ಮುಖ್ಯ ಸುದ್ದಿ
AMERICA ಅಕ್ಕ ಸಮ್ಮೇಳನದಲ್ಲಿ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) | ವ್ಯವಹಾರದ ಯಶಸ್ಸಿನ ಕುರಿತ ಮಾತು-ಕಥೆಯಲ್ಲಿ ಭಾಗೀ

CHITRADURGA NEWS | 03 SEPTEMBER 2024
ಚಿತ್ರದುರ್ಗ: ಅಮೇರಿಕಾದ(AMERICA) ಅನಿವಾಸಿ ಕನ್ನಡಿಗರು ಎರಡು ವರ್ಷಕ್ಕೊಮ್ಮೆ ನಡೆಸುವ ಅಕ್ಕ ಕನ್ನಡ ಸಮ್ಮೇಳನ ಈ ಭಾರಿ ಹೆಚ್ಚು ಗಮನ ಸೆಳೆದಿದೆ. ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯ ಇಬ್ಬರು ಈ ಸಮ್ಮೇಳನದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿಯಾಗಿದೆ.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಅಕ್ಕ ಕನ್ನಡ ಸಮ್ಮೇಳನದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ತಮ್ಮ ಉದ್ಯಮದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎದುರಿನಲ್ಲೇ ಕೈ ಕಾರ್ಯಕರ್ತರ ವಾಗ್ವಾದ
ಇವರೊಟ್ಟಿಗೆ ಮಾಜಿ ಸಚಿವರಾದ ಎಚ್.ಆಂಜನೇಯ ಕೂಡಾ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿ ರಾಜ್ಯದಿಂದ ತೆರಳಿದ್ದಾರೆ.
ಕೆಸಿನೊ ಉದ್ಯಮದಲ್ಲಿ ಪಪ್ಪೀಸ್ ಬ್ರಾಂಡ್ ಸೃಷ್ಟಿ
ಅಕ್ಕ ಸಮ್ಮೇಳನದ ಬ್ಯುಸಿನೆಸ್ ಫೋರಮ್‍ನಲ್ಲಿ ಶಾಸಕರಾದ ಕೆ.ಸಿ.ವೀರೇಂದ್ರ(ಪಪ್ಪಿ) ಬ್ಯುಸಿನೆಸ್ ಜರ್ನಿ ಸಕ್ಸ್‍ಸ್ ಸ್ಟೋರಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಬದುಕಿನ ಹಾದಿಯನ್ನು ಹಂಚಿಕೊಂಡಿದ್ದಾರೆ.
ಪುಟ್ಟ ತಾಲೂಕು ಕೇಂದ್ರ ಚಳ್ಳಕೆರೆಯಲ್ಲಿ ಬೆಳೆದು ಬಂದ ನಾನು ಇಂದು ಕೆಸಿನೊ ಉದ್ಯಮದಲ್ಲಿ ಪಪ್ಪೀಸ್ ಬ್ರಾಂಡ್ ಸೃಷ್ಟಿ ಮಾಡಿರುವ ಸಾಹಸಗಾಥೆ ಹೇಳಿದ್ದಾರೆ.
ಇದನ್ನೂ ಓದಿ: ಎಸ್.ನಿಜಲಿಂಗಪ್ಪ ಮನೆ ಖರೀದಿಗೆ ಮುಂದಾದ ಕಾಂಗ್ರೆಸ್
ಗೋವಾದಲ್ಲಿ ಎರಡು, ಶ್ರೀಲಂಕಾ, ನೇಪಾಳ, ಜಾರ್ಜಿಯಾದಲ್ಲಿ ತಮ್ಮ ಕೆಸಿನೋ ವ್ಯವಹಾರವಿದೆ. ಈಗ ವೇಗಾಸ್‍ನಲ್ಲಿ ಪ್ರಯತ್ನ ಮುಂದುವರೆದಿದೆ ಎಂದು ವೀರೇಂದ್ರ(ಪಪ್ಪಿ) ತಿಳಿಸಿದ್ದಾರೆ.
ವ್ಯವಹಾರದಲ್ಲಿ ನಾನು ನಾಲ್ಕನೇ ತಲೆಮಾರಿನವನು, ಕುಟುಂಬ ಸಾಕಷ್ಟು ಏರಿಳಿತ ಕಂಡಿದೆ. 80ರ ದಶಕದಲ್ಲಿ ಟಿಎಟಿ ಕುಟುಂಬ ಎಂದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಸರು ಮಾಡಿತ್ತು. ಕಾಟನ್ ಜಿನ್ನಿಂಗ್, ಎಣ್ಣೆ ಮಿಲ್‍ಗಳು ಸೇರಿದಂತೆ ಸಾಕಷ್ಟು ಉದ್ಯಮಗಳಿದ್ದವು.
ಇದನ್ನೂ ಓದಿ: ಅಕ್ಕ ಸಮ್ಮೇಳನದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಭಾಗೀ
ಸರಿಯಾಗಿ ದುಡಿಯುವ ಸಂದರ್ಭಕ್ಕೆ ನಮ್ಮ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿತ್ತು. ನಾನು ವ್ಯಾಪಾರಕ್ಕೆ ಬರುವ ವೇಳೆಗೆ ನಾವು ಎಲ್ಲ ಕಳೆದುಕೊಂಡಿದ್ದೆವು. ನನ್ನ ಪ್ರಯಾಣ ಅಲ್ಲಿಂದ ಪ್ರಾರಂಭವಾಗಿ ಇಂದು ಈ ಹಂತಕ್ಕೆ ಬೆಳೆದಿದೆ ಎಂದು ವಿವರಿಸಿದ್ದಾರೆ.
ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಭಾಷಣ ಕೇಳುತ್ತಾ ಅನಿವಾಸಿ ಕನ್ನಡಿಗರು ಶಿಳ್ಳೆ ಚಪ್ಪಾಳೆ ಹಾಕಿ ಸಂಭ್ರಮಿಸಿ ಹುರಿದುಂಬಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಅನೇಕರು ಅವರ ಜೊತೆಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯಗಳು ವೈರಲ್ ಆಗಿವೆ.
