CHUTRADURGA NEWS | 27 MAY 2025
ಚಿತ್ರದುರ್ಗ: ಖ್ಯಾತ ಕಾದಂಬರಿಕಾರ, ಚಿತ್ರ ಸಾಹಿತಿ ಡಾ.ಬಿ.ಎಲ್.ವೇಣು ಅವರಿಗೆ 80 ಜನ್ಮ ದಿನಾಚರಣೆ ಅಂಗವಾಗಿ ಅವರ ನಿವಾಸದಲ್ಲಿ ಅಭಿಮಾನಿಗಳು, ಸಾಹಿತ್ಯಾಸಕ್ತರು ಸೇರಿ ಗೌರವಿಸಿ ಅಭಿನಂದನೆ ಸಲ್ಲಿಸಿದರು.
ALSO READ: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

ಈ ವೇಳೆ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದ ಡಾ.ಬಿ.ಎಲ್.ವೇಣು ಮಾತನಾಡಿ, ಇನ್ನೂ ಬರೆಯುವುದು ಬಹಳಷ್ಟು ಇದೆ. ಸಾಹಿತಿ ಲಕ್ಷ್ಮಣ ತೆಲಗಾವಿ ಅವರು ನಾಯಕರು, ಎಲ್ಲಾ ಪಾಳೇಗಾರರ ಬಗ್ಗೆಯೂ ಬರೆದು ಮುಗಿಸಿ ಎಂದಿದ್ದಾರೆ ಎಂದರು.
ಪಾಳೆಗಾರರ ಬಗ್ಗೆ ಈಗಾಗಲೇ ಸಾಲು ಸಾಲು ಕಾದಂಬರಿಗಳನ್ನು ಬರೆಯಲಾಗಿದೆ. ಆದರೆ, ದಲಿತ ಸಮಸ್ಯೆಗಳ ಬಗ್ಗೆ ಬರೆದಾಗ ಹೆಚ್ಚಿನ ಪ್ರಮಾಣದಲ್ಲಿ ಬಹುಮಾನಗಳು ಬಂದಿವೆ.
ಚಿತ್ರದುರ್ಗದಲ್ಲಿ ನಾನು ಹುಟ್ಟಿ ಬೆಳದಿದ್ದೆನೆ ಕೋಟೆಯಲ್ಲಿ ತಿರುಗಾಡಿದ್ದೇನೆ, ಚರಿತ್ರೆ ಗೊತ್ತಿರುವುದರಿಂದ ಈ ದಿಸೆಯಲ್ಲಿಯೂ ಸಹಾ ನಾನು ಕೆಲಸ ಮಾಡಿದ್ದೇನೆ. ಐತಿಹಾಸಿಕ ಕಾದಂಬರಿಗಳು ಸಹಾ ನನಗೆ ಹೆಚ್ಚಿನ ಮನ್ನಣೆಯನ್ನು ತಂದು ಕೊಟ್ಟಿವೆ. ಚಿತ್ರದುರ್ಗದ ಐತಿಹಾಸಿಕ ಕಾದಂಬರಿಗಳನ್ನು ಬರೆದಿರುವುದರಿಂದ ನಾನು ಜನಪ್ರಿಯತೆಯನ್ನು ಗಳಿಸಿದ್ದೇನೆ ಎಂದು ವೇಣು ತಿಳಿಸಿದರು.
ಅನಕ್ಷರಸ್ಥರನ್ನು ಸಹಾ ಮುಟ್ಟುವಂತಹ ಕ್ಷೇತ್ರವಾದ ಸಿನಿಮಾ ರಂಗದಲ್ಲಿಯೂ ಸಹಾ ನಾನು ಕೆಲಸವನ್ನು ಮಾಡಿದ್ದೇನೆ ಇದರಿಂದ ಹೆಚ್ಚಿನ ಪ್ರೀತಿ ಸಿಕ್ಕಿದೆ. ನನ್ನ ಆರೋಗ್ಯದ ಗುಟ್ಟು ಎಂದರೆ ಬರವಣಿಗೆ, ಈಗಲೂ ಸಹಾ ಏನಾದರೂ ಬರೆಯುತ್ತೇನೆ ಇಲ್ಲವೇ ಓದುತ್ತೇನೆ, ಇದೇ ನನಗೆ ಕೆಲಸವಾಗಿದೆ.
ALSO READ: ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕ ವಿರೋಧಿಸಿ ರೈತ ಸಂಘ ಪ್ರತಿಭಟನೆ
ಮುಂದೆಯೂ ಸಹಾ ಏನಾದರೂ ಬರೆಯುತ್ತೇನೆ, ನನ್ನ ಬರವಣಿಗೆಯ ಗುಟ್ಟೇ ಆರೋಗ್ಯವಾಗಿದೆ. ಎಲ್ಲಿಯವರೆಗೂ ಬರೆಯುತ್ತೇನೋ ಅಲ್ಲಿಯವರೆಗೂ ಬದುಕಿರುತ್ತೇನೆ ಎಂಬ ನಂಬಿಕೆ ಇದೆ. ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಇರಲಿ ಅದೇ ನನ್ನ ಆಯಸ್ಸುನ್ನು ವೃದ್ದಿ ಮಾಡುತ್ತದೆ ಎಂದು ವೇಣು ನುಡಿದರು.
ಬರವಣಿಗೆ ನನ್ನ ಜೀವಾಳ, ನಾನು ಬರೆಯುತ್ತಿದ್ದರೆ ಚೆನ್ನಾಗಿರುತ್ತೇನೆ, ಇಲ್ಲವಾದರೆ ಏರು ಪೇರಾಗುತ್ತದೆ. ನಾನು ಮಾಡಿರುವ ಸಾಧನೆ ಸಾಸಿವೆ ಕಾಳನಷ್ಟು ಮಾತ್ರ. ಆದರೆ, ನೀವೆಲ್ಲಾ ತೋರಿಸುತ್ತಿರುವ ಪ್ರೀತಿ ಬೆಟ್ಟದಷ್ಟು. ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನನ್ನಾಗಿ ಮಾಡಿದ್ದೀರಿ ಎಂದು ಸ್ಮರಿಸಿದರು.
ಸಾಕಷ್ಟು ಕಾರ್ಯಕ್ರಮಗಳ ಹಿಂದೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಅವರ ಬೆಂಬಲ ಇದೆ. ಚಿತ್ರದುರ್ಗದಲ್ಲಿ ನನ್ನ ಹೆಸರಿನಲ್ಲಿ ವೃತ್ತ ನಿರ್ಮಾಣ ಮಾಡುವ ಹಿಂದೆಯೂ ಕಾಂತರಾಜ್ ಕೊಡುಗೆ ಸಾಕಷ್ಟಿದೆ ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಬಿ.ಎಲ್.ವೇಣು ಬರೆದಿರುವ ಕಾದಂಬರಿಗಳಲ್ಲಿ ಉತ್ತಮವಾದ ಕಾದಂಬರಿಯನ್ನು ಆಯ್ಕೆ ಮಾಡಿ ಅದನ್ನು ಆಂಗ್ಲ ಬಾಷೆಗೆ ತರ್ಜಿಮೆ ಮಾಡುವುದರ ಮೂಲಕ ಇವರ ಜನಪ್ರಿಯತೆ ದೇಶದಾದ್ಯಂತ ಹರಡುವಂತೆ ಆಗಬೇಕಿದೆ ಇದಕ್ಕೆ ಎಲ್ಲರು ಸಹಾ ಸಹಕಾರವನ್ನು ನೀಡಲಿದ್ದಾರೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜು ಮಾತನಾಡಿ, ಬಿ.ಎಲ್.ವೇಣು ಅವರು ನಮ್ಮ ದುರ್ಗದ ಅಸ್ತಿ, ಇವರು ನಮ್ಮ ದುರ್ಗದಲ್ಲಿ ಇರುವುದು ನಮ್ಮೆಲ್ಲರ ಪುಣ್ಯವಾಗಿದೆ. ಭಗವಂತ ಇವರಿಗೆ ಆರೋಗ್ಯವನ್ನು ನೀಡಿ ಇವರ ಕೈಯಿಂದ ಮತ್ತಷ್ಟು ಕಾದಂಬರಿಗಳು ಹೊರಬರುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ALSO READ: ಡಿಎಪಿ ಬದಲಾಗಿ ಸಂಯುಕ್ತ ರಸಗೊಬ್ಬರ ಬಳಸಿ | ಬಿ.ಮಂಜುನಾಥ್
ಮದಕರಿ ಸಾಂಸ್ಕøತಿಕ ಕೇಂದ್ರದ ಗೋಪಾಲಸ್ವಾಮಿ ನಾಯಕ್ ಮಾತನಾಡಿದರು.
ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲ್ಲೂಕು ಅಧ್ಯಕ್ಷ ಪ್ರಶಾಂತ್, ಪತ್ರಕರ್ತ ಮೇಘಗಂಗಾಧರ ನಾಯ್ಕ್, ನಗರಸಭೆ ಮಾಜಿ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ಸಂಪತ್ ಕುಮಾರ್, ಅಂಜಿನಪ್ಪ, ಖುದ್ದೂಸ್, ತಿಪ್ಪೇಸ್ವಾಮಿ, ಕುಮಾರ್ ಗೌಡ, ಶಿವಕುಮಾರ್, ಭವಾನಿ ಮಂಜುನಾಥ್, ಮದಕರಿನಾಯಕ ವಂಶಸ್ಥರಾದ ರಾಜಮದಕರಿನಾಯಕ ಮತ್ತಿತರರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
