CHITRADURGA NEWS | 22 August 2025
ಚಿತ್ರದುರ್ಗ: ಒಳಮೀಸಲಾತಿ ಹಂಚಿಕೆಯ ಹೊಸ ಸೂತ್ರದಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಜಾತಿಗಳಿದ್ದ ಎ ಪ್ರವರ್ಗವನ್ನು ಕಡಿಮೆ ಹಿಂದುಳಿದಿರುವ ಡಿ ಪ್ರವರ್ಗದ ಜೊತೆ ಏಕಪಕ್ಷೀಯವಾಗಿ ಸೇರಿಸಲಾಗಿದೆ. ಈ ಸೇರ್ಪಡೆಯಲ್ಲಿ ಸುಪ್ರೀಂ ಕೋರ್ಟ್ ಆಶಯ ಕಾಣೆಯಾಗಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಯಾರು ಚಿಕನ್ ತಿನ್ನಬಾರದು ಗೊತ್ತಾ?
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೋವಿ, ಬಂಜಾರ, ಸಮುದಾಯಗಳು ಕೂಡಾ ಈ ಮೀಸಲಾತಿಯನ್ನು ಒಪ್ಪುತ್ತಿಲ್ಲ, ಅಲೆಮಾರಿ ಸಮುದಾಯಗಳು ಪ್ರತಿಭಟನೆ ನಡೆಸುತ್ತಿವೆ ಎಂದರು.ಆಗಸ್ಟ್ 19 ರಂದು ತಡರಾತ್ರಿಯವರೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ 6, 6, 5 ಒಳಮೀಸಲಾತಿ ಸೂತ್ರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆಗಸ್ಟ್ 20 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯ ನಿರ್ಧಾರವನ್ನು ಹೇಳಿಕೆಯ ರೂಪದಲ್ಲಿ ಎರಡೂ ಸದನಗಳಲ್ಲಿ ಪುಕಟಿಸಿದ್ದಾರೆ.
ವಿರೋಧ ಪಕ್ಷದವರು ಕೇಳಿದ ಸ್ಪಷ್ಟನೆಗಳಿಗೆ ಮುಖ್ಯಮಂತ್ರಿಗಳಾಗಲಿ, ಅನ್ಯ ಸಚಿವರಾಗಲಿ ಉತ್ತರಿಸಲಿಲ್ಲ. ಈಗಿನ ಮಾಹಿತಿಗಳ ಪ್ರಕಾರ ಸಚಿವ ಸಂಪುಟದ ನಿರ್ಧಾರದ ಸ್ವರೂಪಗಳು ಇನ್ನೂ ಅಂತಿಮವಾಗಿಲ್ಲ, ಸಚಿವ ಸಂಪುಟದ ನಿರ್ಧಾರಕ್ಕೆ ಸರ್ಕಾರದ ಅಂಕಿತವೂ ಬಿದ್ದಿಲ್ಲ.
ಇದನ್ನೂ ಓದಿ: ಧೂಳಿನ ಅಲರ್ಜಿಯಿಂದ ಉಂಟಾಗುವ ದದ್ದುಗಳನ್ನು ನಿವಾರಿಸಲು ಈ 5 ಮನೆಮದ್ದುಗಳನ್ನು ಬಳಸಿ
ಮಾದಿಗ ಸಮಾಜದ ಮಠಾಧೀಶರಾಗಿ ಈ ಇಡೀ ಬೆಳವಣಿಗೆಯ ಬಗ್ಗೆ, ಆನಂತರದ ಪರಿಣಾಮಗಳ ಬಗ್ಗೆ ನಮ್ಮ ನಿರಂತರ ಗಮನವಿದೆ. ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಒಳಮೀಸಲಾತಿಯ ಬಗ್ಗೆ ಒಳವಿರೋಧಗಳಿತ್ತು. ಅದನ್ನು ನಿಭಾಯಿಸುವ ಸವಾಲು ಮುಖ್ಯಮಂತ್ರಿಗಳಿಗಿತ್ತು.ನ್ಯಾ. ನಾಗಮೋಹನ್ ದಾಸ್ ವರದಿಯ ಮೂಲ ಆಶಯಕ್ಕೆ ಹಾಗೂ ಸುಪ್ರೀಕೋರ್ಟ್ ತೀರ್ಪಿನ ಆಶಯಕ್ಕೆ ಧಕ್ಕೆ ಬಂದಿದೆ . ಮುಖ್ಯಮಂತ್ರಿಗಳು ಒಳ ಒತ್ತಡಕ್ಕೆ ಮಣಿದಿದ್ದಾರೆ. ಅದರೂ ಅವರು ಒಳಮೀಸಲಾತಿಯ ಸೂತ್ರಕ್ಕೆ ಸಂಪುಟದ ಸಮ್ಮತಿ ಸಿಗುವಂತೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ವಹಿಸಿದ ಮುತುವರ್ಜಿಯನ್ನು ಶ್ರೀ ಮಠ ಅಭಿನಂದಿಸುತ್ತದೆ.
ಒಳ ಮೀಸಲಾತಿಯ ಸರ್ಕಾರದ ಸೂತ್ರದಲ್ಲಿನ ಗೊಂದಲಗಳ ಬಗ್ಗೆಯೂ ಶ್ರೀ ಮಠ ಮುಖ್ಯಮಂತ್ರಿಗಳ ಸ್ಪಷ್ಟನೆಯನ್ನು ಬಯಸುತ್ತದೆ.ಕಳೆದ ವರ್ಷ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸ್ಪಷ್ಟವಾಗಿ ಹೇಳಿತು. ನಿಖರ ದತ್ತಾಂಶಗಳು ಮತ್ತು ಹಿಂದುಳಿದಿರುವಿಕೆಯನ್ನು ಆಧರಿಸಿ, ಪರಿಶಿಷ್ಟ ಜಾತಿಗಳ ವರ್ಗೀಕರಣ ಆಗಬೇಕೆಂದು ನಿರ್ದೇಶಿಸಿತ್ತು. ಇದನ್ನು ಆಧರಿಸಿಯೇ ನ್ಯಾ ನಾಗಮೋಹನ್ ದಾಸ್ ಐದು ಪವರ್ಗಗಳನ್ನು ರೂಪಿಸಿದ್ದರು. ಆದರೆ ಈಗ ಸರ್ಕಾರ ರೂಪಿಸಿರುವ ಸೂತ್ರದಲ್ಲಿ ಐದರ ಬದಲು ಮೂರು ಪ್ರವರ್ಗಗಳು ಮಾತ್ರ ಇದೆ. ಈ ಸೂತ್ರ ಸುಪ್ರೀಂಕೋರ್ಟ್ ನ ಆಶಯವನ್ನು ಪ್ರತಿನಿಧಿಸುತ್ತಿಲ್ಲ.
ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಮನೆ ಮೇಲೆ ED ಅಧಿಕಾರಿಗಳ ದಾಳಿ
ಹಾಗೆಯೇ ನ್ಯಾ ನಾಗಮೋಹನದಾಸ್ ಮೂಲ ಜಾತಿಗಳನ್ನು ಗುರುತಿಸಿಕೊಳ್ಳದ ಆದಿಆಂಧ್ರ, ಆದಿದ್ರಾವಿಡ, ಆದಿಕರ್ನಾಟಕ ಮೂಲದ 4.74 ಲಕ್ಷ ಜನಸಂಖ್ಯೆಯ ಸಮೂಹವನ್ನು ‘E’ ಪ್ರವರ್ಗ ಎಂದು ಗುರುತಿಸಿತ್ತು ಸಚಿವ ಸಂಪುಟದ ಸೂತ್ರದಲ್ಲಿ ‘E’ ಪ್ರವರ್ಗವನ್ನು ತೆಗೆಯಲಾಗಿದೆ. ‘E’ ಪ್ರವರ್ಗದಲ್ಲಿ ಮೂರು ಜಾತಿಗಳು ಇದ್ದವು. ಆದಿಅಂಧ್ರ : 7114 ಜನಸಂಖ್ಯೆ, ಆದಿದ್ರಾವಿಡ : 320641 ಆದಿ ಕರ್ನಾಟಕ: 147199ಮುಖ್ಯಮಂತ್ರಿಗಳ ಸದನದ ಹೇಳಿಕೆಯ ಪ್ರಕಾರ ‘E’ ಪ್ರವರ್ಗದ ಶೇ 1ರ ಮೀಸಲಾತಿಯನ್ನು ‘C’ ಪ್ರವರ್ಗಕ್ಕೆ ವರ್ಗಾಯಿಸಿಲಾಗಿದೆ. ಆದರೆ ಜನಸಂಖ್ಯೆಯನ್ನು ಸಮಾನವಾಗಿ ಅಂದರೆ ತಲಾ 2.37 ಲಕ್ಷವನ್ನು ‘B’ ಮತ್ತು ‘C’ ಪವರ್ಗಕ್ಕೆ ಹಂಚಲಾಗಿದೆ. ಇದೂ ಅವೈಜ್ಞಾನಿಕವಾದ ನಿರ್ಧಾರ ಎರಡೂ ಪ್ರವರ್ಗಕ್ಕೆ ಜನಸಂಖ್ಯೆಯಂತೆ. ಮೀಸಲಾತಿಯನ್ನೂ ಹಂಚಬೇಕಿತ್ತಲ್ಲವೇ ?
ಹಾಗೆಯೇ ಜಾತಿಗಳನ್ನು ಬಿಟ್ಟು ಕೇವಲ ಜನಸಂಖ್ಯೆಯನ್ನು ಎರಡು ಪವರ್ಗಗಳಿಗೆ ಹಂಚುವುದು ಅವಾಸ್ತವಿಕವಾದದು.6,6,5ರ ಸೂತ್ರ ರಾಜಕೀಯ ಪ್ರೇರಿತವಾಗಿದೆ, ಸುಪ್ರೀಂಕೋರ್ಟ್ ಆಶಯವನ್ನು ಪ್ರತಿಧ್ವನಿಸುತ್ತಿಲ್ಲ ಈ ಎರಡು ಕಾರಣಗಳಿಗಾಗಿಯೇ ಸರ್ಕಾರ ಒತ್ತಡದಿಂದ ಹೊರಬಂದು ಹೆಚ್ಚಿನ ಮುರ್ತುವರ್ಜಿ ವಹಿಸಿ ತಾರ್ಕಿಕ ಅಂತ್ಯ ಸಿಗುವಂತೆ ಮಾಡಲಿ ಎಂಬುದು ನಮ್ಮ ಆಗ್ರಹವಾಗಿದೆ.
ಇದನ್ನೂ ಓದಿ: ಮದುವೆಗೆ ಒತ್ತಾಯಿಸಿದ್ದಕ್ಕೆ ಕೊಂದನಾ ಪಾಪಿ | SP ರಂಜಿತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು ?
ಒಳ ಮೀಸಲಾತಿ ಯಾವ ಜಾತಿಗೂ ಅನ್ಯಾಯ ಮಾಡುವುದಿಲ್ಲ, ಮಾಡಲೂಬಾರದು. ಎಲ್ಲ 101 ಪರಿಶಿಷ್ಟ ಜಾತಿಗಳಿಗೆ ನ್ಯಾಯ ಸಿಗಬೇಕೆಂಬುದು ಶ್ರೀ ಮಠದ ಆಶಯ. ಅಲೆಮಾರಿ ಸಮುದಾಯಗಳೂ ಸೇರಿದಂತೆ ಎಲ್ಲ ತಬ್ಬಲಿ ಜಾತಿಗಳನ್ನು ಜೊತೆಗೆ ಒಯ್ಯಲು ಶ್ರೀ ಮಠ ಬದ್ಧವಾಗಿದೆ, ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗದಿದ್ದರೆ ಒಳಮೀಸಲಾತಿಯ ಆಶಯ ಪೂರ್ಣವಾಗುವುದಿಲ್ಲ. ಎಂಬುದು ಶ್ರೀ ಮಠದ ಸ್ಪಷ್ಟ ಅಭಿಪ್ರಾಯವಾಗಿದೆ.’ಒಳ ಮೀಸಲಾತಿಯನ್ನು ಜಾರಿಗೆ ತರುವಲ್ಲಿ ಶ್ರೀಮಠದೊಂದಿಗೆ ಹಲವರು ಜೊತೆಯಾಗಿದ್ದಾರೆ. ನ್ಯಾ ಸದಾಶಿವ ಆಯೋಗ ರಚಿಸುವಲ್ಲಿ ಕಾಂಗ್ರೆಸ್ಸಿನ ಎಸ್ ಎಮ್ ಕೃಷ್ಣ, ಧರ್ಮಸಿಂಗ್ ಸಹಕರಿಸಿದ್ದಾರೆ.
ಆಯೋಗ ಕಾರ್ಯನಿರ್ವಹಿಸಲು ಬೇಕಾದ 12 ಕೋಟಿ ರೂಗಳ ಹಣಕಾಸಿನ ನೆರವು ಕೊಟ್ಟಿದ್ದು ಬಿ ಎಸ್ ಯಡಿಯೂರಪ್ಪನವರು. ಕೋರ್ಟ್ ತೀರ್ಪಿನ ಕಾರಣಕ್ಕೆ ಒಳಮೀಸಲಾತಿಯ ವಿಷಯ ನೆನೆಗುದಿಯಲ್ಲಿದ್ದಾಗ ಅರೆಸ್ಸೆಸ್ ನ ಮುಖ್ಯಸ್ಥರು ನಮ್ಮ ನೆರವಿಗೆ ಬಂದರು. ಸ್ವತಃ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ಒಳಮೀಸಲಾತಿಯ ಹೋರಾಟದಲ್ಲಿ ನಮ್ಮ ಜೊತೆಗಿದ್ದರು. ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಸರ್ಕಾರ ವಾದಿಸಿತು. ಅಫಿಡವಿಟ್ಟು ಸಲ್ಲಿಸಿತು. ಕಳೆದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಸವರಾಜ್ ಬೊಮ್ಮಾಯಿ SC, ST ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವ ಐತಿಹಾಸಿಕ ನಿರ್ಣಯ ಕೈಗೊಂಡರು.
ಕಾನೂನು ಸಚಿವರಾಗಿದ್ದ ಮಾಧುಸ್ವಾಮಿಯವರು ಸಂಪುಟ ಉಪಸಮಿತಿಯ ಸಾರಥ್ಯವಹಿಸಿ ವರದಿ ರೂಪಿಸಿದರು. ಆ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ದಿಟ್ಟ ನಿರ್ಧಾರವನ್ನು ಬಿಜೆಪಿ ಕೈಗೊಂಡಿತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಒತ್ತಡಗಳ ನಡುವೆಯೂ ಒಳಮೀಸಲಾತಿ ಜಾರಿಗೆ ಶ್ರಮ ವಹಿಸಿದ್ದಾರೆ. ಈ ಎಲ್ಲ ಮಹನೀಯರಿಗೆ ಶ್ರೀ ಮಠ ಕೃತಜ್ಞತೆ ಸಲ್ಲಿಸುತ್ತದೆ.
ಇದನ್ನೂ ಓದಿ: ದಿನ ಭವಿಷ್ಯ | ಆಗಸ್ಟ್ 22 | ಉದ್ಯೋಗಿಗಳಿಗೆ ಅಧಿಕಾರಿಗಳ ಬೆಂಬಲ, ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ, ಆರೋಗ್ಯದಲ್ಲಿ ಎಚ್ಚರ
ಮೂರು ದಶಕಗಳಿಗೂ ಮೀರಿದ ಒಳಮೀಸಲಾತಿ ಹೋರಾಟ ನಮ್ಮದು. ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ, ಹೋರಾಟಬಿಟ್ಟರ ಇಷ್ಟೊಂದು ಸುಧೀರ್ಘ ಹೋರಾಟ ಮತ್ತೊಂದು ಇರಲಾರದು. ಈ ಹೋರಾಟದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಸ್ವಂತ ಬದುಕು. ಸಂಸಾರವನ್ನು ನಿರ್ಲಕ್ಷಿಸಿ ವರ್ಷಗಟ್ಟಲೇ ಹೋರಾಟದಲ್ಲಿ ಜೊತೆಯಾಗಿದ್ದಾರೆ ಸುಪ್ರೀಂಕೋರ್ಟ್ ತೀರ್ಪು ಬಂದ ನಂತರವೂ ನಾವು ಹೋರಾಟ ಮಾಡಬೇಕಾಯಿತು. ಆಯೋಗದ ವರದಿಯ ಅಂಗೀಕಾರಕ್ಕೂ ರಾಜ್ಯದೆಲ್ಲೆಡೆ ಹೋರಾಟ ಮಾಡಬೇಕಾಯಿತು. ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಬೀಗ ಜಡಿಯಬೇಕಾಯಿತು. ಇಂತಹದೊಂದು ಐತಿಹಾಸಿಕವಾದ ಹೋರಾಟದೊಂದಿಗೆ ನಮ್ಮಪಾಲಿನ ಮೀಸಲಾತಿಯನ್ನು ದಕ್ಕಿಸಿಕೊಳ್ಳುವುದು ಸುಧೀರ್ಘವಾದ ಸಾಧ್ಯವಾಗುತ್ತಿದೆ.
ನಮ್ಮ ಹೋರಾಟಕ್ಕೆ ಉಳಿದ ಸಮಾಜದವರೂ ಸಹಾನುಭೂತಿ ತೋರಿಸಿದ್ದಾರೆ. ಹೋರಾಟದ ಹಾದಿಯಲ್ಲಿ ಆಗಿರಬಹುದಾದ ಸಣ್ಣ ಪುಟ್ಟ ನೋವು ತೊಂದರೆಗಳಿಗೆ ಸಮಾಜದ ಪರವಾಗಿ ಶ್ರೀಮರ ಕ್ಷಮೆಯನ್ನೂ ಈ ನೆಲದ ಗುಣ, ಒಳಮೀಸಲಾತಿ ಎಲ್ಲ ಶೋಷಿತರ ಕೇಳುತ್ತದೆ. ಹಂಚಿ ಉಣ್ಣುವುದು ಭಾಗೋದಯವಾಗುವುದರಲ್ಲಿ ಸಂಶಯವಿಲ್ಲ ಎಂದು ಮಾದಾರ ಚನ್ನಯ್ಯ ಶ್ರೀಗಳು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.
ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ ಮಾತನಾಡಿ, ಮೂರು ದಶಕಗಳ ಸತತ ಹೋರಾಟದ ಫಲವಾಗಿ ಒಳಮೀಸಲಾತಿ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.ನ್ಯಾ.ಸಂತೋಷ ಹೆಗಡೆ ಅವರ ಪೀಠ ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ ಎಂದು ಹೇಳಿತ್ತು. ಆನಂತರ ಸರ್ವೋಚ್ಛ ನ್ಯಾಯಾಲಯ ರಾಜ್ಯಗಳಿಗೆ ಅವಕಾಶ ಇದೆ ಎನ್ನುವುದನ್ನು ಒತ್ತಿ ಹೇಳಿದೆ.ಕೇಂದ್ರ ಸರ್ಕಾರ ಕೂಡಾ ಪೂರಕವಾಗಿ ಹೇಳಿದೆ.
ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಮೋಹನ್ ಭಾಗವತ್ ಅವರಿಗೂ ಧನ್ಯವಾದ ಹೇಳುತ್ತೇವೆ ಎಂದರು. ನ್ಯಾ.ನಾಗಮೋಹನದಾಸ್ ಆಯೋಗ ಹಾಗೂ ರಾಜ್ಯ ಸರ್ಕಾರವನ್ನೂ ಅಭಿನಂದಿಸುತ್ತೇವೆ ಎಂದರು.
ಸ್ವಾಭಿಮಾನಿ ಮಾದಿಗ ಮಹಾಸಭಾದ ಜಿ.ಎಚ್.ಮೋಹನ್ ಮಾತನಾಡಿ, ಒಳಮೀಸಲಾತಿ ಜಾರಿಗೆ ನೇರ ಕಾರಣ ಹೋರಾಟಗಾರರು ಎಂದು ಸ್ಮರಿಸಿದರು. ಒಳಮೀಸಲಾತಿ ಹೋರಾಟದ ಒಳ ಹೊಡೆತಗಳ ಸಂದರ್ಭದಲ್ಲಿ ಕ್ರಿಯಾಶೀಲರಾಗಿ ಮಾದಾರ ಚನ್ನಯ್ಯ ಶ್ರೀಗಳು ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ವಾಹನ ಸವಾರರಿಗೆ GOOD NEWS | ದಂಡದ ಮೊತ್ತದಲ್ಲಿ ಶೇ.50 ಡಿಸ್ಕೌಂಟ್ | ಯಾರಿಗೆಲ್ಲ ಅನ್ವಯ, ಇಲ್ಲಿದೆ ಅದರ ಡೀಟೇಲ್ಸ್
ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದಲ್ಲಿ ನಡೆದ ಮಾದಿಗರ ವಿಶ್ವರೂಪಂ ಸಮಾವೇಶದಲ್ಲಿ ಭಾಗವಹಿಸಿ ನೆರವಾಗಿದ್ದಾರೆ. ಆರೆಸ್ಸೆಸ್ಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಮಾದಾರ ಗುರುಪೀಠಕ್ಕೆ ಆಗಮಿಸಿದಾಗ ಎಳೆಎಳೆಯಾಗಿ ಅವರಿಗೆ ಒಳಮೀಸಲಾತಿ ವಿವರಗಳನ್ನು ನೀಡಲಾಗಿತ್ತು ಎಂದರು.
ಈಗ ಘೋಷಣೆ ಆಗಿರುವ ಒಳಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಅನ್ಯಾಯ ಆಗಿದೆ. ಅವರನ್ನು ಪ್ರತ್ಯೇಕಗೊಳಿಸಿ ಮೀಸಲಾತಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಹುಲ್ಲೂರು ಕುಮಾರಸ್ವಾಮಿ ಮಾತನಾಡಿ, ಅಲೆಮಾರಿ ಸಮುದಾಯವನ್ನು ಪ್ರತ್ಯೇಕಿಸಿ ಅವರಿಗೆ ಶೇ.2 ರಷ್ಟು ಮೀಸಲಾತಿ ಹಂಚಿಕೆ ಮಾಡಬೇಕು ಎಂದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

