
CHITRADURGA NEWS | 07 OCTOBER 2024
ಚಿತ್ರದುರ್ಗ: ಕಳೆದ ಮೂರು ದಶಕಗಳಿಂದ ಮಠ ಪರಂಪರೆಯಲ್ಲಿದ್ದುಕೊಂಡು ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾ, ಮಠ, ಶಿಕ್ಷಣ ಸಂಸ್ಥೆಗಳ ಆಗುಹೋಗುಗಳನ್ನು ನೋಡಿಕೊಂಡು ಹೋಗುತ್ತಿದ್ದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಗಂಭೀರ ಪ್ರಕರಣದ ಆರೋಪದಡಿ ಜೈಲು ಸೇರುವ ಪರಿಸ್ಥಿತಿ ಸೃಷ್ಟಿಯಾಯಿತು.
ಮಠಾಧಿಪತಿಯೊಬ್ಬರು ಕಾರಾಗೃಹದಲ್ಲಿ ಹೇಗೆ ದಿನ ಕಳೆಯುತ್ತಿದ್ದರು ಎನ್ನುವುದು ಎಲ್ಲರಿಗೂ ಕುತೂಹಲದ ವಿಚಾರವೇ ಆಗಿರುತ್ತದೆ. ಅವರ ಪ್ರತಿ ದಿನದ ದಿನಚರಿ ತಿಳಿಯುವ ಕೌತುಕ ಇದ್ದೇ ಇರುತ್ತದೆ.
ಇದನ್ನೂ ಓದಿ: ಮುರುಘೇಶನ ಆಶೀರ್ವಾದದಿಂದ ಬಿಡುಗಡೆ | ಶ್ರೀ ಶಿವಮೂರ್ತಿ ಮುರುಘಾ ಶರಣರು
ಈ ಸಂಬಂಧ ಮುರುಘಾ ಶರಣರನ್ನು ಚಿತ್ರದುರ್ಗದಲ್ಲಿ ಪತ್ರಕರ್ತರು ಮಾತನಾಡಿಸಿದಾಗ, ಮುಂದೆ ಹೇಳುತ್ತೇನೆ. ಇದು ಮಾತನಾಡುವ ಸಮಯವಲ್ಲ. ಸದ್ಯಕ್ಕೆ ಮೌನವಾಗಿರುವ ಕಾಲ ಎಂದಷ್ಟೇ ಹೇಳಿದರು.

ಚಿತ್ರದುರ್ಗದ ಕಾರಾಗೃಹದಿಂದ ಹೊರ ಬಂದ ನಂತರ ನೇರವಾಗಿ ದಾವಣಗೆರೆ ಶಿವಯೋಗಾಶ್ರಮಕ್ಕೆ ಶ್ರೀ ಶಿವಮೂರ್ತಿ ಮುರುಘಾ ಶರಣರನ್ನು ಕರೆದೊಯ್ಯಲಾಯಿತು.
ಶಿವಯೋಗಾಶ್ರಮ ಪ್ರವೇಶಿಸುತ್ತಲೇ ದಾವಣಗೆರೆಯ ಭಕ್ತರು ಶ್ರೀಗಳನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇಲ್ಲಿರುವ ಶ್ರೀ ಜಗದ್ಗುರು ಜಯದೇವ ಶ್ರೀಗಳು ಹಾಗೂ ಅಥಣಿ ಮುರುಘರಾಜೇಂದ್ರ ಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ.
ಶ್ರೀಗಳು ಜೈಲಿನಲ್ಲಿ ಓದಿದ್ದು ಬರೋಬ್ಬರಿ 400 ಪುಸ್ತಕ, ಬರೆದಿದ್ದೆಷ್ಟು ?
ಆನಂತರ ದಾವಣಗೆರೆಯ ಪತ್ರಕರ್ತರು ಶ್ರೀಗಳನ್ನು ಮಾತನಾಡಿಸಿದ್ದಾರೆ. ಈ ವೇಳೆ ಶ್ರೀಗಳು ಅಚ್ಚರಿಯ ವಿಚಾರವನ್ನು ಹೇಳಿದ್ದಾರೆ.
ಮುರುಘಾ ಶರಣರು 2022 ಸೆಪ್ಟಂಬರ್ 1 ರಂದು ಶ್ರೀಗಳ ಬಂಧನವಾಗಿತ್ತು. 2023 ನವೆಂಬರ್ 8 ರಂದು ಶ್ರೀಗಳು ಜಾಮೀನು ಪಡೆದು ಹೊರ ಬಂದಿದ್ದರು. ಆದರೆ, ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಂತರ 2024 ಏಪ್ರಿಲ್ 29 ರಂದು ಮತ್ತೊಮ್ಮೆ ಜೈಲು ಸೇರುವಂತಾಯಿತು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ಧಾರಣೆ ಎಷ್ಟಿದೆ
ಹೀಗೆ ಒಟ್ಟು ಎರಡು ಬಾರಿ ಶ್ರೀಗಳು ಜೈಲು ಸೇರಿದ್ದರು. ಮೊದಲ ಸಲ ಕಾರಾಗೃಹಕ್ಕೆ ಹೋದಾಗ ಬರೋಬ್ಬರಿ 250 ಪುಸ್ತಕಗಳನ್ನು ಓದಿದ್ದಾರೆ.
ಎರಡನೇ ಬಾರಿ ಮತ್ತೆ ಜೈಲು ಸೇರಿದಾಗ ಶ್ರೀಗಳು 150 ಪುಸ್ತಕಗಳನ್ನು ಓದಿದ್ದಾರೆ. ಹೀಗೆ ಒಟ್ಟು ಎರಡು ಅವಧಿಯಲ್ಲಿ ಅಂದಾಜು 400 ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಸಂಪಾದನೆಗೆ ಹೆಚ್ಚು ಒತ್ತು ನೀಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಶರಣರಿಗೆ ಜಾಮೀನು ಮಂಜೂರು | ಚಿತ್ರದುರ್ಗ ನ್ಯಾಯಾಲಯದಿಂದ ಆದೇಶ
ಇನ್ನೂ ಜೈಲಿನಲ್ಲಿರುವಾಗ ಬೇರೆ ಬೇರೆ ವಿಷಯಗಳನ್ನು ಇಟ್ಟುಕೊಂಡು 5 ಪುಸ್ತಕಗಳನ್ನು ಬರೆದಿರುವುದಾಗಿ ತಿಳಿಸಿದ್ದಾರೆ. ಈ 5 ಕೃತಿಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡುವುದಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಅಖಂಡ ಸಹನೆಯ ಬಲದಿಂದ ಏನನ್ನಾದರೂ ಸಾಧಿಸಬಹುದು ಮತ್ತು ಗೆಲ್ಲಬಹುದು ಎನ್ನುವುದು ಬಸವಾದಿ ಶರಣರ ನಿಲುವು. ನಮ್ಮ ಜೈಲುವಾಸವನ್ನು ಸಹನೆ, ಧೈರ್ಯ, ಆತ್ಮಸ್ಥೈರ್ಯದಿಂದ ನಿಭಾಯಿಸಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

