CHITRADURGA NEWS | 17 SEPTEMBERR 2025
ಚಿತ್ರದುರ್ಗ: ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಲವಮ್ಮನಹಳ್ಳಿಯ ಎಸ್.ಪರಮೇಶ್ವರಪ್ಪ(88) ಸೆ.16 ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇದನ್ನೂ ಓದಿ: ಪಕೋಡಾ ಮಾರಿ ನರೇಂದ್ರ ಮೋದಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಅರಣ್ಯ ಇಲಾಖೆಯ ಅತ್ಯುನ್ನತ ಹುದ್ದೆ ಅಲಂಕರಿಸಿದ್ದ ಪರಮೇಶ್ವರಪ್ಪ ಅವರು, ನೈಜೀರಿಯಾದಲ್ಲಿ ಅರಣ್ಯ ಸಂಪತ್ತು ಅಭಿವೃದ್ಧಿ ಕಾರ್ಯಕ್ಕೆ ಹೋಗಿ ಬಂದಿದ್ದರು.
ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಉನ್ನತ ಅಧ್ಯಯನ ನಡೆಸಿ ಮೊದಲ ರ್ಯಾಂಕ್ ಪಡೆದಿದ್ದರು. ವಿಶ್ವಬ್ಯಾಂಕ್ ಸಮ್ಮೇಳನದಲ್ಲೂ ಭಾಗಿಯಾಗಿದ್ದರು.
ಈಶಾನ್ಯ ಭಾರತದ ದಟ್ಟ ಅರಣ್ಯಕ್ಕೆ ಹೆಲಿಕಾಪ್ಟರ್ ಮೂಲಕ ಇಳಿದು ಮರಗಳ ಗಣತಿ ಮಾಡಿದ್ದ ಹೆಗ್ಗಳಿಕೆ ಪರಮೇಶ್ವರಪ್ಪ ಅವರದ್ದು.
ಸ್ವಗ್ರಾಮ ಸಲವಮ್ಮನಹಳ್ಳಿಯಲ್ಲಿ ಉತ್ಥಾನ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕುಂಚಿಗ ಲಿಂಗಾಯತ ಸಮಾಜಕ್ಕೆ ಚಿತ್ರದುರ್ಗದ ತರಳಬಾಳು ನಗರದಲ್ಲಿ ನಿವೇಶನ ದಾನ ಮಾಡಿದ್ದರು ಎಂದು ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜನಪ್ಪ ಸ್ಮರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಡಿ.ಜೆ. ಮಾಲಿಕರ ಮೇಲೆ ಕ್ರಿಮಿನಲ್ ಕೇಸ್ | ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿದ್ದ 6 ಡಿಜೆ, ವಾಹನ ಮಾಲಿಕರ ಮೇಲೆ ಕಾನೂನು ಕ್ರಮ
ಸೆ.೧೭ ಬುಧವಾರ ಸಂಜೆ ಐಮಂಗಲ ಬಳಿಯಿರುವ ಪರಮೇಶ್ವರಪ್ಪ ಅವರ ಉತ್ಥಾನ ಫಾರಂ ಹೌಸ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಸೇರಿದಂತೆ ಪರಮೇಶ್ವರಪ್ಪ ಅವರ ಅಪಾರ ಬಂಧುಗಳು, ಮಿತ್ರರು, ಕುಟುಂಬದವರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
