
CHITRADURGA NEWS | 01 MAY 2026
ಚಿತ್ರದುರ್ಗ: ರೈತರ ಬದುಕು ಹಸನಾದರೆ ನಾಡಿನ ಸಮಗ್ರ ಅಭಿವೃದ್ಧಿಯಾದಂತೆ. ಹಾಗಾಗಿ ರೈತರಿಗೆ ದೊರೆಯಬೇಕಾದ ಸರ್ಕಾರದ ಸೌಲಭ್ಯಗಳು ನೇರವಾಗಿ ರೈತರಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಶಾಸಕ ಕೆ.ಸಿ ವೀರೇಂದ್ರ (ಪಪ್ಪಿ) ತಿಳಿಸಿದರು.
ಇದನ್ನೂ ಓದಿ: ದುರ್ಗೋತ್ಸವ ಆಚರಿಸಲು ಒತ್ತಾಯಿಸಿ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಕೆ
ತಾಲ್ಲೂಕಿನ ಪಂಡರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಯರೇ ಓಣಿ ಸಿ.ಸಿ. ರಸ್ತೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ನಡೆಯುತ್ತಿವೆ. ರೈತರಿಗೆ ಅನುಕೂಲವಾಗುವಂತಹ ಚೆಕ್ ಡ್ಯಾಂ ಮತ್ತು ಸರ್ಕಾರಿ ಹಳ್ಳಗಳಿಗೆ ಕಟ್ಟೆಗಳನ್ನು ಕಟ್ಟುವಂತ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ನೆರವೇರಿಸಲಾಗುವುದು.
ಚಿತ್ರದುರ್ಗ ಕ್ಷೇತ್ರದಲ್ಲಿ ಯಥೇಚ್ಛವಾಗಿ ರೈತರು ಅಡಿಕೆ ಬೆಳೆಗಳಿಗೆ ಅವಲಂಬಿತರಾಗಿದ್ದಾರೆ ಹಾಗಾಗಿ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮೇ.22ರಂದು ಚಿತ್ರದುರ್ಗದಲ್ಲಿ 77 ಪಾಳೇಗಾರರ ನೆನಪಿನೊತ್ಸವ ಮತ್ತು ಪ್ರತಿಭಾ ಪುರಸ್ಕಾರ
ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಬಂಡಿ ರಸ್ತೆಗಳು ತಗ್ಗು-ಗುಂಡಿಗಳಿಂದ ಕೂಡಿದ್ದು, ರೈತರು ತಮ್ಮ ಬೆಳೆಗಳನ್ನು ಹೊತ್ತೊಯ್ಯಲು ತುಂಬಾ ಸಂಕಷ್ಟ ಅನುಭವಿಸುತ್ತಿದ್ದರು. ಮಳೆಗಾಲದ ಸಮಯದಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರವಾಗಿ ಪರಿಣಮಿಸುತ್ತಿದ್ದು, ದಾರಿಯಲ್ಲೇ ಬೆಳೆ ಹಾನಿಯಾಗುವಂತಹ ಪರಿಸ್ಥಿತಿ ಎದುರಾಗುತ್ತಿತ್ತು. ಇದರಿಂದ ರೈತರ ಪರಿಶ್ರಮಕ್ಕೂ ಸರಿಯಾದ ಮೌಲ್ಯ ಸಿಗದೇ ತೊಂದರೆ ಅನುಭವಿಸುತ್ತಿದ್ದರು.
ಜೊತೆಗೆ ರೈತರು ಎತ್ತಿನ ಬಂಡಿ, ಟ್ರಾಕ್ಟರ್‌ಗಳ ಮೂಲಕ ಬೆಳೆ ಸಾಗಾಟ ಮಾಡುವಾಗ ದಾರಿಯ ಅಸಮರ್ಪಕತೆಯಿಂದಾಗಿ ಅನೇಕ ಬಾರಿ ಬೆಳೆ ದಾರಿಯಲ್ಲೇ ಬಿದ್ದು ಹಾಳಾಗುತ್ತಿತ್ತು. ಇದರಿಂದ ಉತ್ಪಾದನೆಯಷ್ಟೇ ಅಲ್ಲ, ರೈತರ ಆರ್ಥಿಕ ಸ್ಥಿತಿಗೂ ಹೊಡೆತ ಬೀಳುತ್ತಿತ್ತು.
ಈ ಸಮಸ್ಯೆಗಳನ್ನು ಮನಗಂಡು ಸರ್ಕಾರ ಕೆ.ಆರ್.ಐ.ಡಿ.ಎಲ್ ಯೋಜನೆಯಡಿ ವಿಶೇಷ ಅನುದಾನ ಒದಗಿಸಿ ಬಂಡಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ತಿಳಿಸಿದರು.
ಇದನ್ನೂ ಓದಿ:
ಕೆಆರ್ಐಡಿಎಲ್ ವಿಭಾಗದ ಸಹಾಯಕ ಇಂಜಿನಿಯರ್ ಶರತ್, ಹಾಗೂ ಗ್ರಾಮಸ್ಥರಾದ ಸೊಸೈಟಿ ಮಂಜಣ್ಣ, ರವಿಕುಮಾರ್, ಬಸವರಾಜ್, ಮೌನೇಶ್, ವೆಂಕಟೇಶ್, ಸುನಿಲ್, ಈರಪ್ಪ, ಶ್ರೀನಿವಾಸ್, ರಾಜಪ್ಪ, ರಾಮಣ್ಣ, ತಿಪ್ಪೇಸ್ವಾಮಿ, ಶಿವಪ್ಪ, ಈಶಪ್ಪ, ನಾಗರಾಜ್, ತಿಪ್ಪೇಸ್ವಾಮಿ, ತಿಮ್ಮೇಶ್, ಲೋಕೇಶ್ ಇತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
