
ಚಿತ್ರದುರ್ಗ ನ್ಯೂಸ್.ಕಾಂ:

ಭಾರತಕ್ಕೆ ವಿಜಯಮಾಲೆ
ಭಾರತ ವಿಶ್ವ ಗುರುವಾಗುತ್ತಿದ್ದು, ಕ್ರಿಕೆಟ್‌ನಲ್ಲೂ ಕೂಡ ಬೇರೆ ದೇಶಗಳು ಭಾರತದತ್ತ ಮುಖ ಮಾಡುತ್ತಿವೆ. ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡೆದು ಭಾರತ ವಿಜಯಮಾಲೆ ಹಾಕಿಕೊಳ್ಳಲಿದೆ. ಈ ಸಲ ಕಪ್ ನೂರಕ್ಕೆ ನೂರರಷ್ಟು ನಮ್ಮದೇ.

| ಸಿ.ರುದ್ರಸ್ವಾಮಿ ಮೇದೇಹಳ್ಳಿ
****

ಸೋಲಿಲ್ಲದ ಸರದಾರ
ವಿಶ್ವಕಪ್ ಪ್ರಾರಂಭದಿಂದ ಈವರೆಗೂ ಭಾರತ ತಂಡ ಗೆಲವು ಸಾಧಿಸಿ ಫೈನಲ್‌ಗೆ ಸಜ್ಜಾಗಿದೆ. ಕೊನೆ ಪಂದ್ಯದಲ್ಲಿ ಗೆಲವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರನಾಗಿ ತಂಡ ಹೊರ ಹೊಮ್ಮಲಿದೆ. ಗೆದ್ದು ಬಾ ಭಾರತ
| ಸುದರ್ಶನ್ ನಾಯ್ಕ್ ಚಿತ್ರದುರ್ಗ
****

ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಾಣ
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವಕಪ್ ನಲ್ಲಿ ಹತ್ತು ಪಂದ್ಯಗಳನ್ನು ಗೆದ್ದ ತಂಡ ಭಾರತ ವಿಶ್ವಕಪ್ ಎತ್ತಿ ಹಿಡಿದು ಮೈಲುಗಲ್ಲು ಸೃಷ್ಟಿಸಲಿದೆ.ಗೆದ್ದು ಬಾ..ಇಂಡಿಯಾ..
| ನಾಗೇಶ್ ಚೌಳೂರು
****

ನನ್ನ ಭಾರತಕ್ಕೆ ನನ್ನ ಬೆಂಬಲ
ಟೀಂ ಇಂಡಿಯಾ ಮೇಲೆ ಇಡೀ ವಿಶ್ವದ ಕಣ್ಣಿದೆ. ಈ ಸಲ ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ. ಭಾರತ ತಂಡ ಬಲಿಷ್ಠವಾಗಿದೆ. ಎಲ್ಲರೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಸಲ ಎಲ್ಲವೂ ಚೆನ್ನಾಗಿದೆ ಭಾರತ್ ಕಪ್ ತರುತ್ತೆ.
ಆರ್.ಕನಕರಾಜ್ ಕೋಡಿಹಳ್ಳಿ
****

ಸುವರ್ಣಾಕ್ಷರದ ದಿನ
ಈ ದಿನ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಒಂದು ಪಂದ್ಯದಲ್ಲೂ ಸೋಲನ್ನು ಕಾಣದೇ ವಿಶ್ವಕಪ್‌ಗೆ ಭಾರತ ತಂಡ ಮುತ್ತಿಡಲಿದೆ.
| ರವಿ ಚಿತ್ರದುರ್ಗ
*****


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
