ಹೊಳಲ್ಕೆರೆ
Sneha Public School; ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ


CHITRADURGA NEWS | 02 SEPTEMBER 2024
ಹೊಳಲ್ಕೆರೆ: ತಾಲೂಕಿನ ಸ್ನೇಹ ಪಬ್ಲಿಕ್ ಶಾಲೆ(Sneha Public School) ವತಿಯಿಂದ ಪಟ್ಟಣದ ಸ್ನೇಹ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು.
ಕ್ಲಿಕ್ ಮಾಡಿ ಓದಿ: Horoscope Today: ದಿನ ಭವಿಷ್ಯ | ಸೆಪ್ಟಂಬರ್ 03 | ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ, ದಿಢೀರ್ ಪ್ರಯಾಣ

ಕಾರ್ಯಕ್ರಮಕ್ಕೆ ಹೊಳಲ್ಕೆರೆ ಶ್ರೀ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಂಸ್ಥೆಯ ಸುಮಿತ್ರಕ್ಕ ಮುಖ್ಯ ಅತಿಥಿ ಯಾಗಿ ಆಗಮನಿಸಿ ಮಾತನಾಡಿ, ಮಹಾವಿಷ್ಣುವಿನ 8ನೇ ಅವತಾರವಾದ ಶ್ರೀ ಕೃಷ್ಣ ಕೃಷ್ಣನ ಜನಿಸಿ, ಮಹಾಭಾರತ ಯುದ್ಧವನ್ನು ನಡೆಸಿ ಎತ್ತಿ ಹಿಡಿದಿದ್ದು ಒಂದು ಅಭೂತಪೂರ್ವ ಕಾರ್ಯ, ಈ ಒಂದು ಮಹಾಭಾರತ ಯುದ್ಧದಲ್ಲಿ ಭಗವದ್ಗೀತೆಯನ್ನು ಬೋಧಿಸಿ ಮಾನವರ ಕಲ್ಯಾಣಕ್ಕಾಗಿ ಶ್ರಮಿಸಿದ ಅದ್ಭುತ ಪೂರ್ವ ವ್ಯಕ್ತಿಯಾಗಿ ಅವತರಿಸಿದ ಶ್ರೀ ಕೃಷ್ಣ ಪರಮಾತ್ಮ ಎಂದು ಭೋದಿಸಿದರು.
ಶಾಲೆಯ ಪ್ರಾಂಶುಪಾಲರಾದ ಜಿಸಿ ವೇಣುಗೋಪಾಲ್ ಮಾತನಾಡಿ, ಪೋಷಕರು ಮಕ್ಕಳಿಗೆ ಮನೆಯಲ್ಲಿ ಕೃಷ್ಣನ ಬಗ್ಗೆ ಮಹಾಭಾರತ ಪುರಾಣ ಕಥೆಗಳನ್ನು ಹೇಳಬೇಕು ಎಂದು ತಿಳಿಸಿದರು.
ಛಾಯಾ ಮಂಜುನಾಥ್ ಮಾತನಾಡಿ, ಶ್ರೀ ಕೃಷ್ಣ ಪರಮಾತ್ಮ ಅವತರಿಸಿದ ಉದ್ದೇಶವೇ ಹಿಂದೂ ಧರ್ಮ ರಕ್ಷಣೆಗಾಗಿ, ತನ್ನ ಬಾಲ್ಯದಿಂದಲೂ ಅವತಾರದ ಅಂತ್ಯದವರೆಗೂ ಧರ್ಮರಕ್ಷಣೆಗಾಗಿ ಎತ್ತಿ ಹಿಡಿದರು ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: AMERICA ಅಕ್ಕ ಸಮ್ಮೇಳನದಲ್ಲಿ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) | ವ್ಯವಹಾರದ ಯಶಸ್ಸಿನ ಕುರಿತ ಮಾತು-ಕಥೆಯಲ್ಲಿ ಭಾಗೀ
ಹಲವಾರು ಮಕ್ಕಳು ರಾಧೆ ಮತ್ತು ಕೃಷ್ಣನ ವೇಷ ಧರಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಜೆ. ಎಸ್.ವಸಂತ್, ನಿರ್ದೇಶಕ ಬಿ.ಎಸ್.ಹರೀಶ್ ಬಾಬು, ಎಂ. ಜೆ.ನಾಗರಾಜ್ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಇದ್ದರು
