
CHITRADURGA NEWS | 19 SEPTEMBER 2025
ಚಿತ್ರದುರ್ಗ: ನಗರದ ಆನೆಬಾಗಿಲು ಸಮೀಪ ಸೆ.22 ರಿಂದ ಅ.2 ರವರೆಗೆ ಐದನೇ ವರ್ಷದ ದುರ್ಗಾದೇವಿ ಪ್ರತಿಷ್ಟಾಪಿಸಿ ದುರ್ಗೋತ್ಸವ ಆಚರಿಸಲಾಗುವುದೆಂದು ಹಿಂದೂ ಘರ್ಜನೆ ಸೇನಾ ಸಂಸ್ಥಾನ ಅಧ್ಯಕ್ಷ ಸಾಗರ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 12 ದಿನಗಳ ಕಾಲ ದುರ್ಗಾ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಿ ಪ್ರತಿನಿತ್ಯವೂ ಒಂದೊಂದು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಇದನ್ನೂ ಓದಿ: ಹಿರಿಯೂರು ತಾಲೂಕಿನ ಈ ಹಳ್ಳಿಗಳಲ್ಲಿ ಕರೆಂಟ್ ಇರಲ್ಲ
ಹೋಮ, ಹವನವಿರುತ್ತದೆ. ಅ.2 ರಂದು ಮೆರವಣಿಗೆ ಮೂಲಕ ದುರ್ಗಾದೇವಿಯನ್ನು ಚಂದ್ರವಳ್ಳಿಯಲ್ಲಿ ವಿಸರ್ಜಿಸಲಾಗುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದುರ್ಗಾದೇವಿಯ ದರ್ಶನ ಪಡೆಯುವಂತೆ ಸಾಗರ್ ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ್, ಪಾಂಡುರಂಗಪ್ಪ, ಪೇಜ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
