
ಚಿತ್ರದುರ್ಗ: ಕಳೆದ 17 ವರ್ಷಗಳಿಂದ ಶೂನ್ಯ ಎನ್‍ಪಿಎ ಇರುವಂತೆ ನೋಡಿಕೊಳ್ಳುವ ಮೂಲಕ ಚಿತ್ರದುರ್ಗದ ದಿ ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕ್ (THE MERCHANTS BANK) ಸಾಧನೆ ಮಾಡಿದೆ. ಇದು ಬ್ಯಾಂಕಿಂಗ್ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲು ಎಂದು ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷರಾದ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ ಹೇಳಿದರು.
ಚಳ್ಳಕೆರೆ ರಸ್ತೆಯಲ್ಲಿರುವ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಮರ್ಚೆಂಟ್ ಬ್ಯಾಂಕಿನ 2023-24ನೇ ಸಾಲಿನ 73ನೇ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದನ್ನೂ ಓದಿ: ಐತಿಹಾಸಿಕ ಕೋಟೆಗೆ ಧ್ವನಿ ಬೆಳಕಿನ ವೈಭವ | ಜಿಲ್ಲಾಧಿಕಾರಿ ಟಿ.ವೆಂಕಟೇಶ್
ನಮ್ಮ ಬ್ಯಾಂಕಿನ ಶಾಖೆಗಳನ್ನು ಜಿಲ್ಲೆಯಿಂದ ಹೊರಗಡೆಯೂ ತೆರೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗದ ಮೂರು ಶಾಖೆಗಳಲ್ಲಿ ಎಟಿಎಂ ಯಂತ್ರವನ್ನು ಗ್ರಾಹಕರ ಅನುಕೂಲಕ್ಕಾಗಿ ಅಳವಡಿಸಲಾಗುವುದು ಎಂದರು.
ಶೂನ್ಯ ಎನ್‍ಪಿಎ ಸೇರಿದಂತೆ ಅನೇಕ ವಿಚಾರಗಳಲ್ಲಿ ನಮ್ಮ ಬ್ಯಾಂಕ್ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಗ್ರ ಶ್ರೇಣಿಯಲ್ಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಭ್ರೂಣಲಿಂಗ ಪತ್ತೆ ಮಾಹಿತಿದಾರರಿಗೆ ₹ 1 ಲಕ್ಷ ಬಹುಮಾನ | ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಬರಲಿರುವ ಅಮೃತ ಮಹೋತ್ಸವಕ್ಕಾಗಿ 50 ಲಕ್ಷ ರೂ.ಗಳನ್ನು ತೆಗೆದಿಡಲು ನಿರ್ಧಾರಿಸಲಾಯಿತು. ಈಗಾಗಲೇ ಕಳೆದ ವರ್ಷ 30 ಲಕ್ಷ ರೂ.ಗಳನ್ನು ತೆಗದಿರಿಸಲಾಗಿದೆ ಎಂದು ತಿಳಿಸಿದರು.
ಸದಸ್ಯರು ನಮ್ಮ ಬ್ಯಾಂಕ್‍ನಲ್ಲೇ ಠೇವಣಿ ಇಡಬೇಕಿದೆ. ಬೇರೆ ಬ್ಯಾಂಕಿನಲ್ಲಿ ಠೇವಣಿ ಮಾಡದೇ ಮರ್ಚೆಂಟ್ ಬ್ಯಾಂಕಿನಲ್ಲಿ ಠೇವಣಿ ಮಾಡಿದರೆ ಲಾಭ ನೀಡಲಾಗುವುದು ಎಂದರು.
ಇದನ್ನೂ ಓದಿ: ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ | 31 ರವರೆಗೆ ಅವಧಿ ವಿಸ್ತರಣೆ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮರ್ಚೆಂಟ್ ಬ್ಯಾಂಕ್ 310 ಕೋಟಿ ರೂ. ವಹಿವಾಟು ನಡೆಸಿದೆ. ಸಾಲ ವಸೂಲಾತಿಯಲ್ಲೂ ಉತ್ತಮ ಸ್ಥಿತಿಯಲ್ಲಿದ್ದೇವೆ. ಎನ್.ಪಿ.ಎ. ಶೇ. 0.75 ರಷ್ಟಿದ್ದು, ನಿವ್ವಳ ಎನ್.ಪಿ.ಎ. ಶೂನ್ಯ ಪ್ರಮಾಣದಲ್ಲಿದೆ. ಬ್ಯಾಂಕಿನ ವರಮಾನದಲ್ಲೂ ಉತ್ತಮ ಸ್ಥಿತಿಯಲ್ಲಿದೆ ಎಂದರು.
ಸರ್ವ ಸದಸ್ಯರ ಸಭೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷರಾದ ಎಲ್.ಈ.ಶ್ರೀನಿವಾಸ್ ಬಾಬು, ನಿರ್ದೇಶಕರಾದ ಎನ್.ಜಯ್ಯಣ್ಣ, ಪಿ.ಎಲ್.ಸುರೇಶ್ ಬಾಬು, ರಘುರಾಮ ರೆಡ್ಡಿ, ಜಿ.ರಾಜಾನಾಯ್ಕ್, ಎಸ್.ಮಂಜುನಾಥ್, ಟಿ.ಎಚ್.ರಾಜಣ್ಣ, ಜೆ.ವಿ.ಮುಕುಂದರಾವ್, ಜೆ.ಸುರೇಶ್, ಡಿ.ಪ್ರಕಾಶ್, ಎಸ್.ಇಂದ್ರಮ್ಮ, ಸಿ.ಸುಜಾತ, ವೃತ್ತಿಪರ ನಿರ್ದೇಶಕರಾದ ಎಂ.ವಿ.ರಾಜೀವ್, ಕೆ.ಸುಹಾಸ್ ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರಾದ ಕೆ.ಸಿದ್ದಯ್ಯ, ವಿ.ಸೋಮಶೇಖರ್, ರಮ್ಯ ಮಂಜುನಾಥ್ ಭಾಗವಹಿಸಿದ್ದರು. ಸೂರ್ಯ ರಾಜೇಶ್ವರಿ ಪ್ರಾರ್ಥಿಸಿದರು. ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ಮಲ್ಲಿಕಾರ್ಜನ್ ನಿರ್ವಹಣೆ ಮಾಡಿದರು.
ಮರ್ಚೆಂಟ್ ಬ್ಯಾಂಕ್ ಸದಸ್ಯರ ಸಂಖ್ಯೆ 5777:
2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬ್ಯಾಂಕು 6.38 ಕೋಟಿ ಲಾಭ ಗಳಿಸಿದೆ. ಮರ್ಚೆಂಟ್ ಬ್ಯಾಂಕ್ ಈವರೆಗೆ 5777 ಸದಸ್ಯರನ್ನು ಹೊಂದಿದ್ದು, 1.47 ಕೋಟಿ ಷೇರು ಬಂಡವಾಳ ಹೊಂದಿದೆ. ಈ ಸಾಲಿನಲ್ಲಿ 78 ಜನ ಹೂಸ ಸದಸ್ಯತ್ವ ಪಡೆದಿದ್ದಾರೆ. 91 ಸದಸ್ಯರು ತಮ್ಮ ಸದಸ್ಯತ್ವವನ್ನು ಸಮಾಪನಗೊಳಿಸಿದ್ದಾರೆ ಎಂದು ವಿವರಗಳನ್ನು ನೀಡಿದರು.
ಇದನ್ನೂ ಓದಿ: ಪಿಸಿಪಿಎನ್‌ಡಿಟಿ ಸಲಹಾ ಸಮಿತಿ ಪುನರ್ ರಚನೆ | ಅಧ್ಯಕ್ಷರಾಗಿ ಡಾ.ಸೌಮ್ಯ ಆಯ್ಕೆ
2023 ಮಾರ್ಚ್ 31ರ ಅಂತ್ಯಕ್ಕೆ ಮೀಸಲು ನಿಧಿ ಹಾಗೂ ಇತರೆ ನಿಧಿಗಳ ಬಾಬ್ತು 38.09 ಕೋಟಿಗಳಿದ್ದು, 2023-24ನೇ ಸಾಲಿನಲ್ಲಿ ನಿವ್ವಳ ಲಾಭದ ವಿಲೇವಾರಿ ನಂತರ ನಿದಿಗಳ ಬಾಬ್ತು 42.14 ಕೋಟಿಗಳಾಗುತ್ತದೆ. 2023ರ ಅಂತ್ಯಕ್ಕೆ ಬ್ಯಾಂಕಿನ ಸ್ವಂತ ಬಂಡವಾಳವು 39.56 ಕೋಟಿಗಳಿದ್ದು, 2024ನೇ ಸಾಲಿನ ಲಾಭದ ವಿಲೇವಾರಿ ನಂತರ ಸ್ವಂತ ಬಂಡವಾಳವು 43.61 ಕೋಟಿಗಳಾಗಿವೆ.
ಕಳೆದ ಸಾಲಿನಲ್ಲಿ ಬ್ಯಾಂಕಿನ ಒಟ್ಟು ಠೇವಣಿಯೂ 164.75 ಕೋಟಿಗಳಿದ್ದು, 2024ಕ್ಕೆ 188.59 ಕೋಟಿಗಳಾಗಿದೆ. ವರ್ಷದಿಂದ ವರ್ಷಕ್ಕೆ ಬ್ಯಾಂಕ್‍ನ ಠೇವಣಿಗಳ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಸಾಲಿಗಿಂತ 23.84 ಕೋಟಿ ಹೆಚ್ಚುವರಿಯಾಗಿ ಸಂಗ್ರಹವಾಗಿದೆ ಎಂದು ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ಇದನ್ನೂ ಓದಿ: Dengue; ಆತಂಕ ಸೃಷ್ಟಿಸಿದ ಡೆಂಗ್ಯೂ | ಕೋವಿಡ್ ಮಾದರಿಯಲ್ಲಿ ನಿಯಂತ್ರಣಕ್ಕೆ ಸಜ್ಜು
ಇದೇ ವೇಳೆ ಕರ್ನಾಟಕದ ಸರ್ಕಾರದ ಆದಿ ಜಾಂಬವ ಅಭಿವೃದ್ದಿ ನಿಗಮ ಅಧ್ಯಕ್ಷರಾಗಿ ನೇಮಕವಾಗಿರುವ ಜಿ.ಎಸ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಬ್ಯಾಂಕಿನ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

