CHITRADURGA NEWS | 29 SEPTEMBER 2024
ಚಿತ್ರದುರ್ಗ: ಮನುಷ್ಯ ಧನಾತ್ಮಕ ಆಲೋಚನೆಯಲ್ಲಿ ಇದ್ದರೆ ಮಾನಸಿಕ(mental) ಖಿನ್ನತೆ ಹಾಗೂ ಬಳಲುವಿಕೆ ಕಡಿಮೆಯಾಗಲು ಸಾಧ್ಯವಿದೆ ಎಂದು ವೈದ್ಯ ಶ್ರೀ ಚನ್ನಬಸವಣ್ಣ ಅವರು ಅಭಿಪ್ರಾಯಪಟ್ಟರು.
ಕ್ಲಿಕ್ ಮಾಡಿ ಓದಿ: Accident: ಬೈಕ್, ಸ್ಕೂಟಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ | ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಗರದ ಮುರುಘಾ ಮಠ(Murugha math)ದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಆರೋಗ್ಯ ಆಧ್ಯಾತ್ಮ ಪ್ರವಚನದಲ್ಲಿ ಮಾನಸಿಕ ಆರೋಗ್ಯಕ್ಕೆ ಮನೋಶುದ್ಧೀಕರಣ ಮಾಡಿಕೊಳ್ಳುವ ವಿಧಾನ ಕುರಿತು ನಾಲ್ಕನೇ ದಿನದಲ್ಲಿ ಪ್ರವಚನ ನೀಡಿ,
ಸರಳವಾದ ಬದುಕಿಗೆ ಒತ್ತು ಕೊಟ್ಟು ಆಡಂಬರದ ಜೀವನದಿಂದ ದೂರವಿರಬೇಕು, ಸರಳತನ, ಸದುವಿನಯದಿಂದ ಮನುಷ್ಯ ದೊಡ್ಡವನಾಗುತ್ತಾನೆ. ಆಡಂಬರದಿಂದ ಏನು ಸಾಧನೆ ಸಾಧ್ಯವಾಗದು ಎಂದರು.
ನಮ್ಮ ದೇಶದಲ್ಲಿ ಅದರಲ್ಲೂ ಶರಣ ಪರಂಪರೆಯಲ್ಲಿ ಮಹಿಳೆಗೆ ಉನ್ನತ ಸ್ಥಾನವನ್ನು ನೀಡಿದ್ದಾರೆ. ಮಹಿಳೆಯನ್ನು ನಾವು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕು.
ಕ್ಲಿಕ್ ಮಾಡಿ ಓದಿ: ಕೆ.ಎಸ್.ನವೀನ್@50 | ಹೊಸದುರ್ಗದಲ್ಲಿ ಅದ್ದೂರಿ BIRTH DAY
ಈ ಪ್ರಪಂಚದಲ್ಲಿ ಮನುಷ್ಯ ವಿಕಾಸ ಹೊಂದುತ್ತಾ ಕುಟುಂಬ ಜೀವನ ಆರಂಭವಾಯಿತು. ಆಗ ಯಾವ ಗುಡಿ, ಮಂದಿರ, ಮಸೀದಿಗಳು ಇದ್ದದ್ದು ಕಡಿಮೆ. ಕುಟುಂಬ ಜೀವನವೇ ನಮಗೆ ಮೂಲಾಧಾರ.
ಮಾನಸಿಕ ಶುದ್ಧೀಕರಣಕ್ಕೆ ಅಗತ್ಯವಿರುವ ಪ್ರಸಂಗಗಳನ್ನು ವಿವರಿಸುತ್ತಾ ಅನೇಕ ಸಲಹೆಗಳನ್ನು ನೀಡಿದರು.
ಮುರುಘಾ ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಎಲ್ಲರಲ್ಲೂ ಕೃತಜ್ಞತಾಭಾವ ಇರಬೇಕು. ನಾವು ಜಯದೇವ ಮಹಾಸ್ವಾಮಿಗಳವರನ್ನು ಕೃತಜ್ಞತೆಯಿಂದ ಸ್ಮರಿಸಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಅವರು ಮಾಡಿರುವ ಘನ ಕಾರ್ಯಗಳು ಅನೇಕ, ಅವರನ್ನು ಸ್ಮರಿಸುವಂತಹ ಕೆಲಸ ಇಂದು ನಡೆದಿದೆ ಎಂದು ಹೇಳಿದರು.
ಅವರು ಅಷ್ಟಾವರಣ, ಪಂಚಾಚಾರ ಹಾಗೂ ಷಟಸ್ಥಲದ ಬಗ್ಗೆ ಸೂಕ್ಷ್ಮ ಪರಿಚಯ ಮಾಡಿಕೊಟ್ಟರು.
ಕ್ಲಿಕ್ ಮಾಡಿ ಓದಿ: FIRE INCIDENT: ಹೊತ್ತಿ ಉರಿದ ಕಂಟೈನರ್ | ಜನವಸತಿ ಪ್ರದೇಶದ ಬಳಿ ತಪ್ಪಿದ ಅನಾಹುತ
ಕೊಲ್ಲಪುರ ಮಠದ ಶಿವಾನಂದ ಸ್ವಾಮಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಖಾಸಮಠದ ಗುರುಮಠಕಲ್ ನ ಶಾಂತವೀರಗುರು ಮುರುಘರಾಜೇಂದ್ರ ಸ್ವಾಮೀಜಿ, ಮುರುಗೇಂದ್ರ ಸ್ವಾಮೀಜಿ, ನಿಪ್ಪಾಣಯ ಮಲ್ಲಿಕಾರ್ಜುನ ಸ್ವಾಮೀಜಿ, ಒಂಟಿಕಂಬದ ಮುರುಘಾಮಠದ ತಿಪ್ಪೇರುದ್ರಸ್ವಾಮೀಜಿ, ಉಳವಿ ಹಾಗೂ ಮೈಸೂರಿನ ಬಸವ ಲಿಂಗಮೂರ್ತಿ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
