ಚಿತ್ರದುರ್ಗ ನ್ಯೂಸ್.ಕಾಂ: ನಗರದ ಪ್ರವಾಸಿ ಮಂದಿರದಲ್ಲಿ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹಿಂದುಳಿದ ವರ್ಗಗಳ ಸಣ್ಣ ಸಮುದಾಯಗಳ ಪ್ರಮುಖರ ಸಭೆ ನಡೆಸಿದರು.
ಸೆಪ್ಟೆಂಬರ್ 9 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಿಂದುಳಿದ ವರ್ಗಗಳ ಸಣ್ಣ ಸಣ್ಣ ಸಮುದಾಯಗಳ ಸಮಾನ ಮನಸ್ಕರ ಸಭೆ ಹಮ್ಮಿಕೊಂಡಿದ್ದು, ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
ಯಾವುದೇ ಸರ್ಕಾರ ಇದ್ದರೂ ಪ್ರಬಲರು ಬಹುಪಾಲು ಸೌಲಭ್ಯ ತೆಗೆದುಕೊಳ್ಳುತ್ತಾರೆ. ಆದರೆ, ಸಣ್ಣ ಸಮುದಾಯಗಳ ಪಾಲು ಕಡಿಮೆ. ಹೀಗಾಗಿ ಸಮಾನ ಮನಸ್ಕರು ಸೇರಿ ಸಂಘಟನೆಯಾಗಿ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು.
ಚಿತ್ರದುರ್ಗ ಭಾಗದಲ್ಲಿ ಗೊಲ್ಲ ಸಮುದಾಯ ಹಿಂದುಳಿದ ಪ್ರಬಲ ಸಮುದಾಯವಾಗಿದೆ. ಇದೇ ರೀತಿ ಬೇರೆ ಬೇರೆ ಭಾಗಗಳಲ್ಲಿ ಒಂದೊಂದು ಸಣ್ಣ ಸಮುದಾಯ ಪ್ರಬಲವಾಗಿರುತ್ತದೆ. ಅವರ ನೇತೃತ್ವದಲ್ಲಿ ಇತರೆ ಹಿಂದುಳಿದ ಸಮುದಾಯಗಳು ಒಂದಾಗಿ ಸಂಘಟಿತರಾಗಬೇಕು ಎಂದರು.
ಹಿಂದುಳಿದ ಸಮುದಾಯಗಳು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಯಾರನ್ನು ಬೇಕಾದರೂ ಸೋಲಿಸುವ ಶಕ್ತಿ ಸಣ್ಣ ಸಮುದಾಯಗಳಿಗೆ ಇದೆ ಎಂದರು.
ಎರಡು ಸಮುದಾಯಗಳು ತೆಗೆದುಕೊಂಡ ದೊಡ್ಡ ನಿರ್ಧಾರದಿಂದ ಬಿಜೆಪಿ ರಾಜ್ಯದಲ್ಲಿ ಸೋತಿದೆ. ಅಲ್ಪ ಸಂಖ್ಯಾತರು, ದಲಿತರು, ಆದಿವಾಸಿಗಳು ಬದುಕು ಕಷ್ಟ ಅನ್ನಿಸಿದಾಗ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ತೀರ್ಮಾನವನ್ನು ಸಣ್ಣ ಸಮುದಾಯಗಳೂ ತೆಗೆದುಕೊಳ್ಳಬೇಕು.
ಲೋಕಸಭಾ ಚುನಾವಣೆ ಒಳಗಾಗಿ ಶಕ್ತಿ ಪ್ರದರ್ಶನ ಆದರೆ ಅನುಕೂಲ, ಆಮೇಲೆ ಯಾರು ಮಾತನಾಡಿಸುವುದಿಲ್ಲ. ಮಠಾಧೀಶರು ನಮ್ಮ ಜೊತೆಗೆ ಇರುತ್ತಾರೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀನಾಥ್ ಮಾತನಾಡಿ, ಕಾಂಗ್ರೆಸ್ ದೊಡ್ಡ ಪಕ್ಷ, ಸಣ್ಣ ಸಮುದಾಯಗಳ ಹಿತ ಕಾಯುವುದನ್ನು ಹಿಂದೆ ಮಾಡಿದೆ. ಆದರೆ, ಈಗ ಪ್ರಭಾವಿ ಸಮುದಾಯಗಳ ಹಿಡಿತದಲ್ಲಿದೆ ಎಂದರು.
ಈಗಾಗಲೇ ಅಹಿಂದ ಎಂದು ಹೋಗಿ ಮೋಸ ಆಗಿದೆ. ಹಿಂದುಳಿದವರ ನಾಯಕರಾಗಿ ಹರಿಪ್ರಸಾದ್ ಮಾತ್ರ ಕಾಣುತ್ತಿದ್ದಾರೆ. ಸಣ್ಣ, ಅತೀ ಸಣ್ಣ ಸಮುದಾಯಗಳಿಗೆ ನಾಯಕರಿಲ್ಲ. ಹೀಗಾಗಿ ಎಲ್ಲರೂ ಬಹಿರಂಗವಾಗಿ ಹೊರಗೆ ಬರಬೇಕು. 9 ನೇ ತಾರೀಖು ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಶಕ್ತಿ ತುಂಬಿ ಎಂದು ಮನವಿ ಮಾಡಿದರು.
ಈಡಿಗ ಮಹಾಮಂಡಳಿಯ ಎಚ್. ವೈ.ಆನಂದಪ್ಪ ಮಾತನಾಡಿ, ಈಡಿಗ ಸೇರಿದಂತೆ ಹಿಂದುಳಿದ ಸಣ್ಣ ಸಮುದಾಯಗಳಿಗೆ ಯಾವುದೇ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದರು.
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.
https://chat.whatsapp.com/EQUQpKalYFT1fVcJDTDjCk)



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
