
CHITRADURGA NEWS | 22 JANUARY 2026
ಚಿತ್ರದುರ್ಗ: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ರಫ್ತು ನಿಗಮ ಮತ್ತು ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಮಂತ್ರಾಲಯ ಅವರ ಸಹಯೋಗದಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ ಅಡಿ (PMFME) ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂನಲ್ಲಿ ಇದೇ ಜ.23 ರಿಂದ 25 ರವರೆಗೆ ಮೂರು ದಿನಗಳ ತರಬೇತಿ ಆಯೋಜಿಸಲಾಗಿದೆ.
ಇದನ್ನೂ ಓದಿ: ಜಿಲ್ಲಾ, ತಾಲೂಕು ಪಂಚಾಯಿತಿಯಲ್ಲಿ ನಮ್ಮ ಕಾರ್ಯಕರ್ತರು ಗೆಲ್ಲಬೇಕು | ಕೆ.ಎಸ್.ನವೀನ್

ಈ ತರಬೇತಿಗೆ (PMFME) ಯೋಜನೆ ಅಡಿ ಸಾಲ ಮಂಜೂರಾತಿ ಆಗಿರುವವರು, ಅರ್ಜಿ ಸಲ್ಲಿಕೆಯಾಗಿ ಬ್ಯಾಂಕಿನಲ್ಲಿ ಪರಿಶೀಲನೆಯಲ್ಲಿರುವವರು ಮತ್ತು ಅರ್ಜಿ ತಿರಸ್ಕøತವಾಗಿರುವ ಚಿತ್ರದುರ್ಗ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ.
ಈ ತರಬೇತಿಕಾರ್ಯಕ್ರಮದಲ್ಲಿ DST-iTBI-GSSSTBIF, ಮೈಸೂರು ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, 2021 ನೇಸಾಲಿನ INSA ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕøತ, PMFME ಯೋಜನೆಯ ಮಾಜಿ ತರಬೇತಿ ಸಂಯೋಜಕ ಹಾಗೂ CSIR-CFTRI, ಮೈಸೂರು ಸಂಸ್ಥೆಯ ಮಾಜಿ ಸಂಶೋಧಕರಾದ ಡಾ. ಹೃಷಿಕೇಶ್ ಎ ತವನಂದಿ ಅವರು PMFME ಯೋಜನೆಯ ಉದ್ದೇಶ, ವಿವಿಧ ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆ, ಯಶಸ್ವಿ ಉದ್ದಿಮೆಯಾಗಲು ಇರುವ ಗುಣಲಕ್ಷಣಗಳು, ಹೊಸದಾಗಿ ಉದ್ದಿಮೆಯನ್ನು ಪ್ರಾರಂಭಿಸಲು ಹಾಗೂ ಇರುವ ಉದ್ದಿಮೆಯನ್ನು ನಿರ್ವಹಿಸಲು ಬೇಕಾದ ಸಾಮಥ್ರ್ಯ ಅಭಿವೃದ್ಧಿ ತರಬೇತಿ, ಉದ್ದಿಮೆಯಲ್ಲಿ ಬರಬಹುದಾದ ತೊಡಕುಗಳು ಹಾಗೂ ಅವುಗಳ ನಿರ್ವಹಣೆ, ಬ್ಯಾಂಕಿನ ವ್ಯವಸ್ಥೆ ಹಾಗೂ ಉದ್ಯಮೆ ಪ್ರಾರಂಭಿಸಲು ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳು, ಅರ್ಹತೆ ಮರುಪಾವತಿ ವಿಧಾನ, ಹಣಕಾಸಿನ ನಿರ್ವಹಣೆ ಹಾಗೂ ಇತರೆ ಬ್ಯಾಂಕಿನ ಸೌಲಭ್ಯಗಳು, ಮಾರುಕಟ್ಟೆ ಮತ್ತು ಬ್ರಾಂಡಿಂಗ್, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಮಾನದಂಡಗಳು, ವ್ಯವಹಾರ ನೋಂದಣಿ ಮತ್ತು ಇತರೆ ಕಾನೂನು ಅನುಸರಣೆಗಳು, ಯಶಸ್ವಿಯಾಗಿ ಉದ್ದಿಮೆ ನಡೆಸಲು ಬೇಕಾದ ಹಣಕಾಸು ಹಾಗೂ ವಿವಿಧ ದಾಖಲಾತಿಗಳ ನಿರ್ವಹಣೆ ಕುರಿತು ಉಪನ್ಯಾಸ ನೀಡುವರು.
ಆದ ಪ್ರಯುಕ್ತ ಈ ತರಬೇತಿಯಲ್ಲಿ ಅರ್ಹ ಪಿಎಂಎಫ್‍ಎಂಇ ಯೋಜನೆಯ ಫಲಾನುಭವಿಗಳು ಭಾಗವಹಿಸಲು ತಮ್ಮ ಆಧಾರ್ ಕಾರ್ಡ್ ಮತ್ತು ತಮ್ಮ ಅರ್ಜಿ ಸಂಖ್ಯೆಯೊಂದಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ರಜನಿಕಾಂತ ಆರ್ ಇವರ ದೂರವಾಣಿ ಸಂಖ್ಯೆ 8277931058 ಕರೆ ಮಾಡಿ ಇದೇ ಜ.22ರ ಸಂಜೆಯೊಳಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 21 ಜನವರಿ | ರಾಜ್ಯದ ಅಡಿಕೆ ಮಾರುಕಟ್ಟೆ ವಿವರ
ಮೊದಲು ನೊಂದಾವಣಿ ಮಾಡಿಕೊಂಡ 60 ಜನ ಅರ್ಹ ಪಿಎಂಎಫ್‍ಎಂಇ ಯೋಜನೆಯ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ತರಬೇತಿಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
