
ಚಿತ್ರದುರ್ಗ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ವಾರದೊಳಗೆ ಹೃದಯಾಘಾತದಿಂದ ಮೃತಪಟ್ಟಿದ್ದ ಚಿತ್ರದುರ್ಗದ ಸಿಎನ್‍ಸಿ ಪಿಯು ಕಾಲೇಜಿನ ವಿದ್ಯಾರ್ಥಿ ಓ.ಚೇತನ್‍ಗೆ ಬರೋಬ್ಬರಿ 506 ಅಂಕಗಳು ಬಂದಿದ್ದು, ಫಸ್ಟ್‍ಕ್ಲಾಸ್‍ನಲ್ಲಿ ತೇರ್ಗಡೆ ಹೊಂದಿದ್ದಾನೆ. ದುರ್ದೈವ ಈಗ ಚೇತನ್ ಇಲ್ಲ. ಮಗನ ಸಾಧನೆ ಕಂಡು ಹೆತ್ತವರು ಸಂಕಟ ಅನುಭವಿಸುತ್ತಿದ್ದಾರೆ.
ನಗರದ ಕೋಣನಹಟ್ಟಿ ನಿವಾಸಿಗಳಾದ ಓಬಳೇಶ್ ಮತ್ತು ಮಂಜುಳಾ ದಂಪತಿ ಪುತ್ರ ಓ.ಚೇತನ್ ಚಿತ್ರದುರ್ಗ ಸಿಎನ್‍ಸಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ. ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಆರು ದಿನಗಳ ನಂತರ ಹೃದಯಾಘಾತದಿಂದ ಮೃತಪಟ್ಟಿದ್ದ.
ಇದನ್ನೂ ಓದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿ ಚೇತನ್ ಹೃದಯಾಘಾತದಿಂದ ಸಾವು

ಈ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕಗಳಿಸಿದ್ದ ಚೇತನ್, ಈಗ ದ್ವಿತೀಯ ಪಿಯುಸಿಯಲ್ಲಿ ಶೇ.84.33 ರಷ್ಟು ಅಂಕಗಳಿಸಿದ್ದಾನೆ. ಕನ್ನಡದಲ್ಲಿ 84, ಇಂಗ್ಲಿಷ್ 81, ಭೌತಶಾಸ್ತ್ರ 87, ರಸಾಯನಶಾಸ್ತ್ರ 77, ಗಣಿತ 90, ಜೀವಶಾಸ್ತ್ರದಲ್ಲಿ 87 ಅಂಕಗಳನ್ನು ಪಡೆದಿದ್ದಾನೆ.
ಪರೀಕ್ಷೆ ಮುಗಿದ ಮರು ದಿನದಿಂದಲೇ ನೀಟ್‍ಗೆ ತಯಾರಿಗಾಗಿ ತರಬೇತಿ ಪಡೆಯುತ್ತಿದ್ದ, ಬದುಕಿದ್ದರೆ ವೈದ್ಯನಾಗುವ ಕನಸು ಕಂಡಿದ್ದ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
