CHITRADURGA NEWS | 28 MARCH 2025
ಹಿರಿಯೂರು: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಮಾರ್ಚ್ 28ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
Also Read: ಸರ್ಕಾರಿ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಒದಗಿಸುವಂತೆ ಡಿಸಿಗೆ ಮನವಿ
ಹಿರಿಯೂರು ನಗರಸಭೆ ಪೌರಾಯುಕ್ತರ ಕೋರಿಕೆಯಂತೆ ಹಿರಿಯೂರು ಪಟ್ಟಣದಲ್ಲಿ ಟಿ.ಬಿ.ಸರ್ಕಲ್‍ನಿಂದ ಹುಳಿಯಾರ್ ರಸ್ತೆಯವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಇದೇ ಮಾರ್ಚ್ 28ರಂದು ಹಿರಿಯೂರು 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಎಫ್-09 ಹುಳಿಯಾರ್ ರೋಡ್ ಮತ್ತು ಎಫ್-03 ಎನ್.ಜೆ.ವೈ ದೊಡ್ಡಘಟ್ಟ 11 ಕೆ.ವಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
Also Read: KSRTC ಬಸ್ ನಿಲ್ದಾಣದ ಅಂಗಡಿಗಳಲ್ಲಿ ಅವಧಿ ಮೀರಿದ ನೀರು ಮಾರಾಟ | ಆಯೋಗದ ಅಧ್ಯಕ್ಷ ಟಿ.ಶಾಮ್ ಭಟ್ ತೀವ್ರ ಅಸಮಾಧಾನ
ಹಿರಿಯೂರು ಪಟ್ಟಣದ ಆವಧಾನಿನಗರ, ಗಾಂಧಿನಗರ, ಹುಳಿಯೂರು ರಸ್ತೆ, ಲಕ್ಷ್ಮಮ್ಮ ಬಡಾವಣೆ, ಎಲ್‍ಐಸಿ ಬಡಾವಣೆ, ಹರಿಶ್ಚಂದ್ರ ಘಾಟ್, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಸೀಗೇಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಪೀರ್‍ಸಾಬ್ ಕೋರಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
