
CHITRADURGA NEWS | 11 JUNE 2024
ಚಿತ್ರದುರ್ಗ: ಬೆಂಗಳೂರಿನಲ್ಲಿ ಕೊಲೆಯಾದ ರೇಣುಕಾಸ್ವಾಮಿ ಪಾರ್ಥಿವವನ್ನು ಶರೀರ ಚಿತ್ರದುರ್ಗಕ್ಕೆ ತಂದು ಅಂತ್ಯಕ್ರಿಯೆ ಬಳಿಕ ಹೆತ್ತವರ ಆಕ್ರೋಶದ ಕಟ್ಟೆಯೊಡೆದಿದೆ.
ಬೆಳಗಿನಿಂದಲೂ ಮೌನಕ್ಕೆ ಶರಣಾಗಿದ್ದ ರೇಣುಕಾಸ್ವಾಮಿ(RENUKASWAMY) ತಂದೆ ತಾಯಂದಿರು, ಚಿತ್ರದುರ್ಗದ ವೀರಶೈವ ರುದ್ರಭೂಮಿಯಲ್ಲಿ ಮಗನ ಅಂತ್ಯಕ್ರಿಯೆ ನಡೆಸುತ್ತಿದ್ದಂತೆ ಆಕ್ರಂಧನ ವ್ಯಕ್ತಪಡಿಸಿದರು.

ಇದನ್ನೂ ಓದಿ: ನನಗೆ ನನ್ನ ಪತಿ ಬೇಕು | ಅವರ ಸಾವಿಗೆ ನ್ಯಾಯ ಕೊಡಿ | ರೇಣುಕಾಸ್ವಾಮಿ ಪತ್ನಿಯ ಆಕ್ರಂಧನ
ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, ನನ್ನ ಮಗನಿಗೆ ಬಂದ ಪರಿಸ್ಥಿತಿ ದರ್ಶನ್‍ಗೂ ಬರಲಿ. ನಟಿ ಪವಿತ್ರಳನ್ನು ಬಿಡಬೇಡಿ. ಇಬ್ಬರು ನನ್ನ ಮಗನಂತೆಯೇ ಸಾಯಬೇಕು ಎಂದು ತಾಯಿ ರತ್ನಪ್ರಭ ಶಪಿಸಿದರು.
ನನ್ನ ಮಗ ವಿಲವಿಲ ಒದ್ದಾಡಿ ಸತ್ತಿದ್ದಾನೆ. ಅವನಂತೆಯೇ ಇವರು ಸಾಯಬೇಕು. ಇನ್ನೂ 15 ದಿನದಲ್ಲಿ ಸಾಯಬೇಕು ಎಂದು ಗೋಳಿಟ್ಟರು.
ಇದನ್ನೂ ಓದಿ: ಮಧ್ಯಾಹ್ನ ಊಟ ಬೇಡ ಎಂದು ಹೇಳಿ ಹೋದ ಮಗ ಶವವಾಗಿ ವಾಪಾಸು | ರೇಣುಕಾಸ್ವಾಮಿ ಕೊಲೆಗೆ ಮರುಗಿದ ಚಿತ್ರದುರ್ಗ
ನನ್ನ ಮಗನಿಗಾಗಿ ಸೊಸೆ ಗಂಡನಿಗಾಗಿ ಕಾಯುತ್ತಿದ್ದಾಳೆ. ಆ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದರು.
ರೇಣುಕಾಸ್ವಾಮಿಯ ತಂದೆ ಶಿವಾನಂದಗೌಡರು, ಮನುಷ್ಯತ್ವ, ಮಾನವೀಯತೆ ಇಲ್ಲದ ಕೊಲೆಗಡುಕರು. ಇವರೆಲ್ಲಾ ದೊಡ್ಡ ಮನುಷ್ಯರು, STARಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸತ್ತು ಹೋದ ನನ್ನ ಮಗ ಬರುತ್ತಾನಾ, ಇವರು ಜೀವ ತರುತ್ತಾರಾ, ಎಂಥಾ ದೇಶ ರೀ ಇದು ಎಂದು ಕಣ್ಣೀರಿಟ್ಟರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
