ಮುಖ್ಯ ಸುದ್ದಿ
Guruvandana: ಗೂಳಯ್ಯನಹಟ್ಟಿ ಮೊರಾರ್ಜಿ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

CHITRADURGA NEWS | 25 NOVEMBER 2024
ಚಿತ್ರದುರ್ಗ: ತಾಲ್ಲೂಕಿನ ಗೂಳಯ್ಯನಹಟ್ಟಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಹಳೆಯ ವಿದ್ಯಾರ್ಥಿಗಳಿಂದ(senior students) ಗುರುವಂದನಾ(Guruvandana) ಹಾಗೂ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಲಿಕ್ ಮಾಡಿ ಓದಿ: ವಿದ್ಯುತ್ ಟ್ರಾನ್ಸ್‍ಫಾರ್ಮರ್ ರಿಪೇರಿಗೆ ದುಡ್ಡು ಕೊಡಬೇಡಿ | ಬೆಸ್ಕಾಂ ಸೂಚನೆ

ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಿಂದ ಆರ್ಥಿಕ ಸಮಾನತೆ ಹೆಚ್ಚುತ್ತದೆ, ಶಿಕ್ಷಣವು ಜೀವನದ ಗುರಿ ಬದಲಾಯಿಸುತ್ತದೆ ಎಂದು ಹೇಳಿದರು.
ಶಿಕ್ಷಣದಿಂದ ವ್ಯಕ್ತಿತ್ವ, ಸಾಮಾಜಿಕ ನಾಯಕತ್ವ, ಬೌದ್ಧಿಕ ವಿಕಾಸನದ ಜೊತೆ ಸ್ಥಿತಿ ಗತಿ ಉತ್ತಮಗೊಳ್ಳಲು ಸಹಕಾರಿಯಾಗಿದೆ. 25 ವರ್ಷಗಳಿಂದ ಈ ಶಾಲೆಯು ಉತ್ತಮ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಶ್ರಮವಹಿದ್ದಾರೆ. ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಶಿಕ್ಷಕ ಮಿತ್ರರು ಮತ್ತು ಸಿಬ್ಬಂದಿಗಳು ಉತ್ತಮ ಸೇವೆ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಉಜ್ಜಲವಾಗಲಿ ಎಂದು ಶುಭ ಹಾರೈಸಿದರು.
ಕ್ಲಿಕ್ ಮಾಡಿ ಓದಿ: ಹಿರಿಯೂರು | ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕರೆಂಟ್ ಇರಲ್ಲ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಮಂಜುನಾಥ್ ರೆಡ್ಡಿ ವಹಿಸಿದ್ದರು.
ಈ ವೇಳೆ ಹೊಳಲ್ಕೆರೆಯ ಕ್ಷೇತ್ರ ಸಮನ್ವಯಧಿಕಾರಿ ಎಸ್.ಸುರೇಂದ್ರನಾಥ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಕುಂತಲಾ, ಹಿರಿಯ ಶಿಕ್ಷಕರುಗಳಾದ ಎಸ್.ಟಿ ಮಾಲಿಂಗಪ್ಪ, ನಾಗರಾಜ್, ಶೇಖರ್, ಹಿರಿಯ ವಿದ್ಯಾರ್ಥಿಗಳಾದ ಭಾನುಮೂರ್ತಿ, ಯತೀಶ್, ಮಧು, ನವೀನ್, ಆದರ್ಶ, ಬಸವರಾಜ್, ಅರವಿಂದ್ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಇದ್ದರು.
