
CHITRADURGA NEWS | 15 DECEMBER 2025
ಚಿತ್ರದುರ್ಗ: ನಗರದ ಮೆದೇಹಳ್ಳಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 26ನೇ ವರ್ಷದ ಬ್ರಹ್ಮೋತ್ಸವ ಪೂಜಾ ಕಾರ್ಯಕ್ರಮವು ಡಿಸೆಂಬರ್ 16 ರಿಂದ 21 ರವರೆಗೆ ನಡೆಯಲಿದೆ.
ಇದನ್ನೂ ಓದಿ: ಕಣಿವೆ ಶ್ರೀ ಆಂಜನೇಯಸ್ವಾಮಿ ಕಾರ್ತಿಕ ಮಹೋತ್ಸವ
ಇದರ ನೇತೃತ್ವವನ್ನು ಕೇರಳದ ಪ್ರಧಾನ ಅರ್ಚಕರಾದ ಶ್ರೀ ವಿಷ್ಣು ಭಟ್ಟಾದ್ರಿ ಪಾಡ್ ತಂತ್ರಿಗಳು, ತಿಚೂರು ಹಾಗೂ ಸತೀಶ್ ಶರ್ಮಾ ಮತ್ತು ಸಂಗಡಿಗರಿಂದ ದೇವಸ್ಥಾನದಲ್ಲಿ ಧ್ವಜಾರೋಹಣ ಮಾಡುವ ಮುಖಾಂತರ ಪೂಜಾ ಕಾರ್ಯಕ್ರಮವು ಪ್ರಾರಂಭವಾಗುವುದು.
ಬೆಳಗ್ಗೆ ಮಹಾ ಗಣಪತಿ ಹೋಮ, ಸುದರ್ಶನ ಹೋಮ, ಅಭಿಷೇಕ, ನವಕಂಪ, ಕಳಸಾ ಪೂಜೆ, ಉಚ್ಚ ಪೂಜೆ, ಹಾಗೂ ಸಂಜೆ ಸಮಯದಲ್ಲಿ ಅಂಕುರ ಪೂಜೆ, ಮಳಪೂಜೆ, ದೀಪಾರಾಧನೆ, ಶ್ರೀ ಭೂತಬಲಿ, ಭಗವತಿ ಸೇವಾ, ಅತ್ತಲಾ ಪೂಜೆ, ಗಣ ಹೋಮ, ಚತು ಶುದ್ದಿ, ಧಾರಾ, ಪಂಚಕ, ಪಂಚಗವ್ಯ ಇನ್ನಿತರೆ ದೇವರಿಗೆ ಅಭಿಷೇಕ ಹಾಗೂ ಇನ್ನಿತರೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗುವುದು.
ಪೂಜಾ ಕಾರ್ಯಕ್ರಮದಲ್ಲಿ ಡಿ.20 ಶನಿವಾರ ಸಂಜೆ 7.30 ರಿಂದ ಪಡಿ ಪೂಜಾ ಕಾರ್ಯಕ್ರಮ ನೆರವೇರಲಾಗುವುದು. ಡಿ.28 ಭಾನುವಾರ ಮದ್ಯಾಹ್ನ ಮಹಾ ಅನ್ನದಾನ ಕಾರ್ಯಕ್ರಮ ನೆರವೇರಿಸಲಾಗುವುದು.
ಇದನ್ನೂ ಓದಿ: ಆಯೋಗ ರಚನೆಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಧರಣಿ
ಕಾರ್ಯಕ್ರಮ ಸಾರ್ವಜನಿಕವಾಗಿದ್ದು ಸಕಲ ಭಕ್ತಾದಿಗಳು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕರ್ನಾಟಕ ಅಯ್ಯಪ್ಪ ಸ್ವಾಮಿ ಅನ್ನದಾನ ಸಮಿತಿಯ ಅಧ್ಯಕ್ಷ ಶರಣ್ ಕುಮಾರ್ ಹಾಗೂ ದೇವಸ್ಥಾನದ ಕಾರ್ಯದರ್ಶಿ ಎಂ.ಪಿ.ವೆಂಕಟೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
