CHITRADURGA NEWS | 06 FEBRUARY 2026
ಚಿತ್ರದುರ್ಗ: ನಾಟಕಗಳಲ್ಲಿ ಹೇಗೆ ಅಭಿನಯಿಸಬೇಕೆಂಬುದನ್ನು ಕಲಿಸುತ್ತಿದ್ದ ಅಶೋಕ್‍ಬಾದರದಿನ್ನಿ ಸಿರಿಗೆರೆ, ಸಾಣೆಹಳ್ಳಿ, ಮುರುಘಾಮಠದಲ್ಲಿ ನಾಟಕಗಳನ್ನು ಆಡಿದ್ದಾರೆ. ಇಂಥವರನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ತಿಳಿಸಿದರು.
ಇದನ್ನೂ ಓದಿ: ಜಮೀನುಗಳ ಸುರಕ್ಷತೆಗಾಗಿ ಭೂ ಸುರಕ್ಷಾ ಯೋಜನೆ | ಎಲ್ಲ ದಾಖಲೆಗಳು ಆನ್‌ಲೈನ್‌ನಲ್ಲೇ ಲಭ್ಯ | ಕಂದಾಯ ಸಚಿವ ಕೃಷ್ಣಭೈರೇಗೌಡ
ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯದ ಸಹಯೋಗದಲ್ಲಿ ಬಾಪೂಜಿ ಕಾಲೇಜಿನಲ್ಲಿ ಅಶೋಕ್ ಬಾದರದಿನ್ನಿ ಅವರ 75ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಮ್ಯವಾಗಿರುವ ನಾಟಕ ಕಣ್ಣು, ಮನಸ್ಸುಗಳಿಗೆ ಆಪ್ಯಾಯಮಾನವಾದ ಸಂದೇಶಗಳನ್ನು ನೀಡುತ್ತದೆ. ಕಾವ್ಯ ರಂಗಕಲೆ ಉತ್ಕøಷ್ಟವಾದುದು. ಎರಡು ಸಾವಿರ ವರ್ಷಗಳ ಹಿಂದಿನ ಕವಿ ಕಾಳಿದಾಸ ಸಂಸ್ಕøತದಲ್ಲಿ ನಾಟಕಗಳನ್ನು ಬರೆಯುತ್ತಿದ್ದರು ಎಂದರು.
ಹದಿನೆಂಟನೆ ಶತಮಾನದಲ್ಲಿ ವಿಲಿಯಂ ಜೋನ್ಸ್ ಸಂಸ್ಕøತ ನಾಟಕಗಳನ್ನು ಫ್ರೆಂಚ್, ಇಂಗ್ಲಿಷ್‍ಗೆ ಅನುವಾದಿಸುತ್ತಿದ್ದರು. ಹಳ್ಳಿ ಮತ್ತು ಪೇಟೆಯಲ್ಲಿ ನಾಟಕಗಳು ಇಂದಿಗೂ ಉಳಿದುಕೊಂಡಿದೆ. ಅಶೋಕ್‍ಬಾದರದಿನ್ನಿ ಅವರಂಥ ಶ್ರೇಷ್ಠ ನಾಟಕಕಾರನನ್ನು ಎಲ್ಲರೂ ಸ್ಮರಿಸಿಕೊಳ್ಳಲೇಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಗೆ ಕೇಂದ್ರ ಕೈಗೊಂಡ ಕ್ರಮಗಳ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಜೆ.ಪಿ.ನಡ್ಡಾ ಮಾಹಿತಿ
ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಮಾತನಾಡಿ, ಶ್ರೇಷ್ಠ ಕಲಾವಿದ, ಉತ್ಕೃಷ್ಟ ನಾಟಕಕಾರ ಅಶೋಕ್‍ಬಾದರದಿನ್ನಿ ಅವರನ್ನು ನೆನಪು ಮಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು.
ಸಿರಿಗೆರೆ, ಸಾಣೆಹಳ್ಳಿ, ಮುರುಘಾಮಠದಲ್ಲಿ ರಂಗ ನಿರ್ದೇಶಕರಾಗಿದ್ದ ಅಶೋಕ್ ಸಾಮ್ರಾಟ್ ಅಶೋಕ್ ಬಾದರದಿನ್ನಿ ಅವರು ನಮ್ಮ ಸಂಸ್ಥೆಯಲ್ಲಿಯೂ ಸೇವೆ ಸಲ್ಲಿಸಿ ನೂರಾರು ಪ್ರಶಿಕ್ಷಣಾರ್ಥಿಗಳಿಗೆ ರಂಗಕಲೆಯನ್ನು ಹೇಳಿಕೊಟ್ಟಿದ್ದಾರೆ. ಅವರ ಬಸವೇಶ್ವರ ನಾಟಕ ಬಾಂಬೆ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಪ್ರದರ್ಶನಗೊಂಡಿದೆ. ದಿಗ್ಗಜ ಅಶೋಕ್‍ಬಾದರದಿನ್ನಿ ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಕೇವಲ ರಂಗಭೂಮಿಯಲ್ಲಷ್ಟೆ ಅಲ್ಲ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆಂದು ಸ್ಮರಿಸಿದರು.
ರಂಗಭೂಮಿ ಕಲಾವಿದ ಸಿ.ಪಿ.ಜ್ಞಾನದೇವ್ ಮಾತನಾಡಿ, ನಾನೊಬ್ಬ ಕಲಾವಿದನಾಗಲು ಅಶೋಕ್‍ಬಾದರದಿನ್ನಿ ಕಾರಣ. ಅವರಿಂದ ರಂಗಕಲೆಗೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಕನ್ನಡ ರಂಗಭೂಮಿ ಇತಿಹಾಸ ಗುರುತಿಸುವುದು ಕಷ್ಟ. ಪೂರ್ವಜರ ಕಾಲದಿಂದಲೂ ನಾಟ್ಯ ಮಾಡುವವರೆಲ್ಲಾ ನಾಟಕಕಾರರು. ಆಧುನಿಕ ರಂಗಭೂಮಿ ಹೊಸ ಆಯಾಮದೊಂದಿಗೆ ಪರಿಷ್ಕøತಗೊಂಡಿದೆ. ಕಾವ್ಯವನ್ನು ನಾಟಕವಾಗಿ ನೋಡಬಲ್ಲ ದೊಡ್ಡ ಶಕ್ತಿ ರೂಪಿಸಿದ್ದು, ರನ್ನ ಎಂದು ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 06 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾಲೇಜು ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ, ಉಪ ಪ್ರಾಚಾರ್ಯ ಎಚ್.ಎನ್.ಶಿವಕುಮಾರ್, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಅಶೋಕ್ ಬಾದರದಿನ್ನಿ ಪುತ್ರ ಪ್ರಕಾಶ್ ಬಾದರದಿನ್ನಿ ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
