
CHITRADURGA NEWS | 30 JUNE 2024
ಚಿತ್ರದುರ್ಗ: ವ್ಯಕ್ತಿಯನ್ನು ಆತನ ವ್ಯಕಿತ್ವದಿಂದ ಗುರುತಿಸಬೇಕೇ ವಿನಹಃ ಜಾತಿ, ಹಣದಿಂದ ಅಲ್ಲ ಎಂದು ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಕರ್ನಾಟಕದ ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ ಇದ್ದಂತೆ..

ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಚಿತ್ರದುರ್ಗ ತಾಲ್ಲೂಕು ಅಖಿಲ ಭಾರತ ಗಾಣಗರ ಸಂಘದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಾಣಿಗ ಸಮುದಾಯದ ವಧು-ವರರ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು.
ಇಂದು ಕೂಡು ಕುಟುಂಬಗಳ ಮರೆಯಾಗುತ್ತಿವೆ. ನಾನು ನಮ್ಮವರು ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡಿದೆ, ಇದರಿಂದ ನಮ್ಮಲ್ಲಿನ ಸಂಬಂಧಗಳು ಹಾಳಾಗುತ್ತಿವೆ.
ಹಿಂದೆ ಉತ್ತಮ ಶಿಕ್ಷಣ, ಸಂಸ್ಕಾರ ದೊರೆಯುತ್ತಿತ್ತು. ಗುರುಕುಲ ಪದ್ಧತಿ ಇತ್ತು. ಮಾನವೀಯತೆ ಕಲಿಯುತ್ತಿದ್ದರು. ಆದರೆ, ಇಂದು ನಮ್ಮ ಶಿಕ್ಷಣ ವ್ಯವಸ್ಥೆ ಹಣ ಗಳಿಸುವುದನ್ನು ಮಾತ್ರ ಹೇಳಿಕೊಡುತ್ತಿದೆ. ನಾವು ಕಲಿಯುವ ವಿದ್ಯೆ ನಮಗೆ ಗೌರವವನ್ನು ತರುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ ಎಸ್ಟಿ ಸೆಲ್ ಅಧ್ಯಕ್ಷರಾಗಿ ಬಿ.ಮಂಜುನಾಥ್ ನೇಮಕ
ಯಾವುದೇ ನಾಯಕರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರ ನೀಡಿದ ತತ್ವಾದರ್ಶಗಳು ಇಡೀ ಮಾನವ ಕುಲಕ್ಕೆ ಮಾರ್ಗದರ್ಶನವಾಗಬೇಕು. ಮಹಾತ್ಮರನ್ನು ಅವರ ಜಾತಿಯಿಂದ ಗುರುತಿಸದೇ ಅವರ ವ್ಯಕಿತ್ವದಿಂದ ಗುರುತಿಸುವ ಕಾರ್ಯವಾಗಬೇಕಿದೆ.
ಮಕ್ಕಳಲ್ಲಿ ಸಂಸ್ಕಾರವನ್ನು ಬೆಳಸಿ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ, ಸಮಾಜವನ್ನು ಸಂಘಟನೆ ಮಾಡಿ ಬಡವರಿಗೆ ಸಹಾಯ ಮಾಡಿ. ಸಂಘಟನೆ ಮಾಡುವಾಗ ಮಾತುಗಳು ಬರುತ್ತವೆ ಅವುಗಳನ್ನು ಬದಿಗೆ ತಳ್ಳುವ ಮೂಲಕ ಸಂಘಟನೆಯ ಕಡೆಗೆ ಗಮನ ಹರಿಸುವಂತೆ ಕರೆ ನೀಡಿದರು.
ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಮಾತನಾಡಿ, ನಮ್ಮ ಸಮಾಜಕ್ಕೆ ವಧು-ವರರ ಸಮಾವೇಶ ಮಾಡುವುದು ಅಗತ್ಯವಾಗಿದೆ. ಇದರೊಂದಿಗೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಪಡೆದವರನ್ನು ಗುರುತಿಸುವ ಮೂಲಕ ಮುಂದೆ ಕಲಿಯುವ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತಿದೆ ಎಂದರು.
ಇದನ್ನೂ ಓದಿ: ಶೀಘ್ರದಲ್ಲೇ ಕೇಂದ್ರೀಯ ವಿದ್ಯಾಲಯ | ಗೋವಿಂದ ಕಾರಜೋಳ
ನಮ್ಮ ಸಮಾಜ ಕಾಯಕ ಸಮಾಜವಾಗಿದೆ. ನೀವು ಬೆಳೆಯವುದರ ಮೂಲಕ ಸಮಾಜವನ್ನು ಸಹಾ ಬೆಳಸುವ ಕಾರ್ಯವನ್ನು ಮಾಡಿ, ನಿಮ್ಮ ವೃತ್ತಿಯನ್ನು ಆರಾಧನೆ ಮಾಡಿ, ಇಂದಿನ ದಿನದಲ್ಲಿ ವೃತ್ತಿಗಳು ಜಾತಿಗಳಾಗಿ ಮಾರ್ಪಾಟಿವೆ ಎಂದರು.
ಜಿಲ್ಲಾ ಗಾಣಗರ ಸಂಘದ ಅಧ್ಯಕ್ಷ ಡಿ.ಎಸ್. ಸುರೇಶ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಗಾಣಗರ ಸಂಘದ ಅಧ್ಯಕ್ಷ ಎ.ಆರ್.ತಿಪ್ಪೇಸ್ವಾಮಿ, ವೀರಶೈವ ಸಮಾಜದ ಉಪಾಧ್ಯಕ್ಷರು ಕೆ.ಸಿ.ನಾಗರಾಜ್, ಮಹಿಳಾ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷೆ ಕೆ.ಸಿ.ವೀಣಾ, ಅಧ್ಯಕ್ಷೆ ಪುಷ್ಪ, ದಾವಣಗೆರೆ ಗಾಣರಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
