CHITRADURGA NEWS | 23 DECEMBER 2025
ಹಿರಿಯೂರು: ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತನೆಯಾಗಿದ್ದ ಭೂಮಿಯನ್ನು ವಾಸದ ಉದ್ದೇಶಕ್ಕೆ ಪರಿವರ್ತನೆ ಮಾಡುವ ವೇಳೆ ಜಿಲ್ಲಾಧಿಕಾರಿಗಳ ಸಹಿಯನ್ನೇ ಫೋರ್ಜರಿ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಡಿಜಿಟಲ್ ಸಹಿಯನ್ನು ಫೋರ್ಜರಿ ಮಾಡಿ ಕಡತವನ್ನು ಪಾಸು ಮಾಡಿಸಲು ಯತ್ನಿಸಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲೇ ಲಾಕ್ ಆಗಿದೆ.
ಇದನ್ನೂ ಓದಿ: ಭರತನಾಟ್ಯದಲ್ಲಿ ಚಿತ್ರದುರ್ಗದ ಪ್ರಾರ್ಥನಾ ರಾಜ್ಯಮಟ್ಟಕ್ಕೆ ಆಯ್ಕೆ
ಹಿರಿಯೂರು ಟೌನ್ ವ್ಯಾಪ್ತಿಯಲ್ಲಿ ಅನಿಲ್ ಕುಮಾರ್ ಎಂಬುವವರು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಯಲ್ಲಿ ಜಿಲ್ಲಾಧಿಕಾರಿಗಳ ಡಿಜಿಟಲ್ ಸಿಗ್ನೇಚರ್ ಫೋರ್ಜರಿಯಾಗಿದೆ.
ಜಿಲ್ಲಾಧಿಕಾರಿ ಕಚೇರಿಗೆ ಬರುವ ಮನವಿಗಳಿಗೆ ಕೋಡಿಂಗ್ ಬಳಸಲಾಗುತ್ತದೆ. ಆದರೆ, ಫೋರ್ಜರಿ ಆಗಿರುವ ಪ್ರತಿಯಲ್ಲಿದ್ದ ಕೋಡಿಂಗ್‌ನಲ್ಲಿ ವ್ಯತ್ಯಾಸವಿದ್ದ ಕಾರಣಕ್ಕೆ ಸಹಿ ಫೋರ್ಜರಿ ಎನ್ನುವುದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ:ಅಡಿಕೆ ಧಾರಣೆ | ಮತ್ತೆ ಚೇತರಿಕೆ ಕಂಡ ರಾಶಿ ಅಡಿಕೆ ಬೆಲೆ
ತಾಲೂಕು ಅಥವಾ ಉಪವಿಭಾಗಾಧಿಕಾರಿ ಕಚೇರಿ ಹಂತದಲ್ಲಿ ಕಡತ ಇದ್ದಾಗ ಫೋರ್ಜರಿ ಡಿಜಿಟಲ್ ಸಹಿ ಫೋರ್ಜರಿ ಆಗಿರುವ ಶಂಕೆ ಇದೆ.
ಈ ಸಂಬಂಧ ನವೆಂಬರ್ 11 ರಂದು ಹಿರಿಯೂರು ಕಸಬಾ ಆರ್‌ಐ ಎಂ.ಎನ್.ಸ್ವಾಮಿ ಹಿರಿಯೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
