮೇಲ್ಸೇತುವೆ, ಕೆಳಸೇತುವೆ ಯಂತಹ ಕಾಮಗಾರಿಗೆ ₹349.40 ಕೋಟಿ ಮತ್ತು ಸಂಚಾರ ಸೌಲಭ್ಯಕ್ಕೆ ₹145.84 ಕೋಟಿ ಮೀಸಲಿಡಲಾಗಿದೆ. ಅಮೃತ ಭಾರತ ಯೋಜನೆಯಡಿ 51 ನಿಲ್ದಾಣಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿನ ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಗಳ ಅಭಿವೃದ್ಧಿ ಕಾರ್ಯ ಆರಂಭವಾಗಿವೆ. ರೈಲ್ವೆ ಸಚಿವಾಲಯದ ಅನುಮತಿ ಮೇರೆಗೆ ಬೆಂಗಳೂರು ವಿಭಾಗದ ಗುಬ್ಬಿ ಮತ್ತು ಶ್ರವಣಬೆಳಗೊಳ ನಿಲ್ದಾಣವನ್ನು ಈಚೆಗಷ್ಟೇ ಯೋಜನೆಗೆ ಸೇರಿಸಲಾಗಿದೆ.

    ಕ್ಲಿಕ್ ಮಾಡಿ ಓದಿ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮಾನತು | ಕರ್ತವ್ಯ ಲೋಪದ ಆರೋಪ

    ಗದಗ–ಹೊಟಗಿ (₹170 ಕೋಟಿ), ಬೈಯಪ್ಪನಹಳ್ಳಿ–ಹೊಸೂರು ಹಾಗೂ ಬೆಂಗಳೂರು ಕಂಟೋನ್ಮೆಂಟ್–ವೈಟ್‌ಫೀಲ್ಡ್ (ನಾಲ್ಕು ಮಾರ್ಗಕ್ಕಾಗಿ) ತಲಾ (₹200 ಕೋಟಿ), ಹೊಸಪೇಟೆ–ತಿನೈಘಾಟ್–ವಾಸ್ಕೊ ಡ ಗಾಮಾ (₹400 ಕೋಟಿ), ಹುಬ್ಬಳ್ಳಿ–ಚಿಕ್ಕಜಾಜೂರು, ಅರಸೀಕೆರೆ–ತುಮಕೂರು ಹಾಗೂ ಯಲಹಂಕ–ಪೆನುಕೊಂಡ ಮಾರ್ಗಕ್ಕೆ ತಲಾ ₹20 ಕೋಟಿ, ಯಶವಂತಪುರ–ಚನ್ನಸಂದ್ರ ಹಾಗೂ ಪೆನುಕೊಂಡ–ಧರ್ಮಾವರಮ್ ಮಾರ್ಗ ದ್ವಿಪಥಕ್ಕಾಗಿ ₹100 ಕೋಟಿ ಮೀಸಲಿರಿಸಲಾಗಿದೆ’ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top