
CHITRADURGA NEWS | 04 NOVEMBER 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಬೆಳೆಗಳು ಹಾನಿ(Crop Damage)ಯಾಗಿದ್ದು, ಕೂಡಲೇ ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಬಿಡುಗಡೆ ಮಾಡುವಂತೆ ರೈತರು ಅಗ್ರಹಿಸಿದರು.
ಕ್ಲಿಕ್ ಮಾಡಿ ಓದಿ: VaniVilasa Dam: ವಿವಿ ಸಾಗರಕ್ಕೆ ಒಳಹರಿವು ಬಂದ್ | ಎಷ್ಟು ಅಡಿವರೆಗೆ ಬಂತು ನೀರು
ನಗರದ ಡಿಸಿ ಕಚೇರಿ ಎದುರು ಸೋಮವಾರ ರೈತ ಸಂಘದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ಜಿಲ್ಲೆಯು ಅತಿ ಹೆಚ್ಚು ಮಳೆ ಬಿದ್ದುದ್ದರಿಂದ ಜಿಲ್ಲೆಯ ಬೆಳೆಗಳಾದ ಶೇಂಗಾ, ಹತ್ತಿ, ಮೆಕ್ಕೆಜೋಳ, ಈರುಳ್ಳಿ ಇನ್ನೂ ಮುಂತಾದ ಬೆಳೆಗಳು ಸಂಪೂರ್ಣ ಅತಿಯಾದ ಮಳೆಯಿಂದ ಹಾಳಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಬದುಕು ದುಸ್ತರವಾಗಿರುತ್ತದೆ.
ರೈತರು ಬೆಳದಂತ ಮೆಕ್ಕೆಜೋಳ ತೆನೆಯು ಅತಿಯಾದ ಮಳೆಯಿಂದ ಫೋಂಗಾಸ್ ಆಗಿ ಮೊಳಕೆ ಬರುತ್ತಿದೆ ಮತ್ತು ಈರುಳ್ಳಿ ಬೆಳೆ ಅತಿಯಾದ ಮಳೆಯಿಂದ ಕೊಳತು ಹೋಗಿರುತ್ತದೆ.
ಕ್ಲಿಕ್ ಮಾಡಿ ಓದಿ: Onake Obavva: ಒನಕೆ ಓಬವ್ವ ಜಯಂತಿ | ಛಲವಾದಿ ಸಮುದಾಯದಿಂದ ಕರಪತ್ರ ಬಿಡುಗಡೆ
ಶೇಂಗಾ ಬೆಳೆಯು ಮಳೆ ಹೆಚ್ಚಾಗಿರುವುದರಿಂದ ದೊಳು ಕಾಯಿ ಆಗಿರುತ್ತದೆ. ಹತ್ತಿ ಕಾಯಿಯು ಸಹ ಶೀತಾ ಜಾಸ್ತಿಯಾಗಿ ಉದುರಿ ರೈತರಿಗೆ ತುಂಬಾ ತೊಂದರೆಯಾಗಿರುತ್ತದೆ.
ಆದ್ದರಿಂದ ಕೂಡಲೇ ಬೆಳೆ ಸಮೀಕ್ಷೆ ನಡೆಸಿ ರೈತರು ಹಾಕಿದ ಬೆಳೆಗಳಿಗೆ ಅನುಗುಣವಾಗಿ ವ್ಯವಸಾಯದ ಖರ್ಚುನ್ನು ಪರಿಗಣಿಸಿ, ಎಕರೆವಾರು ಪರಿಹಾರವನ್ನು ಘೋಷಿಸಬೇಕು. ತುರ್ತಾಗಿ ಕೆಲವನ್ನು ಮಾಡಿ ಸಂಕಷ್ಟಕ್ಕೆ ಈಡಾದ ರೈತರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ರೈತರಿಗೆ ಎಕರೆ ರೂ.25000 ಗಳಂತೆ ಬೆಳೆ ಪರಿಹಾರ ನೀಡಬೇಕು, ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಬೇಕು. ದಿನಾಂಕ 22-09-2023ರಂದು ಅಕ್ರಮ ಸಕ್ರಮದಡಿ ರೈತರಿಗೆ ಸಂಪರ್ಕ ಕಲ್ಪಿಸುವುದನ್ನು ಬೆಸ್ಕಾಂ ಇಲಾಖೆಯು ನಿಲ್ಲಿಸಿದ್ದು, ರೈತರು ಸ್ವಂತ ಖರ್ಚಿನಿಂದ ಸುಮಾರು ರೂ.3 ರಿಂದ 4 ಲಕ್ಷಗಳನ್ನು ಖರ್ಚು ಮಾಡಿ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ. ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಹಿಂದೆ ಇದ್ದಾಗೆ ಮರು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಕ್ಲಿಕ್ ಮಾಡಿ ಓದಿ: Chitradurga: ಚಿತ್ರದುರ್ಗ-ಚಳ್ಳಕೆರೆ ನಗರಸಭೆ ಉಪಚುನಾವಣೆ | ತೆರವಾದ ಸ್ಥಾನಗಳಿಗೆ ಮೀಸಲಾತಿ ನಿಗಧಿ
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಸೇರಿದಂತೆ ರೈತ ಮುಖಂಡರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
