
CHITRADURGA NEWS | 14 JUNE 2024
ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಆರೋಪಿ ಅನು(ಅನಿಲ್ ಕುಮಾರ್ ) ಸಂಜೆ ಪೊಲೀಸರಿಗೆ ಶರಣಾದ ವಿಷಯವನ್ನು ಟಿವಿಯಲ್ಲಿ ನೋಡಿದ ತಂದೆ ಚಂದ್ರಣ್ಣ (60) ಮನೆ ಬಳಿ ಏಕಾಏಕಿ ಕುಸಿದು ಬಿದ್ದ ಲೋ ಬಿಪಿದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: 30 ಸಾವಿರದವರೆಗೆ ಉಚಿತ ಚಿಕಿತ್ಸೆ | ಹೆದ್ದಾರಿ ಪ್ರಯಾಣಿಕರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ನೆರವು
ಮೊದಲು ಪೆಟ್ರೋಲ್ ಬಂಕಿನಲ್ಲಿ ಕೆಲಸ:
ಆರೋಪಿ ಅನಿಲ್ ಕುಮಾರ್ (ಅನು) ಚಿತ್ರದುರ್ಗ ಮೂಲದವನು. ಚಿತ್ರದುರ್ಗ ನಗರದ ಸಿಹಿ ನೀರು ಹೊಂಡದ ರಸ್ತೆಯಲ್ಲಿರುವ ಈತನ ಮನೆಯಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ | ಪೊಲೀಸರಿಗೆ ಶರಣಾದ ಚಿತ್ರದುರ್ಗದ ಜಗ್ಗು, ಅನು
ತಾಯಿ ಜಯಮ್ಮ, ತಂದೆ ಚಂದ್ರಪ್ಪ ದಂಪತಿಯ ಪುತ್ರನೀತ. ಕಳೆದ ಮೂರು ವರ್ಷದಿಂದ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು, ಇದಕ್ಕಿಂತ ಮೊದಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದನು. ಅನು ಸಭ್ಯ ಹುಡುಗನಾಗಿದ್ದು ಅಕ್ಕನ ಮದುವೆ ಕೂಡ ಮಾಡಿದ್ದನು. ಆದರೆ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಮಾತಿಗೆ ಮರುಳಾಗಿ ಇದೀಗ ಪೊಲೀಸರ ವಶದಲ್ಲಿದ್ದಾನೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
