
CHITRADURGA NEWS | 26 JULY 2025
ಚಿತ್ರದುರ್ಗ: ಎಸ್.ಜೆ.ಎಸ್ ಸಮೂಹ ವಿದ್ಯಾಸಂಸ್ಥೆಗಳು ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸೈನಿಕರ ಸಮವಸ್ತ್ರ ಧರಿಸಿ ಆಶುಭಾಷಣ, ಕಿರು ನಾಟಕ, ದೇಶ ಭಕ್ತಿ ಪ್ರಸ್ತುತ ಪಡಿಸಿದರು.
ಇದನ್ನೂ ಓದಿ: ಜೆ.ಪಿ.ನಗರ ರೋಟರಿಯಿಂದ ಶಾಲೆಗಳಿಗೆ ಸೌಲಭ್ಯ |ಸ್ಮಾರ್ಟ್ ಟಿವಿ, ಡೆಸ್ಕ್, ಆರ್ ಓ ಕೊಡುಗೆ
ಈ ವೇಳೆ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಮಾತನಾಡಿದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ನಿಜವಾದ ನಿಸ್ವಾರ್ಥಿಯೇ ಸೈನಿಕನಾಗಲೂ ಸಾಧ್ಯ. ಸೈನಿಕ ನಿಜವಾದ ಸರ್ವಸಂಗಪರಿತ್ಯಾಗಿ. ಪ್ರಾಣಪಕ್ಷಿ ಹಾರಿಹೋಗುತ್ತದೆ ಎಂಬ ಅರಿವಿನಿಂದಲೇ ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿಯೇ ಯೋಧ. ದೇಶಪ್ರೇಮದ ಪರಮೋಚ್ಚ ಸ್ಥಾನವೇ ಸೈನಿಕ ಎಂದು ಹೇಳಿದರು.
ಕಾರ್ಗಿಲ್ ವಿಜಯ್ ದಿನವು ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು. ಅವರು ದೇಶದ ಗೌರವ ಕಾಪಾಡಲು ತಮ್ಮ ಪ್ರಾಣವನ್ನೇ ಅರ್ಪಿಸಿದರು. ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಿದ್ದ ಆ ವೀರರ ತ್ಯಾಗವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ದೇಶಭಕ್ತಿ ಎಲ್ಲರಿಗೂ ಮಾದರಿಯಾಗಿದೆ ಎಂದರು.
ವ್ಯಕ್ತಿ, ವಸ್ತು ಹಾಗೂ ಮನೆಗಿಂತಲೂ ಮಿಗಿಲು ದೇಶ ಎನ್ನುವ ಅಚಲ ವಿಶ್ವಾಸತೆಯ ಬದ್ದತೆ ತೋರಿಸುವವರೆ ಯೋಧರು. ದೇಶ ರಕ್ಷಣೆ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಸ್ಪಷ್ಟ ನಿಲುವು ಹೊಂದಿಯೇ ಸೈನ್ಯಕ್ಕೆ ಸೇರ್ಪಡೆಗೊಳ್ಳುವ ಯೋಧರೇ ನಮ್ಮ ಪಾಲಿನ ದೇವರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಸೈನಿಕನ ಜೀವನವು ಸಾಹಸ ಮತ್ತು ಅಪಾಯಗಳಿಂದ ತುಂಬಿರುತ್ತದೆ. ಸೈನಿಕರು ಯಾವುದೇ ಪರಿಸ್ಥಿತಿಯಲ್ಲಿಯೂ ತಮ್ಮ ತಾಯ್ನಾಡನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತಾರೆ. ಅವರು ಎಂದಿಗೂ ಕರ್ತವ್ಯದಿಂದ ಹೊರಗುಳಿಯುವುದಿಲ್ಲ, ದೇಶಕ್ಕಾಗಿ ಅವರು ಎರಡನೇ ಆಲೋಚನೆಯಿಲ್ಲದೆ ತಮ್ಮ ಪ್ರಾಣವನ್ನೇ ಅರ್ಪಿಸಬಹುದು.
ಇದು ಅವರ ಧೈರ್ಯ ಮತ್ತು ಇಚ್ಛಾಶಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ನಾವು ನಮ್ಮ ಕುಟುಂಬಗಳೊಂದಿಗೆ ಪ್ರತಿ ಸಂದರ್ಭವನ್ನು ಶಾಂತಿಯುತವಾಗಿ ಆಚರಿಸಲು ಅವರು ವರ್ಷಪೂರ್ತಿ ತಮ್ಮ ಕುಟುಂಬಗಳಿಂದ ದೂರವಿರುತ್ತಾರೆ. ಯಾವುದೇ ತುರ್ತು ಪರಿಸ್ಥಿತಿ ಅಥವಾ ವಿಪತ್ತಿನಿಂದ ಬದುಕುಳಿಯುವ ತ್ರಾಣ ಮತ್ತು ದೃಢಸಂಕಲ್ಪವನ್ನು ಅವರು ಹೊಂದಿದ್ದಾರೆ.
ಇಂದು ದೇಶದ ಪ್ರತಿಯೊಬ್ಬ ಪ್ರಜೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾನೆ ಎಂದರೆ ಅದಕ್ಕೆ ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರೇ ಕಾರಣ. ಸೈನಿಕರನ್ನು ಯಾರೂ ಕಡೆಗಣಿಸದೆ ಗೌರವದಿಂದ ಕಾಣಬೇಕೆಂದರು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಡಿಕ್ಕಿ | ಕರಡಿ ಸಾವು
ಈ ಸಂದರ್ಭದಲ್ಲಿ ಶಿಕ್ಷಕರು, ಪೋಷಕರು ಉಪಸ್ಥಿತಿಯಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

