By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಮತ್ತು ನಿಯಮಗಳು 2013” ಕುರಿತ ಒಂದು ದಿನದ ಕಾರ್ಯಾಗಾರ
    ಕಂದಾಯ ಇಲಾಖೆಯಲ್ಲಿ ಕ್ರಾಂತಿ | ಬೆರಳ ತುದಿಯಲ್ಲಿ ದಾಖಲೆಗಳು
    7 hours ago
    ನಟ ಶರತ್ ಲೋಹಿತಾಶ್ವ
    ನಾಳೆ ಚಿತ್ರದುರ್ಗದಲ್ಲಿ ನಟ ಶರತ್ ಲೋಹಿತಾಶ್ವಗೆ ಗೌರವ ಸನ್ಮಾನ 
    8 hours ago
    ಖಾಸಗಿ ಬಸ್ ಮಾಲೀಕರ ಸಂಘದ ಸಭೆ
    ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಖಾಸಗಿ ಬಸ್‌ ಮಾಲಿಕರ ತೀರ್ಮಾನ
    8 hours ago
    ತಾಂತ್ರಿಕ ಮತ್ತು ವೈದ್ಯಕೀಯ ಸ್ನಾತಕ ಪದವಿ ವಿದ್ಯಾಭ್ಯಾಸಕ್ಕಾಗಿ ಅರ್ಜಿ ಆಹ್ವಾನ
    10 hours ago
    ಮೇ.27 ರಂದು ಪ್ರಥಮ ಪಿಯುಸಿ ಪ್ರವೇಶಾತಿ ಕೌನ್ಸಿಲಿಂಗ್
    14 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    Accident between bike and car
    ಬೈಕ್‌ – ಕಾರು ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರು ಮೃತ
    3 days ago
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    1 month ago
    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರು ಸಾವು
    1 month ago
    car accident near molakalmuru rajapura
    ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
    2 months ago
    ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
    2 months ago
  • ತಾಲೂಕು
    ತಾಲೂಕುShow More
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    2 days ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    4 days ago
    ಕುಂಚಿಟಿಗ ಮಠದಲ್ಲಿ ವಿಶ್ವ ತಾಯಂದಿರ ದಿನಾಚರಣೆ
    ತಾಯಂದಿರ ದಿನಾಚರಣೆ ವಿಶೇಷ | ಕುಂಚಿಟಿಗ ಮಠದಲ್ಲಿ ಮಾತೃ ಸಂಗಮ
    2 weeks ago
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    3 weeks ago
    ಕೆರೆ ಹುಳೆತ್ತುವ ಕಾಮಗಾರಿಯನ್ನು ಸಾಣೆಹಳ್ಳಿ ಶ್ರೀ ವೀಕ್ಷಣೆ
    ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಶೇ.75 ರಷ್ಟು ಕೆಲಸ ಪೂರ್ಣ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ 
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 20 ಮೇ | ಚನ್ನಗಿರಿ ಸೇರಿ ರಾಜ್ಯದ ಅಡಿಕೆ ರೇಟ್‌
    6 days ago
    arecanut price list
    ಅಡಿಕೆ ಧಾರಣೆ | 19 ಮೇ | ಭೀಮಸಮುದ್ರ ಸೇರಿ ವಿವಿಧ ಮಾರುಕಟ್ಟೆಗಳ ರೇಟ್‌
    1 week ago
    arecanut price list
    ಅಡಿಕೆ ಧಾರಣೆ | 16 ಮೇ | ರಾಜ್ಯದ ಅಡಿಕೆ ಮಾರುಕಟ್ಟೆಗಳ ನೋಟ
    1 week ago
    arecanut price list
    ಅಡಿಕೆ ಧಾರಣೆ | 6 ಮೇ | ರಾಶಿ ಅಡಿಕೆ ಬೆಲೆ ಏರಿಕೆ
    3 weeks ago
    arecanut price list
    ಅಡಿಕೆ ಧಾರಣೆ | 30 ಏಪ್ರಿಲ್‌ | ಇಂದಿನ ಅಡಿಕೆ ರೇಟ್‌
    4 weeks ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಮೇ. 26 | ಹಠಾತ್ ಆರ್ಥಿಕ ಲಾಭ, ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ
    20 hours ago
    today bhavishya
    ದಿನ ಭವಿಷ್ಯ | ಮೇ. 25 | ಉದ್ಯೋಗಗಳಿಗೆ ಅನುಕೂಲಕರ ವಾತಾವರಣ, ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು
    2 days ago
    today bhavishya
    ದಿನ ಭವಿಷ್ಯ | ಮೇ. 24 | ಹಠಾತ್ ಪ್ರಯಾಣದ ಸೂಚನೆ, ಅರೋಗ್ಯದಲ್ಲಿ ಎಚ್ಚರ
    3 days ago
    today bhavishya
    ದಿನ ಭವಿಷ್ಯ | ಮೇ.23 | ನಿರುದ್ಯೋಗಿಗಳಿಗೆ ಉದ್ಯೋಗ, ದೂರದ ಪ್ರಯಾಣ ಬೇಡ
    4 days ago
    today bhavishya
    ದಿನ ಭವಿಷ್ಯ | ಮೇ. 22 | ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣ, ಹಠಾತ್ ಆರ್ಥಿಕ ಲಾಭ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    14 hours ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.25 | ಮೆಕ್ಕೆಜೋಳ, ರಾಗಿ ರೇಟ್..
    2 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.23 | ಹತ್ತಿ ರೇಟ್….
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.22| ಮೆಕ್ಕೆಜೋಳ, ಶೇಂಗಾ ರೇಟ್..
    5 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.21 | ಹತ್ತಿ ರೇಟ್ ಎಷ್ಟಿದೆ?
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಪೂರ್ವಭಾವಿ ಸಭೆ
    ಹೊಳಲ್ಕೆರೆ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರ | ಶಾಸಕ ಎಂ.ಚಂದ್ರಪ್ಪ 
    3 weeks ago
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    1 month ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 months ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    2 months ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    2 months ago
  • ಹಿರಿಯೂರು
    ಹಿರಿಯೂರುShow More
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    3 days ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    1 month ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    3 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    3 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    4 months ago
  • ಹೊಸದುರ್ಗ
    ಹೊಸದುರ್ಗShow More
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    2 days ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    4 days ago
    ಕುಂಚಿಟಿಗ ಮಠದಲ್ಲಿ ವಿಶ್ವ ತಾಯಂದಿರ ದಿನಾಚರಣೆ
    ತಾಯಂದಿರ ದಿನಾಚರಣೆ ವಿಶೇಷ | ಕುಂಚಿಟಿಗ ಮಠದಲ್ಲಿ ಮಾತೃ ಸಂಗಮ
    2 weeks ago
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    3 weeks ago
    ಕೆರೆ ಹುಳೆತ್ತುವ ಕಾಮಗಾರಿಯನ್ನು ಸಾಣೆಹಳ್ಳಿ ಶ್ರೀ ವೀಕ್ಷಣೆ
    ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಶೇ.75 ರಷ್ಟು ಕೆಲಸ ಪೂರ್ಣ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ 
    3 weeks ago
  • Life Style
    Life StyleShow More
    sweating good or bad
    ಬೆವರು ಸುರಿಯುವುದು ನಿಮ್ಮ ಚರ್ಮಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ? ತಿಳಿಯಿರಿ
    19 hours ago
    uterus
    ನಿಮ್ಮ ಪ್ರತಿದಿನದ ಈ ಅಭ್ಯಾಸಗಳು ಗರ್ಭಾಶಯವನ್ನು ದುರ್ಬಲಗೊಳಿಸುತ್ತವೆಯಂತೆ
    20 hours ago
    skin being damaged by AC air
    ಎಸಿ ಗಾಳಿಯಿಂದ ನಿಮ್ಮ ಚರ್ಮ ಹಾನಿಗೊಳಗಾಗುತ್ತಿದೆಯೇ? ಹಾಗಾದ್ರೆ ನಿಮ್ಮ ಚರ್ಮವನ್ನು ಹೀಗೆ ಕಾಳಜಿ ಮಾಡಿ
    2 days ago
    buttermilk
    ಮಜ್ಜಿಗೆ ಕುಡಿಯುವುದರಿಂದ ಚರ್ಮಕ್ಕಾಗುವ ಪ್ರಯೋಜನಗಳೇನು ಗೊತ್ತಾ?
    2 days ago
    Hot compress or cold compress
    ಹಾಟ್ ಕಂಪ್ರೆಸ್ ಅಥವಾ ಕೋಲ್ಡ್‍ ಕಂಪ್ರೆಸ್; ಇವೆರಡರಲ್ಲಿ ಮುಟ್ಟಿನ ನೋವಿಗೆ ಯಾವುದು ಉತ್ತಮ?
    3 days ago
Reading: ಕಂದಾಯ ಇಲಾಖೆಯಲ್ಲಿ ಕ್ರಾಂತಿ | ಬೆರಳ ತುದಿಯಲ್ಲಿ ದಾಖಲೆಗಳು
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಕಂದಾಯ ಇಲಾಖೆಯಲ್ಲಿ ಕ್ರಾಂತಿ | ಬೆರಳ ತುದಿಯಲ್ಲಿ ದಾಖಲೆಗಳು

News Desk Chitradurga News
Last updated: 26 May 2026 20:13
News Desk Chitradurga News
7 hours ago
Share
ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಮತ್ತು ನಿಯಮಗಳು 2013” ಕುರಿತ ಒಂದು ದಿನದ ಕಾರ್ಯಾಗಾರ
ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಮತ್ತು ನಿಯಮಗಳು 2013” ಕುರಿತ ಒಂದು ದಿನದ ಕಾರ್ಯಾಗಾರ
SHARE

CHITRADURGA NEWS | 26 MAY 2026

ಚಿತ್ರದುರ್ಗ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ‘ಭೂ ಸುರಕ್ಷಾ’ ಎಂಬ ಅದ್ಭುತ ತಂತ್ರಾಂಶವನ್ನು (ಸಾಫ್ಟ್ವೇರ್) ಸರ್ಕಾರ ಅಭಿವೃದ್ಧಿಪಡಿಸಲಾಗಿದ್ದು, ರಾಜ್ಯದ ಭೂಮಿಗೆ ಸಂಬಂದಪಟ್ಟ ಪಹಣಿ ಪುಸ್ತಕ, ಕೈಬರಹದ ಪಹಣಿ, 5 ಸ್ಟಾರ್ ದಾಖಲೆಗಳು, ಮ್ಯುಟೇಷನ್, ಭೂ ಮಂಜೂರಾತಿ ದಾಖಲೆಗಳನ್ನು ಡಿಜಿಟಲಿಕರಣಗೊಳಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಭೂ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವದು ತಪ್ಪಿ, ಬೆರಳ ತುದಿಯಲ್ಲಿ ದಾಖಲೆಗಳು ಸಿಗಲಿದೆ. ಇದೊಂದು ಸದ್ದಿಲ್ಲದೆ ನಡೆಯುತ್ತಿರುವ ಕ್ರಾಂತಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಣ್ಣಿಸಿದರು.

ಇದನ್ನೂ ಓದಿ: ನಾಳೆ ಚಿತ್ರದುರ್ಗದಲ್ಲಿ ನಟ ಶರತ್ ಲೋಹಿತಾಶ್ವಗೆ ಗೌರವ ಸನ್ಮಾನ 

ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ “ದಾಖಲೆಗಳ ಮಹತ್ವ, ಸಂರಕ್ಷಣೆ, ನಿರ್ವಹಣೆ ಹಾಗೂ ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಮತ್ತು ನಿಯಮಗಳು 2013” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭೂಸುರಕ್ಷಾ ಯೋಜನೆಯಡಿ ಪ್ರತಿ ದಾಖಲೆ ಮತ್ತು ಪುಟಗಳನ್ನು ಯಥಾವತ್ತಾಗಿ ಸ್ಕ್ಯಾನ್ ಮಾಡುವುದರ ಜೊತೆಗೆ, ಅದರ ನೈಜತೆಯನ್ನು ಕಚೇರಿ ಮುಖ್ಯಸ್ಥರ ಮುಖಾಂತರ ದೃಢೀಕರಿಸಲಾಗುತ್ತಿದೆ. ಈಗಾಗಲೇ ಸಾರ್ವಜನಿಕರಿಗೆ ಇದರ ಸೌಲಭ್ಯ ಸಿಗುತ್ತಿದ್ದು, ದಾಖಲೆಗಳಿಗಾಗಿ ಯಾರೂ ಕಚೇರಿಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. 2000ನೇ ಇಸವಿಯಲ್ಲಿ ಜಾರಿಗೆ ಬಂದ ಭೂಮಿ ತಂತ್ರಜ್ಞಾನದಂತೆ, ಈಗ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲೇ ಪಹಣಿ, ಮ್ಯುಟೇಷನ್‌ಗಳನ್ನು ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದ್ದರಿಂದ ಇಲಾಖೆಯ ಸಿಬ್ಬಂದಿ ದಾಖಲೆಗಳ ಮಹತ್ವವನ್ನು ಅರಿತು ಕೆಲಸ ಮಾಡಬೇಕು ಎಂದರು.  

ಕಡತಗಳ ನಿರ್ವಹಣೆ ಲೋಪ ಸಲ್ಲದು :

ಸಾರ್ವಜನಿಕ ಕಚೇರಿಗಳಲ್ಲಿ ಕಡತಗಳ ನಿರ್ವಹಣೆ ಮತ್ತು ಸಂರಕ್ಷಣೆ ಅತ್ಯಂತ ಪ್ರಮುಖವಾಗಿದೆ. ಎಷ್ಟೋ ಬಾರಿ ಕಡತಗಳ ನಿರ್ವಹಣೆಯನ್ನು ಸರಿಯಾಗಿ ಮಾಡದ ಕಾರಣ, ಮಾಹಿತಿ ಆಯೋಗದ ಮುಂದೆ ಅಧಿಕಾರಿಗಳು ಚಿರಾಮಾರಿ ಆಕ್ಷೇಪಣೆ ಎದುರಿಸುವುದು, ದಂಡ ಕಟ್ಟುವುದು ಹಾಗೂ ನ್ಯಾಯಾಲಯಗಳಲ್ಲಿ ತಲೆ ತಗ್ಗಿಸಿ ನಿಲ್ಲುವಂತಹ ಪ್ರಸಂಗಗಳು ಎದುರಾಗುತ್ತಿವೆ. 

ಇದನ್ನೂ ಓದಿ: ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಖಾಸಗಿ ಬಸ್‌ ಮಾಲಿಕರ ತೀರ್ಮಾನ

ಸಾರ್ವಜನಿಕ ದಾಖಲೆಗಳ ಕಾಯ್ದೆಯ ಮಹತ್ವದ ಬಗ್ಗೆ ಅನೇಕರಿಗೆ ಇನ್ನು ಸರಿಯಾದ ಅರಿವಿಲ್ಲ. ವರ್ಗಾವಣೆಯಾದ ತಕ್ಷಣ ಕೆಲವರು ದಾಖಲೆಗಳನ್ನು ನೀಡುತ್ತಾರೆ, ಇನ್ನು ಕೆಲವರು ನೀಡುವುದಿಲ್ಲ. ಚಾರ್ಜ್ ತೆಗೆದುಕೊಳ್ಳುವವರೂ ಸಹ ಏನು ಕೊಡುತ್ತಿದ್ದಾರೋ ಅದನ್ನು ಸರಿಯಾಗಿ ಕೇಳಿ ಪಡೆದುಕೊಳ್ಳುವುದಿಲ್ಲ. ಕಚೇರಿಯ ರೆಕಾರ್ಡ್ ವಿಚಾರದಲ್ಲಿ ಕೇವಲ ಕೆಳಹಂತದ ನೌಕರರು ಮಾತ್ರವಲ್ಲದೆ, ಕಚೇರಿ ಮುಖ್ಯಸ್ಥರು, ಮ್ಯಾನೇಜರ್, ಶಿರಸ್ತೆದಾರರು ಸೇರಿದಂತೆ ಎಲ್ಲರಿಗೂ ಜವಾಬ್ದಾರಿ ಇರಬೇಕು. ಆದರೆ ಇಂದು ಅಧಿಕಾರಿಗಳು ನನ್ನ ಟೇಬಲ್ ಮೇಲೆ ಬರುವ ಫೈಲ್‌ಗೆ ಮಾತ್ರ ನಾನು ಸಹಿ ಮಾಡುವುದು ಎಂಬ ಮಟ್ಟಕ್ಕೆ ತಲುಪಿರುವುದು ವಿಷಾದನೀಯ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಜಿ.ಪಂ. ಕಾರ್ಯದರ್ಶಿ ಡಾ. ರಂಗಸ್ವಾಮಿ, ಇ-ಆಫೀಸ್ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವುದರಿಂದ ಮತ್ತು ದಾಖಲೆಗಳನ್ನು ನಿಯಮಾನುಸಾರ ವರ್ಗೀಕರಿಸಿ ಸಂರಕ್ಷಿಸುವುದರಿAದ ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಅಧಿಕಾರಿಗಳು ತಮ್ಮ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 

ದಾಖಲೆಗಳ ಸಂರಕ್ಷಣೆ ನಮ್ಮ ಕಾರ್ಯದ ರಕ್ಷಣೆಯು ಆಗಿದೆ. ಸಾರ್ವಜನಿಕರು ವೆಬ್‌ಸೈಟ್‌ಗಳ ಮೂಲಕ ಮಾಹಿತಿ ಪಡೆದು, ಕಚೇರಿಗಳಿಂದ ವಿವಿಧ ದಾಖಲೆಗಳನ್ನು ಕೇಳುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜಾರಿಗೆ ತಂದಿರುವ ‘ಇ-ಆಫೀಸ್’ ವ್ಯವಸ್ಥೆಯನ್ನು ನಾವೆಲ್ಲರೂ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದರಿಂದ ಹೆಚ್ಚಿನ ದಾಖಲೆಗಳು ಡಿಜಿಟಲೀಕರಣಗೊಂಡು ಸುಲಭವಾಗಿ ಲಭ್ಯವಾಗುತ್ತವೆ.

ಇದನ್ನೂ ಓದಿ: ತಾಂತ್ರಿಕ ಮತ್ತು ವೈದ್ಯಕೀಯ ಸ್ನಾತಕ ಪದವಿ ವಿದ್ಯಾಭ್ಯಾಸಕ್ಕಾಗಿ ಅರ್ಜಿ ಆಹ್ವಾನ

ಕಡತಗಳನ್ನು ಎ, ಬಿ, ಸಿ, ಡಿ ಎಂದು ಶಾಸ್ತ್ರೀಯವಾಗಿ ವರ್ಗೀಕರಿಸಿ ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಸರಿಯಾದ ದಾಖಲಾತಿ ನಿರ್ವಹಣೆ ಇಲ್ಲದಿದ್ದರೆ ಅಧಿಕಾರಿಗಳು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚೆಗೆ ಮಾಹಿತಿ ಆಯೋಗವು ಕಡತಗಳ ನಿರ್ವಹಣೆಯಲ್ಲಿನ ಲೋಪಕ್ಕಾಗಿ ಅಧಿಕಾರಿಯೊಬ್ಬರಿಗೆ 25,000 ರೂ. ದಂಡ ವಿಧಿಸಿರುವುದಲ್ಲದೆ, ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದೆ. 

ಕೇವಲ ಮನೆ ಮತ್ತು ಜಮೀನಿನ ದಾಖಲಾತಿಗಳ ನಿರ್ವಹಣೆಯಲ್ಲಿನ ನಿರ್ಲಕ್ಷö್ಯವೇ ಇದಕ್ಕೆ ಕಾರಣವಾಗಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಈ ಕಾರ್ಯಾಗಾರವು ಕೇವಲ ಇತರರಿಗಾಗಿ ಅಲ್ಲ, ನಮ್ಮನ್ನು ನಾವು ಇಲಾಖಾ ಮತ್ತು ಕಾನೂನು ಪ್ರಕ್ರಿಯೆಗಳಿಂದ ರಕ್ಷಿಸಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ. 

ಸಂಪನ್ಮೂಲ ವ್ಯಕ್ತಿಗಳು ನೀಡುವ ತಾಂತ್ರಿಕ ಮಾಹಿತಿಯನ್ನು ಪ್ರತಿಯೊಬ್ಬ ಅಧಿಕಾರಿಯೂ ಸರಿಯಾಗಿ ಅರ್ಥೈಸಿಕೊಂಡು ಕಚೇರಿಗಳಲ್ಲಿ ಅಳವಡಿಸಿಕೊಳ್ಳಬೇಕು. ಕಡತಗಳ ಸಂರಕ್ಷಣೆ ಕೇವಲ ಕಚೇರಿಯ ಕೆಲಸವಲ್ಲ; ಅದು ಅಧಿಕಾರಿ ಮತ್ತು ನೌಕರರ ವೃತ್ತಿಪರ ರಕ್ಷಣೆಯ ಕವಚವಾಗಿದೆ ಎಂದು ಡಾ.ರಂಗಸ್ವಾಮಿ ಹೇಳಿದರು.

ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?

ಕಾರ್ಯಾಗಾರದಲ್ಲಿ ಕಡತಗಳ ಮಹತ್ವ ಹಾಗೂ ದಾಖಲೆಗಳ ಡಿಜಿಟಲೀಕರಣ ಕುರಿತು ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ, ದಾಖಲೆಗಳ ಸಂರಕ್ಷಣಾ ವಿಧಾನಗಳು ಕುರಿತು ಹಿರಿಯ ಸಂಶೋಧಕ ಡಾ.ಜಯಸಿಂಹ, ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಮತ್ತು ನಿಯಮಗಳು 2013ರ ಪರಿಚಯ ಮತ್ತು ದಾಖಲೆಗಳ ನಿರ್ವಹಣೆ ಕುರಿತು ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ಜಂಟಿ ನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದಪ್ಪ, ಸೂಕ್ಶ್ಮ ಚಿತ್ರೀಕರಣ ವಿಧಾನದಲ್ಲಿ ದಾಖಲೆಗಳ ಸಂರಕ್ಷಣೆ ಕುರಿತು ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ತಾಂತ್ರಿಕ ಅಧಿಕಾರಿ ಕೆ.ನಾರಾಯಣ ಬಾಬು ಉಪನ್ಯಾಸ ನೀಡಿದರು.

ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsDocumentRevenue Departmentಕಂದಾಯ ಇಲಾಖೆಚಿತ್ರದುರ್ಗಚಿತ್ರದುರ್ಗ ನ್ಯೂಸ್ದಾಖಲೆ
Share This Article
Facebook Email Print
Previous Article ನಟ ಶರತ್ ಲೋಹಿತಾಶ್ವ ನಾಳೆ ಚಿತ್ರದುರ್ಗದಲ್ಲಿ ನಟ ಶರತ್ ಲೋಹಿತಾಶ್ವಗೆ ಗೌರವ ಸನ್ಮಾನ 
Leave a Comment

Leave a Reply Cancel reply

Your email address will not be published. Required fields are marked *

ನಟ ಶರತ್ ಲೋಹಿತಾಶ್ವ
ನಾಳೆ ಚಿತ್ರದುರ್ಗದಲ್ಲಿ ನಟ ಶರತ್ ಲೋಹಿತಾಶ್ವಗೆ ಗೌರವ ಸನ್ಮಾನ 
ಮುಖ್ಯ ಸುದ್ದಿ
ಖಾಸಗಿ ಬಸ್ ಮಾಲೀಕರ ಸಂಘದ ಸಭೆ
ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಖಾಸಗಿ ಬಸ್‌ ಮಾಲಿಕರ ತೀರ್ಮಾನ
ಮುಖ್ಯ ಸುದ್ದಿ
ತಾಂತ್ರಿಕ ಮತ್ತು ವೈದ್ಯಕೀಯ ಸ್ನಾತಕ ಪದವಿ ವಿದ್ಯಾಭ್ಯಾಸಕ್ಕಾಗಿ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
ಮಾರುಕಟ್ಟೆ ಧಾರಣೆ
ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up