CHITRADURGA NEWS| 04 July 2025
ಚಿತ್ರದುರ್ಗ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(Cooperative Society) ನಿಯಮಿತದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಹುದ್ದೆಗೆ ಆಯ್ಕೆ ಜರುಗಿತು. ಅಧ್ಯಕ್ಷರಾಗಿ ಎ.ಈಶ್ವರಪ್ಪ, ಉಪಾಧ್ಯಕ್ಷರಾಗಿ ಎಸ್.ಜಯ್ಯಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಜೀವರಾಂ ತಿಳಿಸಿದ್ದಾರೆ.
Also Read: ಎಸ್.ನಿಜಲಿಂಗಪ್ಪ ಸ್ಮಾರಕಕ್ಕೆ ಶ್ರೀಶೈಲ ಜಗದ್ಗುರುಗಳ ಭೇಟಿ
ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಕಳೆದ 22 ರಂದು ಚುನಾವಣೆ ನಡೆದಿದ್ದು, 12 ಸ್ಥಾನಗಳಲ್ಲಿ ಮೂರು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 9 ಸ್ಥಾನಗಳಿಗೆ 19 ಜನ ಸ್ಫರ್ಧಾ ಕಣದಲ್ಲಿದ್ದರು.
ಅಂತಿಮವಾಗಿ ಮತದಾರರು ಎ.ಈಶ್ವರಪ್ಪ ಮತ್ತು ನಿಶಾನಿ ಜಯ್ಯಣ್ಣರವರು ಗಂಪಿನ ಸದಸ್ಯರನ್ನು ಆಯ್ಕೆ ಮಾಡಿದರು.
ಇಂದು ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಕಚೇರಿಯಲ್ಲಿ ನಡೆದ ನಿರ್ದೆಶಕರ ಸಭೆಯಲ್ಲಿ ಅಧ್ಯಕ್ಷರ – ಉಪಾಧಕ್ಷ ಸ್ಥಾನಕ್ಕೆ ಅವಿರೋದ ಆಯ್ಕೆ ನಡೆದಿದ್ದು ಅಧ್ಯಕ್ಷರಾದ ಎ.ಈಶ್ವರಪ್ಪ ಉಪಾಧ್ಯಕ್ಷರಾಗಿ ಎಸ್.ಜಯ್ಯಪ್ಪ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ನಿರ್ದೇಶಕರುಗಳಾದ ನಿಶಾನಿ ಜಯ್ಯಣ್ಣ, ಎಸ್.ತಿಮ್ಮಪ್ಪ, ಸೂರ್ಯ ಪ್ರಕಾಶ್, ಮಲ್ಲಿಕಾರ್ಜನ್, ಲಕ್ಷ್ಮೀದೇವಿ, ಪಾಪೇಶ್, ಶೇಖಮ್ಮ, ಮೂರ್ತಿ, ನರಸಿಂಗನ್ ಡಿ.ಏಕಾಂತಪ್ಪ ಭಾಗವಹಿಸಿದ್ದರು.
Also Read: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ | ಪೋಕ್ಸೊ ಕೇಸ್ | ಆರೋಪಿಗೆ 20 ವರ್ಷ ಜೈಲು
ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ರಾಮಕೃಷ್ಣಪ್ಪ ಭಾಗವಹಿಸಿದ್ದರು.
ಎ.ಈಶ್ವರಪ್ಪ, ಎಸ್.ಜಯ್ಯಪ್ಪ ಆಯ್ಕೆಯಾಗಿದ್ದಕ್ಕೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
