
CHITRADURGA NEWS | 14 JULY 2025
ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ-2025ರ ಪ್ರೀಮಿಯರ್ ಲೀಗ್ ಸೀಜನ್-4ರಲ್ಲಿ SBI ಲೈಫ್ ತಂಡ ಪ್ರಥಮ, ಕೆಳಗೋಟೆ ಕಿಂಗ್ ದ್ವಿತೀಯ ಸ್ಥಾನ ಪಡೆದಿದೆ.
ಚಿತ್ರದುರ್ಗ ಸ್ಪೋಟ್ರ್ಸ್ ಕ್ಲಬ್, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು.

ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಆರು ತಂಡಗಳು ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆಯಿತು. ತಂಡ ಆಟಗಾರರು ಒಂದೊಂದು ಅಂಕಗಳನ್ನು ಗಳಿಸಿದಾಗಲೂ ಸಹಾ ಕೇಕೆ, ಸಿಳ್ಳು ಚಪ್ಪಾಳೆಯನ್ನು ಹೊಡೆಯುವುದರ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಅಂತಿಮ ಪಂದ್ಯದಲ್ಲಿ ಎಸ್.ಬಿ.ಐ. ಲೈಫ್ ತಂಡ ಮತ್ತು ಕೆಳಗೋಟೆ ಕಿಂಗ್ ನಡುವೆ ಹಣಾಹಣಿ ನಡೆದಿದ್ದು 40 ನಿಮಿಷಗಳ ಅವಧಿಯಲ್ಲಿ ಕೆಳಗೋಟೆ ಕಿಂಗ್ ತಂಡ 15 ಅಂಕಗಳನ್ನು ಗಳಿಸಿದರೆ ಇದಕ್ಕೆ ಪ್ರತಿಯಾಗಿ ಎಸ್.ಬಿ.ಐ. ಲೈಫ್ ತಂಡ 27 ಅಂಕಗಳನ್ನು ಗಳಿಸುವುದರ ಮೂಲಕ ಪ್ರಥಮ ಸ್ಥಾನವನ್ನು ಪಡೆಯಿತು.
ಪ್ರಥಮ ಸ್ಥಾನವನ್ನು ಪಡೆದ ಎಸ್.ಬಿ.ಐ. ಲೈಫ್ ತಂಡಕ್ಕೆ 50 ಸಾವಿರ ನಗದು ಬಹುಮಾನ, ದ್ವೀತಿಯ ಸ್ಥಾನ ಪಡೆದ ಕೆಳಗೋಟೆ ಕಿಂಗ್ ತಂಡಕ್ಕೆ 30 ಸಾವಿರ, ತೃತೀಯ ಸ್ಥಾನ ಪಡೆದ ರಾಯರಸೇನೆ ತಂಡಕ್ಕೆ 20 ಸಾವಿರ, ನಾಲ್ಕನೇ ಸ್ಥಾನ ಪಡೆದ 7 ಸ್ಟಾರ್ ಬಳ್ಳಾರಿ ತಂಡಕ್ಕೆ 10 ಸಾವಿರ, ಐದನೇ ಸ್ಥಾನ ಪಡೆದ ಚಿತ್ರದುರ್ಗ ಸ್ಪೋಟ್ಸ್ ಕ್ಲಬ್‍ನ ತಂಡಕ್ಕೆ 5 ಸಾವಿರ, ಆರನೇ ಸ್ಥಾನವನ್ನು ಪಡೆದ ಸರ್ಕಲ್ ಅಡ್ಡ ತಂಡಕ್ಕೆ 5 ಸಾವಿರ ನಗದು, ಪಾರಿತೋಷಕ ನೀಡಿ ಗೌರವಿಸಲಾಯಿತು.
ಇದೇ ಪಂದ್ಯಾವಳಿಯಲ್ಲಿ ಉತ್ತಮ ಹಿಡಿತಗಾರನಾಗಿ ಎಸ್.ಬಿ.ಐ. ಲೈಫ್ ತಂಡದ ಆಕರ್ಷ ಗೌಡ, ಉತ್ತಮ ದಾಳಿಗಾರನಾಗಿ ಕೆಳಗೋಟೆ ಕಿಂಗ್ ತಂಡದ ಧನುಷ್ ಹಾಗೂ ಪಂದ್ಯದ ಸವೋತ್ತಮ ಪ್ರಶಸ್ತಿಯನ್ನು ಎಸ್.ಬಿ.ಐ. ಲೈಫ್ ತಂಡದ ಕಿರಣಗೌಡ ಪಡೆದುಕೊಂಡಿದ್ದಾರೆ.
ಅಂತಿಮ ಪಂದ್ಯಾವಳಿಯನ್ನು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಸಂಸದರಾದ ಗೋವಿಂದ ಕಾರಜೋಳ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಕುಮಾರಸ್ವಾಮಿ, ಎ.ಮುರುಳಿ, ಖಂಜಾಚಿ ಮಾಧುರಿ ಗೀರಿಶ್, ಸಮಾಜವಾದಿ ಪಾರ್ಟಿಯ ಲಕ್ಷ್ಮೀಕಾಂತ್, ನಗರಸಭಾ ಸದಸ್ಯರಾದ ಮೊಹಮ್ಮದ್ ಜೈಲುದ್ದೀನ್ ಹಿರಿಯ ಕಬಡ್ಡಿ ಆಟಗಾರರಾದ ಉಮೇಶ್, ನಿವೃತ್ತ ಡಿವೈಎಸ್‍ಪಿ ಅಬ್ದುಲ್ ರಹಮಾನ್, ಶಿವಲಿಂಗಪ್ಪ ವೀಕ್ಷಿಸಿದ್ದರು.
ಹಿರಿಯ ಪತ್ರಕರ್ತರಾದ ಟಿ.ಕೆ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯರಾದ ಸುರೇಶ್‍ನಾಯ್ಕ್, ಸೆವೆನ್ ಸ್ಟಾರ್ ತಂಡದ ಮಾಲೀಕ ಆಗ್ರಹಾರ ಗೋವಿಂದ, ಕೆಳಗೋಟೆ ಕಿಂಗ್ ಮಾಲೀಕ ದೇವರಾಜ್, ಎಸ್.ಬಿ.ಐ. ಲೈಫ್‍ನ ಚಂದ್ರಶೇಖರ್, ಸರ್ಕಲ್ ಅಡ್ಡದ ಪ್ರಜ್ವಲ್, ರಾಯರಸೇನೆಯ ಮಧು-ಶ್ರೀನಿವಾಸ್, ಚಿತ್ರದುರ್ಗ ಸ್ಪೋಟ್ಸ್ ಕ್ಲಬ್‍ನ ನಾಗಭೂಷಣ್ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
