
CHITRADURGA NEWS | 25 JUNE 2024
ಚಿತ್ರದುರ್ಗ: ಭೀಕರವಾಗಿ ಹತ್ಯೆಯಾಗಿರುವ ಚಿತ್ರದುರ್ಗದ ರೇಣುಕಸ್ವಾಮಿಗೆ ಸರ್ಕಾರಿ ಉದ್ಯೋಗದ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ನಟ ದರ್ಶನ್ ಪ್ರಕರಣದಲ್ಲಿ ಸಾವಿಗೀಡಾಗಿರುವ ಚಿತ್ರದುರ್ಗದ ಕೆ.ಎಸ್.ರೇಣುಕಸ್ವಾಮಿ ತಂದೆ ಶಿವನಗೌಡರು ಹಾಗೂ ತಾಯಿ ರತ್ನಪ್ರಭ ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.

ಇದನ್ನೂ ಓದಿ: ನಕ್ಷತ್ರ ಆಮೆ ಕಳ್ಳತನ ಮಾಡುತ್ತಿದ್ದ ನಾಲ್ಕು ಜನರ ಬಂಧನ | 32 ನಕ್ಷತ್ರ ಆಮೆಗಳು ವಶಕ್ಕೆ
ಈ ವೇಳೆ ನಮ್ಮಿಬ್ಬರಿಗೂ ವಯಸ್ಸಾಗಿದೆ. ರೇಣುಕಸ್ವಾಮಿ ಪತ್ನಿ 5 ತಿಂಗಳ ಗರ್ಭಿಣಿ. ಈ ಹಿನ್ನೆಲೆಯಲ್ಲಿ ಸಹನಾಗೆ ಬದುಕು ಕಟ್ಟಿಕೊಡಬೇಕಿದೆ. ಆದ್ದರಿಂದ ಸರ್ಕಾರದಿಂದ ಆಕೆಗೆ ಉದ್ಯೋಗ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಶಿವನಗೌಡರು ಹಾಗೂ ರತ್ನಪ್ರಭ ಮನವಿ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮಹಿಳೆಗೆ ನ್ಯಾಯ ದೊರಕಿಸಿದ ಸದ್ಧರ್ಮ ನ್ಯಾಯಪೀಠ | ಸಿರಿಗೆರೆ ಸ್ವಾಮೀಜಿಗೆ ಗೌರವ
ಮುಖ್ಯಮಂತ್ರಿಗಳ ಭೇಟಿ ವೇಳೆ, ರೇಣುಕಸ್ವಾಮಿ ತಾಯಿ ರತ್ನಪ್ರಭ ಹಾಗೂ ತಂದೆ ಶಿವನಗೌಡರು ಮಗನನ್ನ ನೆನೆದು ಕಣ್ಣಿರಿಟ್ಟರು. ಮಗನನ್ನು ವಿಕೃತವಾಗಿ ಕೊಲೆ ಮಾಡಿರುವುದನ್ನು ನೆನೆಸಿಕೊಂಡಾಗೆಲ್ಲಾ ಸಂಕಟವಾಗುತ್ತದೆ. ಎಷ್ಟು ನೋವು ಅನುಭವಿಸಿದ್ದಾನೋ ಎಂದು ನೆನೆದು ಕಣ್ಣಿರಿಟ್ಟರು. ಇಬ್ಬರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಧಾನಪಡಿಸಿದರು.
ಮಗನ ಸಾವಿನ ಕುರಿತು ಪೊಲೀಸರು ನಡೆಸುತ್ತಿರುವ ತನಿಖೆ ನಮಗೆ ಸಮಾಧಾನ ತಂದಿದೆ ಎಂದು ಸಿದ್ದರಾಮಯ್ಯ ಅವರಿಗೆ ವಿವರಿಸಿದರು.
ಇದನ್ನೂ ಓದಿ: ಅಂಬೇಡ್ಕರ್ ವೃತ್ತದಲ್ಲಿ ಗಾಳಿಗೆ ಬಿದ್ದ ಮರ | ಪಲ್ಸರ್ ಬೈಕ್ ಟ್ಯಾಂಕ್ ಜಖಂ
ಈ ವೇಳೆ ಕೃಷಿ ಸಚಿವ ಚೆಲುವರಾಸ್ವಾಮಿ, ಮಾಜಿ ಸಚಿವ ಎಚ್.ಆಂಜನೇಯ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
