ಲೋಕಸಮರ 2024
ಗೋವಿಂದ ಕಾರಜೋಳ | ಭಾನುವಾರದ ಪ್ರಚಾರದ ಪ್ಲಾನ್

CHITRADURGA NEWS | 13 APRIL 2024
ಚಿತ್ರದುರ್ಗ: ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಏ.14 ರಂದು ಚಿತ್ರದುರ್ಗ ನಗರ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಚುನಾವಣೆ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ: ತೀರ್ಥಹಳ್ಳಿ – ಸೊರಬ ಅಡಿಕೆ ಮಾರುಕಟ್ಟೆ ಧಾರಣೆ
ಚಿತ್ರದುರ್ಗ ನಗರದ ಜಯಲಕ್ಷ್ಮಿ ಬಡಾವಣೆ ಹಾಗೂ ಗಾರೆಹಟ್ಟಿಯಲ್ಲಿ ಬೆಳಿಗ್ಗೆ 7 ರಿಂದ 7.45 ವರೆಗೆ, 8 ರಿಂದ 9.30 ಗಂಟೆಗೆ ವಿದ್ಯಾ ನಗರ, ಬಸವೇಶ್ವರ ನಗರ ಬ್ಯಾಂಕ್ ಕಾಲೋನಿ, ಡಿಸಿಸಿ ಬ್ಯಾಂಕ್ ವೇಮನ ನಗರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ಹಿರಿಯೂರು ಪಟ್ಟಣದ ಐಮಂಗಳ, ಬೆಳಿಗ್ಗೆ 12 ಗಂಟೆಗೆ ವಿ.ವಿ. ಪುರ, ಮದ್ಯಾಹ್ನ 1 ಗಂಟೆಗೆ ಜಿ.ಜಿ. ಹಳ್ಳಿ, ಮದ್ಯಾಹ್ನ 3 ಗಂಟೆಗೆ ಹೊಯ್ಸಳ ನಾಡು, ಸಂಜೆ 4.30 ಕ್ಕೆ ಮಾಸ್ಕಲ್ ನಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ: ಕೋಟೆನಾಡಿಗೆ ಮೊದಲ ಮಳೆಯ ಸಿಂಚನ | ಶನಿವಾರ ಎಲ್ಲೆಲ್ಲಿ ಮಳೆ ಸುರಿದಿದೆ ನೋಡಿ
ಸಂಜೆ 6 ಗಂಟೆಗೆ ಹಿರಿಯೂರು ನಗರದ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂಜೆ 7 ಗಂಟೆಗೆ ಹಿರಿಯೂರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ. ಹೆಚ್. ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಜಿಲ್ಲಾ ಸಂಚಾಲಕ ಎಸ್. ಲಿಂಗಾಮೂರ್ತಿ, ಜಿಲ್ಲಾಧ್ಯಕ್ಷ ಎ. ಮುರುಳಿ, ಮಧುಗಿರಿ ಜಿಲ್ಲಾಧ್ಯಕ್ಷ ಬಿ. ಸಿ.ಹನುಮಂತೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಭಾಗವಹಿಸಲಿದ್ದಾರೆ.
