ಮುಖ್ಯ ಸುದ್ದಿ
DCC ಬ್ಯಾಂಕ್ ಅಧ್ಯಕ್ಷ ಸ್ಥಾನ | ಅವಿರೋಧವಾಗಿ ಆಯ್ಕೆ ಆಗ್ತಾರಾ ಡಿ.ಸುಧಾಕರ್ !

CHITRADURGA NEWS | 13 SEPTEMBER 2024
ಚಿತ್ರದುರ್ಗ: ಬಹು ನಿರೀಕ್ಷಿತ ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ (DCC) ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ಮುಗಿದಿದೆ. ಇನ್ನೇನಿದ್ದರೂ ನಿರ್ದೇಶಕರೆಲ್ಲರೂ ಸೇರಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ.
ಸತತ 22 ವರ್ಷಗಳಿಂದ ಡಿ.ಸುಧಾಕರ್ ಡಿಸಿಸಿ ಬ್ಯಾಂಕಿನ ಸಾರಥ್ಯ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಬ್ಯಾಂಕಿಗೆ ಹೊಸ ರೂಪ ಕೊಡಲಾಗಿದೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ | ಐದು ಜನರ ಗೆಲುವು
ಈಗ ಮುಂದಿನ ಐದು ವರ್ಷಕ್ಕೆ ಮತ್ತೆ ಹೊಸ ಸಮಿತಿ, ಅಧ್ಯಕ್ಷರ ಆಯ್ಕೆ ಆಗಬೇಕಿದೆ. ಮುಂದಿನ 15 ದಿನಗಳ ಒಳಗೆ ಚುನಾವಣಾ ಅಧಿಕಾರಿಗಳು ಅಧ್ಯಕ್ಷ ಸ್ಥಾನದ ಚುನಾವಣೆಗೆ ಕ್ಯಾಲೆಂಡರ್ ಹಾಕುವ ಸಾಧ್ಯತೆ ಇದೆ.
ನಿರ್ದೇಶಕರ ಚುನಾವಣೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಿ.ಸುಧಾಕರ್, ಗೆದ್ದಿರುವ 12 ನಿರ್ದೇಶಕರೂ ನಮ್ಮವರೇ ಆಗಿದ್ದಾರೆ. ಯಾರೂ ಬೇರೆಯವರಲ್ಲ ಎನ್ನುವ ಮೂಲಕ ತಮ್ಮ ಅಧ್ಯಕ್ಷ ಸ್ಥಾನ ಅಭಾದಿತ ಎನ್ನುವ ಸ್ಪಷ್ಟ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ನಿಯಮ ಉಲ್ಲಂಘನೆ | ಡಿಜೆ ಸಿಸ್ಟಂ ವಶ
ಡಿಸಿಸಿ ಬ್ಯಾಂಕಿನ ಒಟ್ಟು 12 ನಿರ್ದೇಶಕರ ಸ್ಥಾನಗಳ ಪೈಕಿ ಸಚಿವ ಡಿ.ಸುಧಾಕರ್ ಸೇರಿದಂತೆ 7 ಜನ ಅವಿರೋಧವಾಗಿ ಆಯ್ಕೆಯಾಗಿದ್ದರು.
ಸೆ.12 ಗುರುವಾರ ನಡೆದ ಚುನಾವಣೆಯಲ್ಲಿ 5 ಜನ ಆಯ್ಕೆಯಾಗಿದ್ದಾರೆ. ಈಗ ಗೆದ್ದಿರುವ 12 ನಿರ್ದೇಶಕರ ಪೈಕಿ ಕೆಲವರು ಬಿಜೆಪಿ ಬೆಂಬಲಿಗರಾಗಿದ್ದರೂ, ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಸಚಿವ ಸುಧಾಕರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸುಧಾಕರ್ ಅವಿರೋಧವಾಗಿ ಆಯ್ಕೆಯಾದರೂ ಅಚ್ಚರಿಯಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
