
CHITRADURGA NEWS | 10 OCTOBER 2025
ಚಿತ್ರದುರ್ಗ: ಕಾತ್ರಾಳ್ ತಿಮ್ಮಪ್ಪನಹಳ್ಳಿ ಸಮೀಪವಿರುವ ಗಂಧಾರಸ್ವಾಮಿ ಶಾಂತವೀರ ಅವಧೂತ ಮಠದ ಲಿಂಗೈಕ್ಯ ಗಂಗಾಧರ ಸ್ವಾಮೀಜಿ ಅವರ ಜನ್ಮದಿನೋತ್ಸವದ ಅಂಗವಾಗಿ ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ ನಡೆದವು.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ 2 ವಿಶೇಷ ರೈಲು | ಯಾವ ಮಾರ್ಗದ ಮೂಲಕ ಹೋಗಲಿವೆ.. ಇಲ್ಲಿದೆ ಮಾಹಿತಿ
ಈ ವೇಳೆ ಪ್ರಶಾಂತಕುಮಾರ ಸ್ವಾಮೀಜಿ ಮಾತನಾಡಿ, ಸಮಾಜ ಸುಧಾರಣೆಗಾಗಿ ಅನೇಕ ವರ್ಷಗಳ ಕಾಲ ಗಂಗಾಧರಸ್ವಾಮಿ ಕೇದಾರನಾಥ, ಬದ್ರಿನಾಥ ಇನ್ನು ಅನೇಕ ಕಡೆ ಸುತ್ತಾಡಿ ಪ್ರವಚನಗಳನ್ನು ನೀಡಿದ್ದಾರೆ. ಶಿವನ ಆರಾಧಕರಾಗಿದ್ದ ಸ್ವಾಮೀಜಿಯ ಜೀವನವೇ ಒಂದು ಹೋರಾಟವಾಗಿತ್ತು. ಇಂಥವರ ತತ್ವ ಸಿದ್ದಾಂತಗಳ ಮೇಲೆ ಮಠವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು.
ನಮ್ಮ ಮಠ ಕೇವಲ ಭೋವಿ ಸಮಾಜಕ್ಕಷ್ಟೆ ಸೀಮಿತವಲ್ಲ. ಎಲ್ಲಾ ಜಾತಿ ಜನಾಂಗದ ಹಿತ ಬಯಸುತ್ತದೆ. ಮಕ್ಕಳನ್ನು ಶಿಕ್ಷಣವಂತರಾನ್ನಾಗಿಸುವ ಜೊತೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸಬೇಕೆಂದರು.
ಶರಣರ ಕೀರ್ತನೆಗಳನ್ನು ಮನವರಿಕೆ ಮಾಡಿಕೊಂಡು ಮಹಾಭಾರತ, ರಾಮಾಯಣ ಗ್ರಂಥಗಳನ್ನು ಓದಿಕೊಂಡು ಅದರಲ್ಲಿನ ತಿರುಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಈರುಳ್ಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾದ ರೈತರು | ಈರುಳ್ಳಿ ಸುರಿದು ಪ್ರತಿಭಟನೆ
ಗೌತಮ್, ವೆಂಕಟೇಶಿ, ವಿರುಪಾಕ್ಷಪ್ಪ, ಮಂಜುನಾಥಸ್ವಾಮಿ, ಹರೀಶ್, ರುದ್ರೇಶಿ, ಸಂತೋಷ್ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

