CHITRADURGA NEWS | 30 JULY 2026
ಚಿತ್ರದುರ್ಗ: ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ಗಡುವು ವಿಸ್ತರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣದವರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯನ್ನು ಮೊದಲ ಆದ್ಯತೆಯಲ್ಲಿ ಬರ ಘೋಷಿಸಿ | ಆರ್.ಅಶೋಕ್
ಜಿಲ್ಲೆಯಲ್ಲಿ ಮಳೆ ಬಾರದ ಕಾರಣ ರೈತರು ಬೆಳೆ ವಿಮೆ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಶೇ.15 ರಿಂದ 20 ರಷ್ಟು ಮಾತ್ರ ಬಿತ್ತನೆಯಾಗಿದ್ದು, ಮೊಳಕೆಯೊಡೆದು ಅರ್ಧ ಅಡಿಯಿಂದ ಒಂದು ಅಡಿ ಎತ್ತರವಾಗಿರುವ ಬೆಳೆಗಳಿಗೆ ಮಾತ್ರ ರೈತರು ವಿಮೆ ಕಟ್ಟಿದ್ದಾರೆ. ಕೆಲವು ಕಡೆ ಬೀಜ ಮೊಳಕೆಯೊಡೆದು ಮೇಲೆ ಬಾರದೆ ಭೂಮಿಯಲ್ಲಿಯೇ ಕಮರಿ ಹೋಗುತ್ತಿದೆ. ಹೀಗಿರುವಾಗ ರೈತರು ಬೆಳೆ ವಿಮೆ ಪಾವತಿಸಲು ಹೇಗೆ ಸಾಧ್ಯ.
ಕೃಷಿ ಇಲಾಖೆ ಅಧಿಕಾರಿಗಳು ರೈತರ ಮುಖಂಡರುಗಳ ಸಭೆ ನಡೆಸಿ ಬೆಳೆ ವಿಮೆ ಕಟ್ಟಿ ಬಿತ್ತನೆ ಮಾಡಿದ್ದರೂ ಅಥವಾ ಬಿತ್ತನೆ ಮಾಡದಿದ್ದರೂ ವಾಡಿಕೆಗಿಂತ ಜಾಸ್ತಿ ಮಳೆ ಬಾರದೆ ಇದ್ದರೆ ಬೆಳೆ ವಿಮೆ ಕಂಪನಿಯವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶೀಲಿಸಿ ಶೇ.25 ರಷ್ಟು ಹಣವನ್ನು ಖಾತೆಗೆ ಜಮಾ ಮಾಡುತ್ತಾರೆಂದು ತಿಳಿಸಿರುವ ಕಾರಣ ರೈತರು ಬೆಳೆ ವಿಮೆ ಪಾವತಿಸಲು ಮುಂದಾಗಿರುವುದರಿಂದ ಆ.20 ರವರೆಗೆ ಬೆಳೆ ವಿಮೆ ಪಾವತಿಗೆ ಗಡುವು ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮಿಕಾಂತ್ ಲಿಂಗಾವರಹಟ್ಟಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಇದನ್ನೂ ಓದಿ: ಹಿರಿಯೂರು ಉಪಚುನಾವಣೆ | ಕಾಂಗ್ರೆಸ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕೆಪಿಸಿಸಿ
ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲೋಲಾಕ್ಷಮ್ಮ, ಜಿಲ್ಲಾ ಕಾರ್ಯಾಧ್ಯಕ್ಷ ಓಂಕಾರಪ್ಪ ಎಸ್. ಕಾಂತರಾಜ್ ಎಸ್, ಪಿ.ನಾಗರಾಜ್, ಮಂಜುಳ ಕೊಳಹಾಳ್ ಹಾಜರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

