
CHITRADURGA NEWS | 17 MARCH 2025
ಹೊಸದುರ್ಗ: ಹೊಸದುರ್ಗ ಕೃಷಿ ಇಲಾಖೆಯಿಂದ 2024- 25ನೇ ಸಾಲಿನ ಲಘು ನೀರಾವರಿ ಘಟಕವನ್ನು (sprinkler irrigation) ಸಹಾಯಧನದಲ್ಲಿ ವಿತರಿಸಲಾಗುತ್ತಿದ್ದು, ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ.
Also Read: ಜನಸಾಗರದಲ್ಲಿ ರಾಜಗಾಂಭೀರ್ಯದಲ್ಲಿ ಸಾಗಿದ ನಾಯಕನಹಟ್ಟಿ ತೇರು | ಅದ್ದೂರಿ ರಥೋತ್ಸವಕ್ಕೆ ಅಸಂಖ್ಯ ಭಕ್ತರು

ರೈತರು ಈ ಕೆಳಕಂಡ ತಮ್ಮ ದಾಖಲಾತಿಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡಿ FRUITS ತಂತ್ರಾಂಶದಲ್ಲಿ ನೋಂದಣಿ (ONLINE) ಮಾಡಿಸಿ ರೈತರ ವಂತಿಕೆಯನ್ನು ಪಾವತಿಸಿ ನಂತರ ಪಡೆಯುವುದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಹಣಿ (RTC) (ತುಂತುರು ನೀರಾವರಿ ಘಟಕಗಳಿಗೆ ಒಂದು ಎಕರೆ ಮೇಲಿನ ಪಹಣಿ ನೀಡುವುದು), ಪಾಸ್ಪೋರ್ಟ್ ಸೈಜ್ ಫೋಟೋ 2, ಕೊಳವೆ ಬಾವಿ ದೃಢೀಕರಣ ಪತ್ರ (VA ಇಂದ) ತುಂತುರು ನೀರಾವರಿ ಘಟಕಕ್ಕೆ ಮಾತ್ರ), ಛಾಪಾಕಾಗದ 20ರೂ (ಮೊದಲನೆಯ ವ್ಯಕ್ತಿ ರೈತರು, ಎರಡನೇ ವ್ಯಕ್ತಿ ADA Hosadurga ), ಅರ್ಜಿ ಪ್ರತಿ (ಲಘು ನೀರಾವರಿ ಘಟಕಕ್ಕೆ), FID ಜೆರಾಕ್ಸ್ ಸಲ್ಲಿಸಬೇಕು.
ಮೇಲಿನ ದಾಖಲಾತಿಗಳೊಂದಿಗೆ ರೈತ ಸಂಪರ್ಕ ಕೇಂದ್ರ ಕಚೇರಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಂಡು ಸೌಲಭ್ಯ ಪಡೆಯಬಹುದು.
Also Read: ನಾಯಕನಹಟ್ಟಿ ಜಾತ್ರೆಯ ದೃಶ್ಯ ವೈಭವ | ಇಡೀ ಜಾತ್ರೆ ಕಣ್ತುಂಬಿಕೊಳ್ಳುವ ಸುಂದರ ಪೋಟೋಗಳು
ಹೆಚ್ಚಿನ ಮಾಹಿತಿಗಾಗಿ ಹೊಸದುರ್ಗ ರೈತ ಸಂಪರ್ಕ ಕೇಂದ್ರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
