CHITRADURGA NEWS | 14 MAY 2026
ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗ ಕೋಟೆಯನ್ನಾಳಿದ ರಾಜಾವೀರ ಮದಕರಿನಾಯಕರ ಪುಣ್ಯಸ್ಮರಣೆ ಅಂಗವಾಗಿ ರಾಜಾವೀರ ಮದಕರಿನಾಯಕರ ಸ್ಮಾರಕ ನಿರ್ಮಾಣ ವೇದಿಕೆಯಿಂದ ಗುರುವಾರ ಚಿತ್ರದುರ್ಗದಿಂದ ಹೊರಟ ಯಾತ್ರೆ ರಾತ್ರಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಗೆ ತಲುಪಿತು.
ಕೋಟೆ ರಸ್ತೆಯಲ್ಲಿರುವ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುರುಘಾಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು ನಂತರ ಹಳಿಯೂರು, ಹಿರೇಗುಂಟನೂರು, ಬಿ.ದುರ್ಗ, ಜಾನಕಲ್, ಹಾಲುರಾಮೇಶ್ವರದ ಮೂಲಕ ಯಾತ್ರೆ ಶ್ರೀರಂಗಪಟ್ಟಣದ ಕಡೆ ಸಾಗಿತು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
ಚಿತ್ರದುರ್ಗದ ಕೋಟೆಯಲ್ಲಿ ಗತ ವೈಭದಿಂದ ಮೆರೆದ ಸಾಮ್ರಾಜ್ಯದ ಕೊನೆಯ ದೊರೆ ರಾಜಾವೀರ ಮದಕರಿನಾಯಕರು ಕ್ರಿ.ಶ. 1782 ಮೇ 15 ರಂದು ಶ್ರೀರಂಗಪಟ್ಟಣದಲ್ಲಿ ಮರಣ ಹೊಂದಿದ ಪ್ರಯುಕ್ತ ಪ್ರತಿ ವರ್ಷವು ಪಶ್ಚಿಮ ವಾಹಿನಿಯಲ್ಲಿ ಪುಣ್ಮಸ್ಮರಣೆ ಸಲ್ಲಿಸಿ ಸ್ಮಾರಕ ನಿರ್ಮಿಸುವ ಸಂಕಲ್ಪ ಮಾಡುತ್ತಿದ್ದೇವೆಂದು ಶಿವಶಕ್ತಿ ಬಾಲಾಜಿ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
