CHITRADURGA NEWS | 05 APRIL 2025
ಚಿತ್ರದುರ್ಗ: ಹಳ್ಳಿಗಳ ಅಭಿವೃದ್ಧಿ ದೇಶದ ಪ್ರಗತಿಗೆ ಬುನಾದಿ ಹಾಗಾಗಿ ಗ್ರಾಮೀಣ ಪ್ರದೇಶಗಳು ಸ್ವಚ್ಛತೆಯಿಂದ ಕೂಡಿರಬೇಕಾದರೆ ನಿಸ್ವಾರ್ಥ ಸೇವಾ ಮನೋಭಾವ ಎಲ್ಲರಲ್ಲೂ ನೆಲೆಸಬೇಕು ಎಂದು ಎಸ್ಆರ್ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಡಾ.ಟಿ. ಎಸ್.ರವಿ ಹೇಳಿದರು.
Also Read: ಬೆಸ್ಕಾಂ ಎಇಇ ಸೇರಿ ಮೂರು ಜನರಿಗೆ ಜೈಲು ಶಿಕ್ಷೆ | ವಿದ್ಯುತ್ ತಗುಲಿ ಬಾಲಕ ಮೃತಪಟ್ಟಿದ್ದ ಪ್ರಕರಣ

ಎಸ್ ಆರ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದಿಂದ ಹಮ್ಮಿಕೊಂಡಿದ್ದ ವಿಶೇಷ ವಾರ್ಷಿಕ ಶಿಬಿರ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ಶಿಬಿರಾರ್ಥಿಗಳ ಸೇವಾ ಮನಸ್ಥಿತಿಯು ಮೌಲ್ಯಯುತವಾದದ್ದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜಿ.ಪಿ.ನಂದನ್ ಶಿಬಿರದ ಉದ್ದೇಶ ಮತ್ತು ಗುರಿ ಸಾರ್ಥಕತೆ ಹೊಂದಲು ಶಿಬಿರಾರ್ಥಿಗಳ ನಿಸ್ವಾರ್ಥ ಸೇವೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಎನ್ ಎಸ್ ಎಸ್ ಕಾರ್ಯಕ್ರಮ ಆಧಿಕಾರಿಗಳಾದ ದೇವೇಂದ್ರಪ್ಪ ಕೆ ಕುಂಚಿಗನಾಳ್, ಮಾಜಿ ಸೈನಿಕಾರದ ಜಯಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಧನ ಅಭಿಷೇಕ್, ಊರಿನ ಯುವ ಮುಖಂಡರಾದ ರಘುರಾಂ, ಕಲ್ಲಿನಾಥ್, ಸಹ ಶಿಬಿರಾಧಿಕಾರಿ ಜೆ.ರಮೇಶ್, ಗ್ರಂಥಪಾಲಕ ಕಿರಣ್ ಕುಮಾರ್ ಉಪಸ್ಥಿತರಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
