
CHITRADURGA NEWS | 23 JUNE 2024
ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ಏಕಾಂತಯ್ಯ ಸೇರಿದಂತೆ ಹಲವು ಮುತ್ಸದ್ದಿ ರಾಜಕಾರಣಿಗಳು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಸಮರ್ಥರಿದ್ದಾರೆ. ಈ ಬಗ್ಗೆ ನೂತನ ಸಂಸದರಿಗೆ ಚಿಂತೆ ಬೇಡ ಎಂದು ಸಂಸದ ಕಾರಜೋಳ ಅವರನ್ನು ಶಾಸಕ ಬಿ.ಜಿ. ಗೋವಿಂದಪ್ಪ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ಹೊಸದುರ್ಗ ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಎಲ್ಲ ತಾಲ್ಲೂಕುಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೇ ಮಾತನಾಡುತ್ತಾರೆ. ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆಗೆ ಎಷ್ಟು ಬಾರಿ ಭೇಟಿ ನೀಡಿದ್ದೀರಾ? ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆ ಮಾಡಿದ್ದೀರಾ?’ ಎಂದು ಗೋವಿಂದಪ್ಪ ಪ್ರಶ್ನಿಸಿದರು.
ಕ್ಲಿಕ್ ಮಾಡಿ ಓದಿ: ದೆಹಲಿ ಸಿಎಂ ಕೇಜ್ರಿವಾಲ್ ಬಿಡುಗಡೆ | ಚಿತ್ರದುರ್ಗ ಎಎಪಿ ಕಾರ್ಯಕರ್ತರ ಸಂಭ್ರಮ
‘ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎಂಬ ಮಾತನ್ನು ಹಿಂಪಡೆದು, ರಾಜ್ಯ ಸರ್ಕಾರದ ವಿರುದ್ಧ ಮಾತನಾಡದೇ ಕೇಂದ್ರದಿಂದ ಅನುದಾನ ತಂದು ಬಾಕಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿ. ಮಾತು ಕಡಿಮೆ ಮಾಡಿ, ಕೆಲಸ ಮಾಡಿ’ ಎಂದರು.

‘367 ಕೆರೆಗಳಿಗೆ ನೀರು ತುಂಬಿಸಲು ಅನುಮತಿ ನೀಡಿದ್ದು ಕಾಂಗ್ರೆಸ್ ಸರ್ಕಾರ. ಮಾಡದಕೆರೆ ಹಾಗೂ ಕಸಬಾ ಹೋಬಳಿ ಕೆರೆಗಳಿಗೆ ಸದ್ಯದಲ್ಲೇ ಭದ್ರಾ ನೀರು ಬರಲಿದ್ದು, ಪ್ರಥಮ ಫಲಾನುಭವಿಗಳು ಹೊಸದುರ್ಗ ತಾಲ್ಲೂಕಿನವರಾಗುತ್ತಾರೆ. ಇಲ್ಲಿ ನೂತನ ಸಂಸದರು ಮಾಡುವಂತಹ ಕೆಲಸವಿಲ್ಲ’ ಎಂದು ಹರಿಹಾಯ್ದರು.
ಕ್ಲಿಕ್ ಮಾಡಿ ಓದಿ: ವಿದ್ಯಾನಗರದ ಬೋಟ್‍ಹೌಸ್‍ನಲ್ಲಿ ಯೋಗ ದಿನಾಚರಣೆ
ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಮಾತನಾಡಿ, ‘ಶಿಕ್ಷಕರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳ ಅರಿವಿದೆ. ಏಳನೇ ವೇತನ ಆಯೋಗ ಜಾರಿ, ಒಪಿಎಸ್ ಜಾರಿ, ಅನುದಾನಿತ ಶಾಲೆಗಳ ಬಲಪಡಿಸುವಿಕೆ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಾಮಾಣಿಕ ಪ್ರಯತ್ನ ಮಾಡಿ, ಸಮಸ್ಯೆಗಳಿಗೆ ಅಂತ್ಯ ಹಾಡುವೆ’ ಎಂದು ಭರವಸೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ್, ಲೋಕೇಶ್ವರಪ್ಪ, ಕೆಪಿಸಿಸಿ ಸದಸ್ಯರಾದ ಎಂ.ಪಿ. ಶಂಕರ್, ಅಲ್ತಾಫ್ ಪಾಷಾ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಶೇಖರಪ್ಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಉಪನ್ಯಾಸಕರ ಸಂಘದ ಅಧ್ಯಕ್ಷ ಕಾಂತರಾಜ್ ಎ., ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಕಾಂಗ್ರೆಸ್ ಮುಖಂಡರಾದ ಗೋ. ತಿಪ್ಪೇಶ್, ಯಶ್ವಂತ್ ಗೌಡ, ರಾಜೇಂದ್ರ ಪ್ರಸಾದ್, ದೀಪಿಕಾ ಸತೀಶ್, ಎಂ.ಎಚ್ ಕೃಷ್ಣಮೂರ್ತಿ, ಲೋಕೇಶ್ವರಪ್ಪ, ನಾಯಿಗೆರೆ ಚಂದ್ರಶೇಖರ್, ಕೆಂಚಪ್ಪ, ಹನುಮನಾಯ್ಕ, ಟಿ. ರವೀಂದ್ರ, ಅಜ್ಜಪ್ಪ ಬನಸೀಹಳ್ಳಿ, ಕೆ.ಸಿ ನಿಂಗಪ್ಪ, ಸುಬ್ಬಣ್ಣ, ನೇತ್ರಾವತಿ, ಇಲ್ಕಲ್ ಅಜ್ಜಪ್ಪ, ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಶಶಿಧರ್, ಜಯಣ್ಣ, ಸುರೇಶ್ ಆರ್. ಲಕ್ಷ್ಮಯ್ಯ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

