CHITRADURGA NEWS | 04 APRIL 2025
ಚಿತ್ರದುರ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಾಲಿಬಾಲ್, ಅಥ್ಲೆಟಿಕ್ಸ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕ್ರೀಡೆಗಳಿಗೆ ಸಂಬಂಧಿಸಿದಂತೆ, ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರ ಆಯೋಜಿಸಲಾಗಿದೆ.
Also Read: ಚಿತ್ರದುರ್ಗಕ್ಕೆ ವರ್ಷದ ಮೊದಲ ಮಳೆ | ಇಳೆ ತಂಪಾಗುವಂತೆ ಸುರಿದ ಮಳೆ
ಏಪ್ರಿಲ್ 07 ರಿಂದ 30 ವರೆಗೆ ಕ್ರೀಡಾ ತರಬೇತಿ ಶಿಬಿರ ನಡೆಯಲಿದ್ದು, ಹಾಸ್ಟೆಲ್ ಮಕ್ಕಳು ಸೇರಿದಂತೆ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಈ ಶಿಬಿರದ ಸದಪಯೋಗ ಪಡೆದುಕೊಳ್ಳಬಹುದು.
ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಕ್ರೀಡೆಗಳ ತರಬೇತಿ ನೀಡಲಾಗುವುದು.
Also Read: ವಿದ್ಯುತ್ ಶಾಕ್ | ತಾಯಿ, ಮಗು ಸಾವು
ವಾಲಿಬಾಲ್ ತರಬೇತಿ ನೊಂದಣಿಗೆ ತರಬೇತುದಾರ ಮಹಮ್ಮದ್ ಮುಹೀಬುಲ್ಲಾ ದೂರವಾಣಿ ಸಂಖ್ಯೆ 9611673475, ಅಥ್ಲೆಟಿಕ್ಸ್ ನೊಂದಣಿಗೆ ತರಬೇತುದಾರ ತಿಪ್ಪಣ್ಣ.ಎಸ್.ಮಾಳಿ ದೂರವಾಣಿ ಸಂಖ್ಯೆ 9380889647, ಷಟಲ್ ಬ್ಯಾಡ್ಮಿಂಟನ್ ನೊಂದಣಿಗೆ ತರಬೇತುದಾರ ಗುರುಮೂರ್ತಿ ದೂರವಾಣಿ ಸಂಖ್ಯೆ 9481038141 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
