ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ಕುದಾಪುರದಲ್ಲಿ ನೆಲೆ ನಿಂತಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ-ISRO) ಮರು ಬಳಕೆ ಮಾಡಬಹುದಾದ ಉಡಾವಣಾ ವಾಹನ ಅಭಿವೃದ್ಧಿ ಪಡಿಸಿದ್ದು, ಸತತ ಪ್ರಯೋಗಗಳಲ್ಲಿ ಯಶಸ್ಸು ಕಂಡಿದೆ.
‘ಪುಷ್ಪಕ್’ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿರುವ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (RLV) ಲ್ಯಾಂಡಿಂಗ್ ಪ್ರಯೋಗದಲ್ಲಿ (LEX) ಸತತ ಮೂರನೇ ಬಾರಿಗೆ ಯಶಸ್ವಿಯಾಗಿದೆ.

ಇದನ್ನೂ ಓದಿ: ಚಳ್ಳಕೆರೆ ATRನಲ್ಲಿ ಇಸ್ರೋ ಮಹತ್ವದ ಸಾಧನೆ | ಮರುಬಳಕೆಯ ರಾಕೇಟ್ ಪುಷ್ಪಕ್ ಯಶಸ್ವಿ ಲ್ಯಾಂಡಿಂಗ್
ಜೂ.23 ಬೆಳಗ್ಗೆ 7.10ಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಕುದಾಪುರ ಬಳಿಯಿರುವ ವಾಯು ನೆಲೆ (ಏರೋನಾಟಿಕಲ್ ಟೆಸ್ಟ್ ರೇಂಜ್ – ATR)ಯಲ್ಲಿ ಈ ಪರೀಕ್ಷೆ ನಡೆದಿದೆ ಎಂದು ಇಸ್ರೋ ಎಕ್ಸ್ (X) ಖಾತೆಯಲ್ಲಿ ಪ್ರಕಟಿಸಿದೆ.
LEX-03 ಸರಣಿಯ ಮೂರನೇ ಮತ್ತು ಅಂತಿಮ ಪರೀಕ್ಷೆ ಇದಾಗಿದೆ. RLV LEX-01 ಮತ್ತು LEX-02 ಕಾರ್ಯಾಚರಣೆಗಳ ಯಶಸ್ಸಿನ ನಂತರ, RLV LEX-03 ಹೆಚ್ಚು ಸವಾಲಿನ ಪರೀಕ್ಷೆಯಾಗಿತ್ತು.
ಇದನ್ನೂ ಓದಿ: ಹಲ್ಲೆ ನಡೆಸಿ ಮನೆ ದರೋಡೆ | ಸ್ಥಳಕ್ಕೆ ಎಸ್ಪಿ ಭೇಟಿ
ಹೇಗಿತ್ತು ಪುಷ್ಪಕ್ ಲ್ಯಾಂಡಿಂಗ್ ಪರೀಕ್ಷೆ:
ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‍ನಲ್ಲಿ ಭಾನುವಾರ ಬೆಳಗ್ಗೆ ಸರ್ವ ಸನ್ನದ್ಧರಾಗಿದ್ದ ಇಸ್ರೋ ವಿಜ್ಞಾನಿಗಳ ತಂಡ, ‘ಚಿನೂಕ್’ ಹೆಲಿಕಾಪ್ಟರ್ ಮೂಲಕ ‘ಪುಷ್ಪಕ್’ ಲ್ಯಾಂಡಿಂಗ್ ವಾಹನವನ್ನು ರನ್-ವೇ ಯಿಂದ 4.5 ಕಿ.ಮೀ ಎತ್ತರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಬಿಡುಗಡೆ ಮಾಡಿತು.
ಸಾಕಷ್ಟು ಗಾಳಿ, ಒತ್ತಡದ ಪರಿಸ್ಥಿತಿಯಲ್ಲೂ ರೆಕ್ಕೆಗಳಿಲ್ಲದ ಪುಷ್ಪಕ್ ತನ್ನಲ್ಲಿರುವ ತಂತ್ರಜ್ಞಾನದ ಬಲದಿಂದ ರನ್‍ವೇ ಸಮೀಪಿಸಿತು. ರನ್‍ವೇ ಸೆಂಟರ್‍ಲೈನ್‍ನಲ್ಲಿ ನಿಖರವಾದ ಸಮತಲ ಲ್ಯಾಂಡಿಂಗ್ ಮಾಡಲಾಯಿತು.
ಇದನ್ನೂ ಓದಿ: ವಿಜಯೇಂದ್ರ ನೇತೃತ್ವದಲ್ಲಿ ಚಿತ್ರದುರ್ಗ ಡಿಸಿ ಕಚೇರಿಗೆ ಮುತ್ತಿಗೆ ಬಿಜೆಪಿ ನಿರ್ಧಾರ
ಲ್ಯಾಂಡಿಂಗ್ ವೇಗವು ಪ್ರತಿ ಗಂಟೆಗೆ 320 ಕಿ.ಮೀ ಮೀರಿತ್ತು. ಈ ವೇಗ ವಾಣಿಜ್ಯ ವಿಮಾನಗಳಲ್ಲಿ ಪ್ರತಿ ಗಂಟೆಗೆ 260 ಕಿ.ಮೀ ಮತ್ತು ಸಾಮಾನ್ಯ ಯುದ್ಧ ವಿಮಾನಕ್ಕೆ ಹೋಲಿಸಿದರೆ ಪ್ರತಿ ಗಂಟೆಗೆ 280 ಕಿ.ಮೀ ಇರುತ್ತದೆ.
VIDEO: ಯಶಸ್ವಿಯಾಗಿ ಲ್ಯಾಂಡ್ ಆದ ಪುಷ್ಪಕ್ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪುಷ್ಪಕ್ ಭೂಮಿಗೆ ಲ್ಯಾಂಡ್ ಆದ ತಕ್ಷಣ ವೇಗ ಕಡಿಮೆ ಮಾಡಲು ಬ್ರೇಕ್ ಪ್ಯಾರಾಚೂಟ್ ಬಳಸಿದ್ದು, ಈ ವೇಳೆ ಸುಮಾರು 100 ಕಿ.ಮೀ ವೇಗ ತಗ್ಗಿತು. ಆನಂತರ ಲ್ಯಾಂಡಿಂಗ್ ಗೇರ್ ಬ್ರೇಕ್‍ಗಳನ್ನು ಬಳಸಿ ಮತ್ತಷ್ಟು ನಿಧಾನಗೊಳಿಸಲಾಯಿತು. ರನ್‍ವೇ ಉದ್ದಕ್ಕೂ ಸ್ಥಿರ ಮತ್ತು ನಿಖರವಾಗಿ ನೋಸ್ ವೀಲ್ ಸೇರಿಂಗ್ ಮೂಲಕ ಸಾಗಿತು.
ಇದನ್ನೂ ಓದಿ: ಆಯಾ ಹುದ್ದೆ | ಅರ್ಜಿ ಆಹ್ವಾನ
ಅತ್ಯಂತ ನಿರ್ಣಾಯಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಈ ಕಾರ್ಯಾಚರಣೆಯನ್ನು ಇಸ್ರೋ ನಡೆಸಿದೆ ಎಂದು ಎಕ್ಸ್ ಖಾತೆಯಲ್ಲಿ ವಿವರಿಸಿದೆ.

ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ (RLV) ಅಭಿವೃದ್ಧಿಗೆ ಅಗತ್ಯವಿದೆ. ಈ ಮಿಷನ್ ಮೂಲಕ, ಭವಿಷ್ಯದ ಕಕ್ಷೀಯ ಮರು-ಪ್ರವೇಶ ಮಿಷನ್‍ಗೆ ಅತ್ಯಗತ್ಯವಾಗಿರುವ ರೇಖಾಂಶ ಮತ್ತು ಲ್ಯಾಟರಲ್ ಪ್ಲೇನ್ ದೋಷ ತಿದ್ದುಪಡಿಗಳನ್ನು ಪೂರೈಸುವ ಸುಧಾರಿತ ಮಾರ್ಗದರ್ಶನ ಅಲ್ಗಾರಿದಮ್ ಅನ್ನು ಮೌಲ್ಯೀಕರಿಸಲಾಗಿದೆ. RLV-LEX ಇನರ್ಷಿಯಲ್ ಸೆನ್ಸರ್, ರಾಡಾರ್ ಅಲ್ಟಿಮೀಟರ್, ಫ್ಲಶ್ ಏರ್ ಡೇಟಾ ಸಿಸ್ಟಮ್, ಸ್ಯೂಡೋಲೈಟ್ ಸಿಸ್ಟಮ್ ಮತ್ತು ಓಚಿvIಅ ನಂತಹ ಸಂವೇದಕಗಳನ್ನು ಒಳಗೊಂಡಂತೆ ಮಲ್ಟಿಸೆನ್ಸರ್ ಸಮ್ಮಿಲನವನ್ನು ಬಳಸಿದೆ ಎಂದಿದೆ.
ಇದನ್ನೂ ಓದಿ: ಪಹಣಿಗೆ ಆಧಾರ್ ಜೋಡಣೆಗೆ ಟಾರ್ಗೆಟ್ ಫಿಕ್ಸ್ ಮಾಡಿದ ಡಿಸಿ
ಈ ಕಾರ್ಯಾಚರಣೆಯಲ್ಲಿ VSSC ನೇತೃತ್ವದ ಮಿಷನ್, ಭಾರತೀಯ ವಾಯುಪಡೆ (IAF), ಏರೋನಾಟಿಕಲ್ ಡೆವಲಪ್‍ಮೆಂಟ್ ಎಸ್ಟಾಬ್ಲಿμïಮೆಂಟ್ ADE), ವೈಮಾನಿಕ ವಿತರಣಾ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ADRDE) ಬೆಂಬಲದೊಂದಿಗೆ ISRO ಕೇಂದ್ರಗಳಾದ SAC, ISTRAC, SDSC-SHAR ಒಳಗೊಂಡ ಸಹಕಾರ ಪಡೆಯಲಾಗಿದೆ.

ಇದೊಂದು ಸರಣಿ ಯಶಸ್ಸಿನ ಕಾರ್ಯಾಚರಣೆ. ಇದರಲ್ಲಿ ಭಾಗಿಯಾಗಿರುವ ಎಲ್ಲ ವಿಜ್ಞಾನಿಗಳ ತಂಡಕ್ಕೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಮಲ್ಲಿಕಾರ್ಜುನ ಜಗದ್ಗುರುಗಳ ಸ್ಮರಣೋತ್ಸವ | ಎಸ್‍ಜೆಎಂ ವಿದ್ಯಾಪೀಠ ಸಂಸ್ಥಾಪನಾ ದಿನಾಚರಣೆಗೆ ತೀರ್ಮಾನ
VSSC ನಿರ್ದೇಶಕರಾದ ಡಾ.ಎಸ್.ಉನ್ನಿಕೃಷ್ಣನ್ ನಾಯರ್, ಈ ಸ್ಥಿರ ಯಶಸ್ಸು ಭವಿಷ್ಯದ ಕಕ್ಷೆಯ ಮರು-ಪ್ರವೇಶ ಕಾರ್ಯಾಚರಣೆಗಳಿಗೆ ಅಗತ್ಯವಾದ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಇಸ್ರೋದ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ.
ಮಿಷನ್ ನಿರ್ದೇಶಕರಾಗಿ ಜೆ.ಮುತ್ತುಪಾಂಡಿಯನ್ ಹಾಗೂ ಬಿ.ಕಾರ್ತಿಕ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
