
CHITRADURGA NEWS | 07 December 2025
ಹೊಸದುರ್ಗ: ಸಾಣೇಹಳ್ಳಿಯ ನಿವೃತ್ತ ಶಿಕ್ಷಕ ಎಸ್ ಬಿ ವೀರಭದ್ರಪ್ಪನವರ ಮನೆಯಂಗಳದಲ್ಲಿ ನಡೆದ ಅನುಭಾವದೆಡೆಗೆ ಅನುಭಾವ ಗೋಷ್ಠಿ ನಡೆಯಿತು.
ಇದನ್ನೂ ಓದಿ: ಡಿಡಿ ಚಂದನ ವಾಹಿನಿಯಿಂದ ಅರ್ಜಿ ಆಹ್ವಾನ | ಕಲಾತ್ಮಕ ಧಾರಾವಾಹಿ ನಿರ್ಮಾಣಕ್ಕೆ ಆಯ್ಕೆ
ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ಅನುಭಾವದೆಡೆಗೆ ಎನ್ನುವ ವಿನೂತನ ಅನುಭವ ಗೋಷ್ಠಿ ನಡೆಯಿತು.
ಈ ಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನಮ್ಮ ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ನಲವತ್ತು ವರ್ಷಗಳ ಕಾಲ ಸರ್ವಶರಣರ ಸಮ್ಮೇಳನ, ಸಾಮೂಹಿಕ ವಿವಾಹ, ಇಷ್ಟಲಿಂಗ ದೀಕ್ಷೆ ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಅನೇಕ ಬದಲಾವಣೆ ತಂದರು.
ಟೀಕೆ ಟಿಪ್ಪಣೆ ಸಹಜ. ಅಂಥವುಗಳಿಗೆ ಹೆದರದೇ ಗಟ್ಟಿತನದಿಂದ ಹೇಳಬೇಕಾದ ವಿಚಾರಗಳನ್ನು ನೇರವಾಗಿ ನಿಷ್ಠುರವಾಗಿ ಹೇಳಬೇಕು. ಮೊದಲು ನಾನು ಸರಿಯಾಗಬೇಕು. ಮನುಷ್ಯ ನಡೆಯುವವನು ಎಡವುದು ಸಹಜ. ಆದರೆ ಎಡವಿದಾಗ ಮತ್ತೆ ಜಾಗೃತನಾಗುವನು. ಮನುಷ್ಯನಿಗೆ ಮನುಷ್ಯತ್ವ ಬಹಳ ಮುಖ್ಯ. ಮನುಷ್ಯ ಅವುಗುಣಗಳನ್ನು ಕಳೆದುಕೊಂಡಾಗ ಶ್ರೇಷ್ಟ ವ್ಯಕ್ತಿಯಾಗುವನು.
ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ | ಇಬ್ಬರು ಯುವಕರು ಸ್ಥಳದಲ್ಲೇ ಸಾವು
ಪ್ರತಿಯೊಬ್ನರ ತಮ್ಮ ತಮ್ಮ ಧರ್ಮದ ಬಗ್ಗೆ ಪ್ರೀತಿ ತೋರಿಸಬೇಕು. ವ್ಯಕ್ತಿ ಅತಿಯಾದರೆ ಸಮಾಜ ಸರಿಯಾಗುವುದು. ಆಡುವ ಮಾತುಗಳು ನಿಷ್ಠುರವಾಗಿದ್ದರೂ ಅದರ ಹಿಂದೆ ಮಾತೃಹೃದಯವಿರುವುದು. ಬದಲಾವಣೆ ನಮ್ಮ ಮನೆಯಿಂದ, ಮಠದಿಂದ, ಊರುಗಳಿಂದ ಆದಾಗ ಮಾತ್ರ ಬದಲಾವಣೆ ಸಾಧ್ಯ. ಪ್ರತಿಯೊಬ್ಬರೂ ಸಾತ್ವಿಕ ಜೀವನ ನಡೆಸಿ ಪ್ರೀತಿಯನ್ನು ಗಳಿಸಿಕೊಳ್ಳಬೇಕು.
ತಳಸಮುದಾಯದ ಜನರು ಅನುಭವ ಮಂಟಪದ ಸಂಪರ್ಕಕ್ಕೆ ಬಂದು ಶರಣರಾದರು. ಪಾಪಿಗೂ ಪರಿವರ್ತನೆ ಆಗುವ ಸಾಧ್ಯತೆಗಳಿಗೆ. ತನ್ನಲ್ಲಿರುವ ಅವಗುಣ ಕಳೆದುಕೊಳ್ಳುವನು ಮಹಾತ್ಮ. ಏನೆಲ್ಲ ಕೇಳಿದರೂ ಏನೂ ಬದಲಾವಣೆ ಆಗದೇ ಇರುವನು ದುರಾತ್ಮ. ಮಹಾಮನೆ ಎಂದರೆ ಕಟ್ಟಡವಲ್ಲ. ಅದೊಂದು ಚಿಂತನ ಗೋಷ್ಠಿ.
ಸಾಣೇಹಳ್ಳಿಯಲ್ಲಿರುವ ಪ್ರತಿಯೊಬ್ಬರು ಶರಣರ ಗುಣಗಳನ್ನು ಅಳವಡಿಸಿಕೊಡರೆ ಸಾಣೇಹಳ್ಳಿ ಭೂಪಟದಲ್ಲಿ ಗುರುತಿಸಿಕೊಂಡಿದ್ದು ಸಾರ್ಥಕ. ಮನುಷ್ಯನ ಮನಸ್ಸು ಬಲವಾಗಿದ್ದರೆ ದೇಹಕ್ಕೆ ಯಾವುದೇ ವಿಪತ್ತುಗಳು ಬರುವುದಿಲ್ಲ. ಜನರಿಗೆ ಒಳ್ಳೆಯ ಭಾವನೆ ಇದೆ. ಆದರೆ ಅವರಿಗೆ ವಿಚಾರದ ಕೊರತೆ ಇದೆ.
ಇದನ್ನೂ ಓದಿ: ಬೀದಿ ನಾಯಿ ನಿಯಂತ್ರಣಕ್ಕೆ ಚಿತ್ರದುರ್ಗ ನಗರಸಭೆ ಸೂಚನೆ
ಅಂತಹ ವಿಚಾರಗಳನ್ನು ತಲುಪಿಸುವ ಕಾರ್ಯ ಇಂತಹ ಗೋಷ್ಠಿಗಳಿಂದ ಆಗಬೇಕಾಗಿದೆ ಎಂದರು. ಸಾಣೇಹಳ್ಳಿ ಬದಲಾದರೆ ಇಡೀ ಜಗತ್ತು ಬದಲಾವಣೆಗೆ ರಹದಾರಿ ಆಗಬೇಕು. ನಮಗೆ ಜಾತಿ ಮುಖ್ಯವಾಗದೇ ನೀತಿ, ಸಿದ್ಧಾಂತ ಮುಖ್ಯವಾಗಬೇಕು. ಇಲ್ಲಿರುವ ಎಲ್ಲರೂ ಇಷ್ಟಲಿಂಗ ನಿಷ್ಟರಾಗಬೇಕು.
ಅನುಭಾವದ ನುಡಿಗಳನ್ನಾಡಿದ ಆದ್ರಿಕಟ್ಟೆಯ ನಿವೃತ್ತ ಮುಖ್ಯ ಶಿಕ್ಷಕ ಜಿ ಬಸವರಾಜಪ್ಪ ಇದು ಎಲ್ಲರ ಹೃದಯಗಳನ್ನು ಸಮ್ಮಿಲನಗೊಳ್ಳುವ ಮನೆಯಂಗಳದ ಕಾರ್ಯಕ್ರಮ ಇದು. ಇದೊಂದು ಜಾತ್ರೆಯ ಸಮಾರಂಭವಲ್ಲ, ಅನುಭಾವ ಗೋಷ್ಠಿ. ಇದು ನಮ್ಮೆಲ್ಲರ ಅನುಭಾವದ ಅನುಭವವನ್ನು ವ್ಯಕ್ತ ಪಡಿಸುವ ಗೋಷ್ಠಿಯಾಗಬೇಕು.
ನಾವು ವೇದಿಕೆಯಲ್ಲಿ ಮಾತ್ರ ನಡೆನುಡಿ ಸಿದ್ಧಾಂತ ಆದರೆ ಆಚರಣೆಯಲ್ಲಿ ನಡೆಯೇ ಒಂದು ನುಡಿ ಮತ್ತೊಂದಾಗಿದೆ. ನಮ್ಮ ಮಹಿಳೆಯವರ ಹಣೆಯ ಮೇಲೆ ವಿಭೂತಿ ಧರಿಸಿದರೆ ಅವರಿಗೆ ಎಲ್ಲಿಲ್ಲದ ಗೌರವ ಸಿಗುವುದು. ಹಣೆಯ ಮೇಲೆ ವಿಭೂತಿ ಧರಿಸಿರೆ ಮುಂದೆ ಬರುವ ವಿಪತ್ತುಗಳು ದೂರವಾಗುವುದು. ಶೂದ್ರರಾಗಿದ್ದವರಿಗೆ ಶಕ್ತಿಕೊಟ್ಟಿದ್ದು ವಚನ ಸಾಹಿತ್ಯ.
ಇದನ್ನೂ ಓದಿ: ಪೌರ ಕಾರ್ಮಿಕರಯಿಂದ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ
ಶರಣರು ಕೊಟ್ಟ ಸತ್ಯವನ್ನು ಅರ್ಥ ಮಾಡಿಕೊಳ್ಳದೇ ಇರುವುದು ದುರಂತ. ಶರಣ ಚಳವಳಿ ಪ್ರಾರಂಭ ಆದಾಗ ಯಾವುದೇ ಮಠಮಾನ್ಯಗಳು ಇರಲಿಲ್ಲ. ಭಕ್ತರ ಮನೆಗಳೆ ಮಠಗಳಾಗಿದ್ದವು. ಅನುಭವ ಮಂಟಪಗಳಾಗಿದ್ದವು. ನಮಗೆ ಅಂತರಂಗ ಬಹಿರಂಗ ಶುದ್ಧವಾಗಿರಬೇಕು. ಸತ್ಯ ಶುದ್ಧವಾದ ನಡಾವಳಿಕೆ ಇರುವವರನ್ನು ಪ್ರೀತಿಸಿ.
ಶ್ರಮಿಕರನ್ನು, ಅಸಹಾಯಕರನ್ನು, ಕಾಯಕ ಜೀವಿಗಳನ್ನು ಗೌರವಿಸೋಣ. ಪ್ರತಿಯೊಬ್ನರಿಗೂ ಕಾಯಕ ನಿಷ್ಠೆ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕೈಕಸುಬುಗಳನ್ನು ಕಲಿಸಿಕೊಟ್ಟರೆ ಮುಂದೆ ಸ್ವಾವಲಂಬನೆ ಜೀವನ ನಡೆಸುವರು. ಸತ್ಯವನ್ನು ಹೃದಯದೊಳಗೆ ಹಾಕಿಕೊಳ್ಳುವ ವಿಚಾರಗಳು ವಚನಗಳಲ್ಲಿವೆ ಎಂದರು.
ಎಸ್ ಆರ್ ಚಂದ್ರಶೇಖರಯ್ಯ ಮಾತನಾಡಿ ಶರಣರು ವಚನ ಸಾಹಿತ್ಯ ಸೃಷ್ಟಿಸದೇ ಹೋಗಿದ್ರೆ ನಾವು ಯಾವುದೋ ಕಾಡುಗಲ್ಲುಗಳಾಗಿರುತ್ತಿದ್ದೆವು. ಬಸವಣ್ಣ ಬ್ರಾಹ್ಮಣರಾಗಿ ಹುಟ್ಟಿದ್ದರು ಬ್ರಾಹ್ಮಣ್ಯವನ್ನು ತಿರಸ್ಕರಿಸಿ ಅಂಗೈಯಲ್ಲಿ ಇಷ್ಟಲಿಂಗವನ್ನು ಕೊಟ್ಟರು.
ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಾಗಿ ಶಿವಲಿಂಗಪ್ಪ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳಂಥವರು ಪಡೆದ ನಾವೇ ಧನ್ಯರು. ಆದ್ರೆ ಗ್ರಾಮ ಬದಲಾವಣೆ ಇನ್ನು ಆಗದೇ ಇರುವುದು ಇನ್ನು ನೋವಿನ ಸಂಗತಿ. ಸಾಣೇಹಳ್ಳಿ ಇಡೀ ದೇಶಕ್ಕೆ ಮಾದರಿ ಗ್ರಾಮವಾಗಬೇಕು. ಸಾಣೇಹಳ್ಳಿಯ ಗ್ರಾಮಸ್ಥರಲ್ಲಿ ಮೌಢ್ಯ, ಮಧ್ಯಪಾನ, ನೈರ್ಮಲ್ಯ ಎದ್ದು ಕಾಣುತ್ತಿದೆ. ಅದು ದೂರವಾಗಬೇಕಾದ್ರೆ ಸಾಣೇಹಳ್ಳಿಯ ಗ್ರಾಮಸ್ಥರಿಗೆ ಜಾಗೃತಿ ಮೂಡಬೇಕಾಗಿದೆ.
ಇದನ್ನೂ ಓದಿ: ಸ್ವಾಭಿಮಾನದ ಬದುಕು ಕೊಟ್ಟ ಮಹಾನ್ ಚೇತನ ಅಂಬೇಡ್ಕರ್ | ವಿನಾಯಕ ತೊಡರನಾಳು
ಶಕುಂತಳ ಮಾತನಾಡಿ, ನಾನು ಹುಟ್ಟಿದ ಊರಿನಲ್ಲಿ ವಚನ, ಶರಣರು ಎನ್ನುವ ಪರಿಚಯ ಇರಲಿಲ್ಲ. ಆದರೆ ಸಾಣೇಹಳ್ಳಿಯ ಗಂಡನ ಮನೆಗೆ ಬಂದಾಗ ಶರಣರ, ವಚನಗಳ ಬಗ್ಗೆ ತಿಳಿದುಕೊಳ್ಳಲಿಕ್ಕೆ ಅವಕಾಶವನ್ನು ಪಂಡಿತಾರಾಧ್ಯ ಶ್ರೀಗಳು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಶಿವಸಂಚಾರದ ನಾಗರಾಜ್ ಹೆಚ್ ಎಸ್, ಶರಣ್ ಹಾಗೂ ಅಕ್ಕನಬಳಗದವರು ವಚನ ಗೀತೆಗಳನ್ನು ಹಾಡಿದರು. ಎಸ್ ಬಿ ವೀರಭದ್ರಪ್ಪನವರು ಸ್ವಾಗತಿಸಿ ನಿರೂಪಿಸಿದರು.
ಎಸ್ ಎಸ್ ಪ್ರಕಾಶ್ ವಂದನಾರ್ಪಣೆ ಮಾಡಿದರು. ಮುಂದಿನ ತಿಂಗಳು ಒಂದರಂದು ಸಾಣೇಹಳ್ಳಿ ಕಲ್ಲಮನ ಮನೆಯಂಗಳದಲ್ಲಿ ನಡೆಯುವುದು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

