
CHITRADURGA NEWS | 10 OCTOBER 2025
ಹೊಳಲ್ಕೆರೆ: ಭರಮಸಾಗರ ಹೋಬಳಿಯ ಎಲ್ಲಾ ಗ್ರಾಮಗಳಿಗೆ ಇನ್ನೂ 5 ತಿಂಗಳಿನಲ್ಲಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ಶುದ್ದ ಕುಡಿಯುವ ನೀರು ಪೂರೈಸಲಾಗುವುದೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 10 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?

ಭರಮಸಾಗರ ಹೋಬಳಿಯ ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಇಸಾಮುದ್ರ, ಕಾಲ್ಕೆರೆ, ಭರಮಸಾಗರ, ಯಳಗೋಡು ಕೆರೆಗಳಲ್ಲಿ ಹೂಳು ತೆಗೆಸಿ, ಜಾಲಿ ಗಿಡಗಳನ್ನು ಕಿತ್ತು ಅಭಿವೃದ್ದಿ ಪಡಿಸಿದ ಪರಿಣಾಮ ನೀರು ತುಂಬಿದೆ. ಎಲ್ಲಿಯೂ ಗದ್ದಲ, ಗಲಾಟೆ, ಜಾತಿ ನಿಂದನೆ ಕೇಸಿಗೆ ಅವಕಾಶ ಕೊಟ್ಟಿಲ್ಲ. ನೆಮ್ಮದಿಯ ವಾತಾವರಣವಿದೆ.
ಮುಂದಿನ ದಿನಗಳಲ್ಲಿ ಇಲ್ಲಿ ನಾಲ್ಕು ಶಾಲೆಗಳನ್ನು ಕಟ್ಟಿಸುತ್ತೇನೆ. ಭರಮಸಾಗರದಲ್ಲಿ ಹತ್ತು, ಕೊಳಾಳ್, ಎಮ್ಮೆಹಟ್ಟಿ, ಇಸಾಮುದ್ರದಲ್ಲಿ ನಾಲ್ಕು ಶಾಲೆಗಳನ್ನು ಕಟ್ಟಿಸಿದ್ದೇನೆ. ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅದುವೆ ನಿಜವಾದ ಆಸ್ತಿ ಎಂದು ಹೇಳಿದರು.
ಇದನ್ನೂ ಓದಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ | ಅ.18 ರವರೆಗೆ ವಿಸ್ತರಣೆ | ಜಿಲ್ಲಾಧಿಕಾರಿ
ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹತ್ತು ಲಕ್ಷ ರೂ.ಗಳನ್ನು ಕೊಟ್ಟಿದ್ದೇನೆ. ಶಿವನಿ, ಅಜ್ಜಂಪುರದವರೆಗೂ ನನ್ನ ಕ್ಷೇತ್ರವಿದೆ. ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ಹೋರಾಟ ಮಾಡಿ ಹಣ ತಂದು ಪ್ರತಿನಿತ್ಯವು ಎಲ್ಲಾ ಗ್ರಾಮಗಳಲ್ಲಿ ಒಂದಲ್ಲ ಒಂದು ಅಭಿವೃದ್ದಿ ಕೆಲಸಗಳನ್ನು ಮಾಡಿಸುತ್ತಿದ್ದೇನೆ ಎಂದರು.
ಭರಮಸಾಗರ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಶೈಲೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಂಜುನಾಥ್, ಸದಸ್ಯರುಗಳಾದ ಎನ್.ಟಿ.ತಿಪ್ಪೇಸ್ವಾಮಿ, ಶಿವಮ್ಮ ರಾಮಚಂದ್ರನಾಯ್ಕ, ಸತೀಶ್‍ಕುಮಾರ್, ಕ್ಯಾತಪ್ಪ, ನಾಗೇಂದ್ರಪ್ಪ, ಶಿವಣ್ಣ, ಹಿರೇಬೆನ್ನೂರು ನಾಗರಾಜ್ ಸೇರಿದಂತೆ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
