CHITRADURGA NEWS | 21 MAY 2024
ಚಿತ್ರದುರ್ಗ: ಜಿಲ್ಲೆಯ ಗಡಿ ತಾಲ್ಲೂಕು ಮೊಳಕಾಲ್ಮುರು ಸಾರ್ವಜನಿಕ ಆಸ್ಪತ್ರೆಯ ವಿದ್ಯುತ್ ಸಮಸ್ಯೆ ವಿಚಾರಕ್ಕೆ ಬಿಜೆಪಿ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊಳಕಾಲ್ಮರು ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಬಿ.ಶ್ರೀರಾಮುಲು ಆಸ್ಪತ್ರೆ ಅವ್ಯವಸ್ಥೆಗೆ ಕಿಡಿಕಾರಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಆಸ್ಪತ್ರೆ ಕತ್ತಲ ಫೋಟೋ ಪೋಸ್ಟ್ ಮಾಡಿರುವ ಅವರು, ‘ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದ್ಯಾವುದೋ ಕಗ್ಗತ್ತಲ ರಾತ್ರಿ ಚಿತ್ರಣವಲ್ಲ.. ಮೊಳಕಾಲ್ಮುರು ತಾಲೂಕು ಸರ್ಕಾರಿ 100 ಹಾಸಿಗೆ ಗಳ ಆಸ್ಪತ್ರೆಯಲ್ಲಿನ ಬೆಳಗಿನ 9:00 ಗಂಟೆ ಚಿತ್ರಣ..
ತಾಲೂಕಿನಲ್ಲೆಲ್ಲಾ ಸಣ್ಣದಾಗಿ ಮಳೆಯಾಗುತ್ತಿದ್ದು ಕರೆಂಟ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಮೊಳಕಾಲ್ಮುರು ತಾ. ಆಸ್ಪತ್ರೆಯಲ್ಲಿ ಜನರೇಟರ್ ಕೆಟ್ಟು 7 ದಿನಗಳಾಗಿವೆ. ದುರಸ್ಥಿ ಮಾಡಿಸುವ ಗೋಜಿಲ್ಲವೋ ಅಥವಾ ನಿಮ್ಮ ಸರ್ಕಾರದಲ್ಲಿ ಇದಕ್ಕೂ ದುಡ್ಡಿಲ್ಲವೋ ?.
ಕ್ಲಿಕ್ ಮಾಡಿ ಓದಿ: ಮಳೆ ಬಂದಾಗ ಈ ಆಸ್ಪತ್ರೆಯಲ್ಲಿ ಉಂಟು..ಕ್ಯಾಂಡಲ್ ಲೈಟ್ ಟ್ರೀಟ್‌ಮೆಂಟ್…!

ನಾನು ಮೊಳಕಾಲ್ಮುರು ಶಾಸಕನಾದ ಅವಧಿಯಲ್ಲಿ ಇದೇ ಆಸ್ಪತ್ರೆಯಲ್ಲಿ 23 ಬೆಡ್‌ಗಳ ಐಸಿಯು,ಆಕ್ಸಿಜನ್ ಪ್ಲಾಂಟ್, ಏರ್ಪ್ಲೋ ಆಪರೇಶನ್ ಥೇಟರ್, ಎಲ್ಲಾ ಬೆಡ್‌ಗಳಿಗೂ ಆಕ್ಸಿಜನ್ ಕನೆಕ್ಟಿವಿಟಿ,12 ಕ್ಕೂ ಹೆಚ್ಚು ತಜ್ಞ ವೈದ್ಯರು, ಜನೌಷಧಿ ಕೇಂದ್ರ ಸ್ಥಾಪನೆ, ಹೆಚ್ಚುವರಿ ಆಂಬ್ಯುಲೆನ್ಸ್‌ನಂತಹ ಕಾರ್ಯಗಳನ್ನು ಮಾಡಿದ್ದೆ. ಆದರೆ ಇಂದು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎನ್ನುವ ಸುದ್ದಿ ಪತ್ರಿಕೆ ಜತೆಗೆ ಜನತೆಯಿಂದ ಪದೇ ಪದೇ ಕೇಳುತ್ತಿದ್ದೇನೆ. ಈಗ ಜನರೇಟರ್ ಸಹ ದುರಸ್ತಿ ಮಾಡಿಸಲಾಗದೆ ಇಡೀ ಆಸ್ಪತ್ರೆಯನ್ನು ಕತ್ತಲಲ್ಲಿರಿಸಿ ‘ಚಿಂತಾಜನಕ’ ಸ್ಥಿತಿಗೆ ತೆಗೆದುಕೊಂಡು ಹೋದದ್ದೇ ನಿಮ್ಮ ಸರ್ಕಾರದ ಒಂದು ವರ್ಷದ ಸಾಧನೆ ಎನ್ನಬಹುದೇ !? ಎಂದು ಪ್ರಶ್ನಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಕೋಟೆನಾಡಲ್ಲಿ ತಡರಾತ್ರಿ ಅಬ್ಬರಿಸಿದ ಮಳೆ | ಕೊಚ್ಚಿ ಹೋದ ರಸ್ತೆ ಕುಸಿದು ಬಿದ್ದ ಮನೆ
ಇನ್ನೂ ಬಿಜೆಪಿ ಕರ್ನಾಟಕ ಪೇಜ್‌ನಲ್ಲಿ , ಒಂದು ವರ್ಷದ ಗ್ಯಾರಂಟಿ ಕತ್ತಲು ಭಾಗ್ಯ ಇದು. ಸಂಭ್ರಮಾಚರಣೆಯಲ್ಲಿರುವ ಕಾಂಗ್ರೆಸ್ ಸರ್ಕಾರದ ಉಡುಗೊರೆ. ಸಿದ್ದರಾಮಯ್ಯ ಸರ್ಕಾರ ಆಸ್ಪತ್ರೆಗೂ ಕರೆಂಟ್ ಪೂರೈಸದಷ್ಟು ಹೀನಾಯ ಸ್ಥಿತಿಗೆ ಬಂದು ತಲುಪಿದೆ. ಖಜಾನೆ ಖಾಲಿ, ವಿದ್ಯುತ್ ಖಾಲಿ ! ಇದು ಖಚಿತನೇ…ಉಚಿತನೇ..ನಿಶ್ಚಿತನೆ…ಚಿಪ್ಪು..ಚೊಂಬು !ಎಂದು ಟಾಂಗ್ ನೀಡಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
